ಪಡುಬೆಟ್ಟು: ‘ಕೆಸರ್‌ಡೊಂಜಿ ದಿನ’-ಆಟೋಟ ಸ್ಪರ್ಧೆ

Puttur_Advt_NewsUnder_1
Puttur_Advt_NewsUnder_1


ನೆಲ್ಯಾಡಿ: ಶ್ರೀ ಮಹಾವಿಷ್ಣು ಗೆಳೆಯರ ಬಳಗ ಪಡುಬೆಟ್ಟು ಮತ್ತು ಊರ ಹತ್ತು ಸಮಸ್ತರ ಆಶ್ರಯದಲ್ಲಿ ‘ಕೆಸರ್‌ಡೊಂಜಿ ದಿನ’ಸ್ಥಳೀಯರಿಗೆ ವಿವಿಧ ಆಟೋಟ ಸ್ಪರ್ಧೆಗಳು ಆ.18ರಂದು ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಎದುರು ಗದ್ದೆಯಲ್ಲಿ ನಡೆಯಿತು.
ಬೆಳಿಗ್ಗೆ ನಡೆದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ ವಹಿಸಿದ್ದರು. ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಕೆ.ಸುಬ್ರಹ್ಮಣ್ಯ ಶಬರಾಯ, ಪ್ರಧಾನ ಅರ್ಚಕ ಬಿ.ಕೆ. ಶ್ರೀನಿವಾಸ್‌ರಾವ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯರಾಮ ಶೆಟ್ಟಿ, ಎಸ್‌ಕೆಡಿಎಸ್‌ನ ಮೋಹನ್ ರೈ ಆಮುಂಜ ಶುಭಹಾರೈಸಿದರು. ಪಡುಬೆಟ್ಟು ಮಹಾವಿಷ್ಣು ಗೆಳೆಯರ ಬಳಗದ ಸದಸ್ಯ ಯಶೋಧರ ಶೆಟ್ಟಿ ಆಮುಂಜ ಸ್ವಾಗತಿಸಿ, ಅಧ್ಯಕ್ಷ ಸಂದೇಶ ಶೆಟ್ಟಿ ವಂದಿಸಿದರು. ಸದಸ್ಯ ಶಿವಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಕೆಸರು ಗದ್ದೆಯಲ್ಲಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಲಾಯಿತು.
ಆಟೋಟ ಸ್ಪರ್ಧೆ:
ಕೆಸರುಗದ್ದೆಯಲ್ಲಿ ಪ್ರಾಥಮಿಕ ಶಾಲಾ ವಿಭಾಗದ ಮಕ್ಕಳಿಗೆ 100 ಮೀ.ಓಟ, ಜನಕಂಬಳ, ಹಾಳೆ ಓಟ, ಬಾಳೆಮರ ಹತ್ತುವುದು, ಉಪ್ಪು ಮೂಟೆ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 100 ಮೀ.ಓಟ, ಜನಕಂಬಳ, ಹಾಳೆ ಓಟ, ಉಪ್ಪು ಮೂಟೆ, ಟಪ್ಪಾಂಗಾಯಿ, ಮಹಿಳೆಯರಿಗೆ ಗುಂಡೆಸೆತ, ಹಗ್ಗಜಗ್ಗಾಟ, ಬಾಲ್ ಪಾಸಿಂಗ್, ಸಂಗೀತ ಕುರ್ಚಿ, ಮಡಕೆ ಒಡೆಯುವುದು, ಬಿಂದಿಗೆ ಓಟ, ಹಿಮ್ಮುಖ ಓಟ, ಪುರುಷರಿಗೆ ಗುಂಡೆಸೆತ, ಹಗ್ಗಜಗ್ಗಾಟ, ಗೋಣಿಚೀಲ ಓಟ, ಜನಕಂಬಳ, ಮಡಕೆ ಒಡೆಯುವುದು, ಕಬಡ್ಡಿ, ವಾಲಿಬಾಲ್, ಅಟ್ಟಿ ಮಡಿಕೆ ಒಡೆಯುವ ಸ್ಪರ್ಧೆಗಳು ನಡೆಯಿತು. ಹಗ್ಗಜಗ್ಗಾಟ ಪಂದ್ಯಾಟದ ನಿರೂಪಕ ಸುರೇಶ್ ಪಡಿಪಂಡ ಸ್ಪರ್ಧಾ ಕಾರ್ಯಕ್ರಮ ನಿರೂಪಿಸಿದರು. ಪಡುಬೆಟ್ಟು ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಕುಶಾಲಪ್ಪರವರು ತೀರ್ಪುಗಾರರಾಗಿ ಸಹಕರಿಸಿದರು.
ಸಮಾರೋಪ:
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು. ನೆಲ್ಯಾಡಿ ಶ್ರೀರಾಮ ವಿದ್ಯಾಲಯದ ಗೌರವಾಧ್ಯಕ್ಷ ಜಯಪ್ರಕಾಶ್ ನೆಕ್ರಾಜೆ, ಖ್ಯಾತ ಜ್ಯೋತಿಷಿ ಶ್ರೀಧರ ಗೋರೆ, ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಕಾಂತಪ್ಪ ಗೌಡ ಪೂವಾಜೆ, ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಸುಧೀರ್ ಕುಮಾರ್, ಮಹಾವಿಷ್ಣು ಗೆಳೆಯರ ಬಳಗದ ಕಾರ್ಯದರ್ಶಿ ಪ್ರವೀಣ್ ಬೀದಿಮಜಲು ಉಪಸ್ಥಿತರಿದ್ದರು. ರಮೇಶ್ ಶೆಟ್ಟಿ ಸ್ವಾಗತಿಸಿ, ಪ್ರವೀಣ್ ಕುಮಾರ್ ವಂದಿಸಿದರು. ಶಿವಪ್ರಸಾದ್ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.