Breaking News

ಉಪ್ಪಿನಂಗಡಿಯಲ್ಲಿ ನೆರೆ ಸಂತ್ರಸ್ತರಿಗೆ ಪರಿಹಾರ ಚೆಕ್ ವಿತರಣೆ

Puttur_Advt_NewsUnder_1
Puttur_Advt_NewsUnder_1


ಉಪ್ಪಿನಂಗಡಿ: 10 ದಿನಗಳ ಹಿಂದೆ ಸುರಿದ ಮಳೆ ಮತ್ತು ಪ್ರವಾಹ, ನೇತ್ರಾವತಿ ನದಿಯ ನೆರೆ ನೀರು ಮನೆಗಳಿಗೆ ನುಗ್ಗಿ ಸಂಕಷ್ಟಕ್ಕೆ ಒಳಗಾಗಿದ್ದ ಉಪ್ಪಿನಂಗಡಿ ಗ್ರಾಮದ 33 ಮಂದಿ ಸಂತ್ರಸ್ತರಿಗೆ ಪರಿಹಾರ ಚೆಕ್‌ನ್ನು ಶಾಸಕ ಸಂಜೀವ ಮಟಂದೂರು ಆ. 17ರಂದು ವಿತರಿಸಿದರು.

ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸರಳ ಕಾರ್‍ಯಕ್ರಮದಲ್ಲಿ ಶಾಸಕರು ಉಪ್ಪಿನಂಗಡಿಯ ರಥ ಬೀದಿ, ಹಳೇಗೇಟು, ನೆಕ್ಕಿಲಾಡಿ ಪರಿಸರದ ಒಟ್ಟು 33 ಮಂದಿಗೆ ತಲಾ 10 ಸಾವಿರ ರೂಪಾಯಿ ಮೌಲ್ಯದ ಚೆಕ್ ವಿತರಿಸಿ, ಸಾಂತ್ವಾನ ಹೇಳಿದರು.

ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಯು.ಕೆ. ಇಬ್ರಾಹಿಂ, ಸುನಿಲ್ ಕುಮಾರ್ ದಡ್ಡು, ಉಪ್ಪಿನಂಗಡಿ ಸಿ.ಎ. ಬೇಂಕ್ ಉಪಾಧ್ಯಕ್ಷ ಯತೀಶ್ ಶೆಟ್ಟಿ, ತಹಸೀಲ್ದಾರ್ ಅನಂತ ಶಂಕರ, ಕಂದಾಯ ನಿರೀಕ್ಷಕ ಜಯ ವಿಕ್ರಂ, ನೆಕ್ಕಿಲಾಡಿ ಗ್ರಾಮಕರಣಿಕ ರಮಾನಂದ ಚಕ್ಕಡಿ, ಸಹಾಯಕ ಯತೀಶ್ ಉಪಸ್ಥಿತರಿದ್ದರು.

ಹೆಸರು ಬಿಟ್ಟು ಹೋಗಿದೆ, ಶಾಸಕರಿಗೆ ದೂರು:
ಸಭೆಗೆ ಬಂದಿದ್ದ ಸಂತ್ರಸ್ತ ಮಹಿಳೆ ಸಮೀಮ ಎಂಬವರು “ನನ್ನ ಮನೆ ಮುಳುಗಡೆ ಆಗಿತ್ತು, ನಾನು ಪುಳಿತ್ತಡಿ ಪರಿಹಾರ ಕೇಂದ್ರದಲ್ಲಿ ವಾಸ್ತವ್ಯ ಇದ್ದೆ, ಮೊನ್ನೆ ಅಲ್ಲಿಗೆ ಬಂದ  ಅಧಿಕಾರಿ ನನ್ನ ಹೆಸರು ಬರೆದುಕೊಂಡು ಹೋಗಿದ್ದಾರೆ, ಆದರೆ ಇಂದು ನನಗೆ ಪರಿಹಾರ ದೊರಕಲಿಲ್ಲ” ಎಂದು ಶಾಸಕರೊಂದಿಗೆ ಅಳಲು ತೋಡಿಕೊಂಡರು, ಶಾಸಕರು ತಹಸೀಲ್ದಾರ್ ಈ ಬಗ್ಗೆ ಕ್ರಮಕೈಗೊಳ್ಳುವಂತೆ ಸೂಚಿಸಿದರು. ಈ ಮಧ್ಯೆ ಶ್ಯಾಮಲ ಎಂಬವರಿಗೆ ನೀಡಿದ ಚೆಕ್‌ನಲ್ಲಿ ವನಮಾಲ ಎಂದು ಹೆಸರು ಇದ್ದು, ಅವರೂ ತನಗಾಗಿರುವ ಸಮಸ್ಯೆಯನ್ನು ಶಾಸಕರ ಗಮನ ಸೆಳೆದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.