ಎರಡು ದಿನವಾದರೂ ಲಭ್ಯವಾಗಿಲ್ಲ ಉಳ್ಳಾಲ ಸೇತುವೆ ಬಳಿ ನಾಪತ್ತೆಯಾದ ನೂಜಿಬಾಳ್ತಿಲದ ಯುವಕನ ಸುಳಿವು!

Puttur_Advt_NewsUnder_1
Puttur_Advt_NewsUnder_1

ಕಡಬ:ಮಂಗಳೂರಿನ ಉಳ್ಳಾಲ ಸೇತುವೆ ಬಳಿ ತನ್ನ ಬೈಕ್ ನಿಲ್ಲಿಸಿ ಆ.16 ರಾತ್ರಿಯಿಂದ ನಾಪತ್ತೆಯಾಗಿರುವ ನೂಜಿಬಾಳ್ತಿಲದ ಯುವಕ ಸದಾಶಿವ ಅವರ ಕುರಿತ ಯಾವುದೇ ಸುಳಿವು ಇನ್ನೂ ಲಭ್ಯವಾಗಿಲ್ಲ.ಆ.18ರಂದು ದಿನವಿಡೀ ಬೋಟ್ ಮೂಲಕ ಹುಡುಕಾಟ ನಡೆಸಲಾಗಿತ್ತು ಅಲ್ಲದೆ ಮೀನುಗಾರರು ಕೂಡ ಹುಡುಕಾಟ ನಡೆಸಿದ್ದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ನೂಜಿಬಾಳ್ತಿಲ ಗ್ರಾಮದ ಕೊಡೆಂಕಿರಿ ದಾಮೋದರ ಗೌಡ ಎಂಬವರ ಪುತ್ರ ಸದಾಶಿವ(28ವ.)ಎಂಬವರು ಮಂಗಳೂರಿನಲ್ಲಿ ರೈಲ್ವೇ ವಾಟರ್ ಹಾರ್ವೆಸ್ಟಿಂಗ್ ಸಿಸ್ಟಮ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿಕೊಂಡಿದ್ದರು.ಆ.16ರಂದು ರಾತ್ರಿಯಿಂದ ಅವರು ನಾಪತ್ತೆಯಾಗಿದ್ದು ಬೈಕ್ ಉಳ್ಳಾಲ ಸೇತುವೆ ಬಳಿಯಲ್ಲಿ ಪತ್ತೆಯಾಗಿತ್ತು.ಈ ಬಗ್ಗೆ ಸದಾಶಿವ ಅವರ ಅಣ್ಣ ದಿನೇಶ್ ಎಂಬವರು ನೀಡಿದ ದೂರಿನಂತೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2 ದಿನ ಕಳೆದರೂ ಪತ್ತೆಯಾಗಲಿಲ್ಲ!: ಸದಾಶಿವ ಅವರು ಬೈಕನ್ನು ಉಳ್ಳಾಲ ಸೇತುವೆ ಬಳಿ ನಿಲ್ಲಿಸಿರುವುದರಿಂದ ಅವರು ನದಿ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಬಲವಾದ ಸಂಶಯದಿಂದ ಕಳೆದ ಎರಡು ದಿನಗಳಿಂದ ನದಿ ನೀರಿನಲ್ಲಿ ವ್ಯಾಪಕ ಶೋಧ ಕಾರ್‍ಯ ನಡೆಸಲಾಗುತ್ತಿದೆ.ಆ.18ರಂದು 4 ಬೋಟ್ ಹಾಗೂ ಪ್ರತ್ಯೇಕವಾಗಿ ಅಲ್ಲಿನ ಮೀನುಗಾರರು ಕೂಡ ತಮ್ಮ ಕೆಲಸದ ಜತೆಗೆ ಪತ್ತೆ ಕಾರ್‍ಯದಲ್ಲಿ ತೊಡಗಿದ್ದಾರೆ.

ಕಡಬ ಪರಿಸರದ ಸುಮಾರು ಎಂಟು ಮಂದಿ ಮಿತ್ರರೊಂದಿಗೆ ಮಂಗಳೂರಿನ ಪಡೀಲ್ ಎಂಬಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿದ್ದ ಸದಾಶಿವ ಅವರು ನಾಪತ್ತೆಯಾಗಿರುವ ಬಗ್ಗೆ ಯಾವುದೇ ಸುಳಿವು ಸಿಗದಿರುವುದು ಅವರ ಕುಟುಂಬಸ್ಥರಲ್ಲಿ ಆತಂಕ ಮೂಡಿಸಿದೆ.ತಜ್ಞರ ಪ್ರಕಾರ, ಯಾರೇ ವ್ಯಕ್ತಿ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರೂ ಸಾಧಾರಣ ೨೪ ಗಂಟೆ ಆಸುಪಾಸಿನಲ್ಲಿ ಅವರ ಶವ ಪತ್ತೆಯಾಗುತ್ತದೆ.ಅದರಂತೆ ಸದಾಶಿವರವರು ಒಂದು ವೇಳೆ ನದಿ ನೀರಿಗೆ ಧುಮುಕ್ಕಿದ್ದರೂ 2 ದಿನ ಕಳೆದರೂ ಪತ್ತೆಯಾಗದಿರುವುದು ಅವರ ಕುಟುಂಬದವರಲ್ಲಿ ಆತಂಕ ಸೃಷ್ಟಿಸಿದೆ.

