ಸೆ.1: ಹೊಸಮ್ಮ ಸನ್ನಿಧಿಯಲ್ಲಿ 4ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಕ್ರೀಡಾಕೂಟ – ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು: ಸತತ ಮೂರು ವರುಷಗಳಿಂದ ಪಳ್ಳತಡ್ಕ ಹೊಸಮ್ಮ ಕ್ಷೇತ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯು ವಿಜೃಂಭಣೆಯಿಂದ ನಡೆದು ಬರುತ್ತಿದ್ದು ಈ ವರ್ಷದ ನಾಲ್ಕನೇ ಅವಧಿಯ ಕ್ರೀಡೋತ್ಸವ ಬರುವ ಸೆ. 1 ರಂದು ಪಳ್ಳತಡ್ಕದ ಹೊಸಮ್ಮ ದೈವಸ್ಥಾನದ ವಠಾರದ ಕ್ರೀಡಾಂಗಣದಲ್ಲಿ ನಡೆಯಲಿದೆ. ಅದರ ಪ್ರಯುಕ್ತವಾಗಿ ಆಮಂತ್ರಣ ಪತ್ರಿಕೆಯನ್ನು ಶ್ರೀ ಹೊಸಮ್ಮ ದೇವರಿಗೆ ಸಂಕ್ರಮಣದ ವಿಶೇಷ ಪೂಜೆಯನ್ನು ಮಾಡಿ ಯುವವಾಹಿಣಿಯ ಕೇಂದ್ರ ಸಮಿತಿಯ ಅಧ್ಯಕ್ಷರ ಉಪಸ್ಥಿತಿಯಲ್ಲಿ ಪಳ್ಳತಡ್ಕ ಹೊಸಮ್ಮ ಸನ್ನಿಧಿಯಲ್ಲಿ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಹೊಸಮ್ಮ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿರುವ ಜಯರಾಮ ರೈ ಬಲಜ್ಜ, ದೈವಸ್ಥಾನದ ಕಾರ್ಯದರ್ಶಿ ಗೋಪಾಲಕೃಷ್ಣ ಪೂಜಾರಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿರುವ ಉದ್ಯಮಿ ಜಯಂತ್ ನಡುಬೈಲು , ಶ್ರೀ ಕೃಷ್ಣ ಜನ್ಮಾಷ್ಟಮಿ 2019ರ ಅಧ್ಯಕ್ಷರಾದ ಬಾಲಕೃಷ್ಣ ಪೂಜಾರಿ ಪಳ್ಳತಡ್ಕ, ಉಪಾಧ್ಯಕ್ಷರಾದ ದಿವಾಕರ ಪೂಜಾರಿ ಪಳ್ಳತಡ್ಕ, ಕ್ರೀಡೋತ್ಸವದ ಸಂಚಾಲಕರಾದ ದಿನೇಶ್ ಕೇಪು, ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಪಳ್ಳತಡ್ಕ ತಂಡದ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.