ಸಂಶಯಕ್ಕೆಡೆ ಮಾಡಿರುವುದರಿಂದ ತನಿಖೆಯಾಗಲಿ: ಸಹೋದರನ ಆಗ್ರಹ
ಈ ಮಧ್ಯೆ ಸದಾಶಿವ ಅವರ ನಾಪತ್ತೆ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುವಂತೆ ಅವರ ಸಹೋದರ ದಿನೇಶ್‌ರವರು ಆಗ್ರಹಿಸಿದ್ದಾರೆ.ಸುದ್ದಿಯೊಂದಿಗೆ ಮಾತನಾಡಿದ ದಿನೇಶ್, ‘ನನ್ನ ಸಹೋದರ ನಾಪತ್ತೆಯಾಗಿರುವುದು ಬಹಳ ಸಂಶಯಕ್ಕೆ ಎಡೆ ಮಾಡಿಕೊಡುತ್ತಿದೆ.ಈ ಬಗ್ಗೆ ಪೊಲೀಸರಿಂದಲೇ ಸಮಗ್ರ ತನಿಖೆ ನಡೆದರೆ ಮಾತ್ರ ಸತ್ಯ ಗೊತ್ತಾಗಬಹುದು, ಈ ಬಗ್ಗೆ ಆ.೧೯ರಂದು ಪೋಲಿಸರೊಂದಿಗೆ ಮಾತುಕತೆ ನಡೆಸಲಾಗುವುದು, ಏನಾದರೂ ನಮಗೆ ಕಾರಣ ಗೊತ್ತಾಗಬೇಕು,ಸದಾಶಿವಗೆ ಆರ್ಥಿಕ ಸಮಸ್ಯೆ ಇರಲಿಲ್ಲ, ಬೇರೆ ಏನಾದರೂ ಸಮಸ್ಯೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದಾ? ಒಂದು ವೇಳೆ ನದಿ ನೀರಿಗೆ ಹಾರಿದ್ದರೂ ೨ ದಿನ ಕಳೆದರೂ ಪತ್ತೆಯಾಗದಿರುವುದು ನಮ್ಮನ್ನು ಚಿಂತೆಗೀಡು ಮಾಡಿದೆ,ಏನಿದ್ದರೂ ನಮಗೆ ಸತ್ಯ ಗೊತ್ತಾಗಬೇಕು’ ಎಂದು ಆಗ್ರಹಿಸಿದ್ದಾರೆ.

ಈ ಬಗ್ಗೆ ಕಂಕನಾಡಿ ನಗರ ಠಾಣೆಯ ಎಸ್.ಐ ಅಶೋಕ್ ಅವರು ಪ್ರತಿಕ್ರಿಯೆ ನೀಡಿ ‘ಸದಾಶಿವ ಅವರ ನಾಪತ್ತೆ ಪ್ರಕರಣವನ್ನು ತನಿಖೆ ನಡೆಸುತ್ತಿದ್ದೇವೆ,ಅವರ ಫೋನ್ ಕಾಲ್‌ಗಳ ಬಗ್ಗೆ ತನಿಖೆ ನಡೆಸುತ್ತಿದ್ದೇವೆ, ಮೇಲ್ನೋಟಕ್ಕೆ ಯಾವುದೇ ಸಂಶಯಗಳು ಕಂಡು ಬಂದಿಲ್ಲ, ನಾಪತ್ತೆ ಪ್ರಕರಣವನ್ನು ಭೇದಿಸಲು ಎಲ್ಲ ರೀತಿಯ ತನಿಖೆಯನ್ನೂ ಮಾಡಲಾಗುವುದು ಅಲ್ಲದೆ ನೇತ್ರಾವತಿ ನದಿಯಲ್ಲಿ ಹುಡುಕಾಟ ನಡೆಸುತ್ತಿzವೆ ಇದುವರೆಗೂ ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ಅವರು ಹೇಳಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.