ನೆಲ್ಯಾಡಿ: ಗಣೇಶೋತ್ಸವದ ಅಂಗವಾಗಿ ಆಟೋಟ ಸ್ಪರ್ಧೆ

Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನೆಲ್ಯಾಡಿ-ಕೌಕ್ರಾಡಿ ಇದರ ವತಿಯಿಂದ ಸೆ.2ರಂದು ನೆಲ್ಯಾಡಿಯಲ್ಲಿ ನಡೆಯುವ 37ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ಆ.18ರಂದು ನೆಲ್ಯಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ನೆಲ್ಯಾಡಿ ಹಾರ್ಪಳ ಶ್ರೀ ಶಾಸ್ತಾರೇಶ್ವರ ದೇವಸ್ಥಾನದ ಅಧ್ಯಕ್ಷ ಸುಂದರ ಗೌಡ ಅತ್ರಿಜಾಲು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸ್ಪರ್ಧೆಗಳಲ್ಲಿ ಜಯಗಳಿಸುವುದಕ್ಕಿಂತಲೂ ಭಾಗವಹಿಸುವಿಕೆ ಮುಖ್ಯವಾಗಿದೆ. ಸೋಲಿನಿಂದ ಧೃತಿಗೆಡಬಾರದು. ಅದು ಮುಂದಿನ ಗೆಲುವಿಗೆ ದಾರಿದೀಪವಾಗಲಿದೆ. ಆದ್ದರಿಂದ ಪ್ರತಿಯೊಬ್ಬರು ಕ್ರೀಡಾ ಮನೋಭಾವದೊಂದಿಗೆ ಭಾಗವಹಿಸಿ ಎಂದರು. ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸುಧೀರ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. 37ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಶಾಧಿಕಾರಿ ಗುಣಶೇಖರ ನೆಲ್ಯಾಡಿ, ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಕೋಶಾಧಿಕಾರಿ ಉದಯಕುಮಾರ್ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗಣೇಶೋತ್ಸವ ಸಮಿತಿ ಅಧ್ಯಕ್ಷ ರವಿಪ್ರಸಾದ್ ಶೆಟ್ಟಿ ರಾಮನಗರ ಸ್ವಾಗತಿಸಿ, ಕಾರ್ಯದರ್ಶಿ ಸುಬ್ರಹ್ಮಣ್ಯ ಜಿ.ಶಿವಕೃಪಾ ವಂದಿಸಿದರು. ಸುರೇಶ್ ಪಡಿಪಂಡ ನಿರೂಪಿಸಿದರು. ಸಾಹಿತಿ ಅಗ್ರಾಳ ನಾರಾಯಣ ರೈ, ಬಿಎಸ್‌ಎನ್‌ಎಲ್‌ನ ನಿವೃತ್ತ ಉದ್ಯೋಗಿ ರಾಕೇಶ್, ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಬಳಿಕ ಚಿಕ್ಕ ಮಕ್ಕಳಿಗೆ ಒಂದು ನಿಮಿಷದ ಸ್ಪರ್ಧೆ, ಕಪ್ಪೆ ಜಿಗಿತ, ಬಲೂನು ಊದುವುದು, ಬಿಸ್ಕೆಟ್ ತಿನ್ನುವುದು, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಭಕ್ತಿಗೀತೆ ಹಾಡುವುದು, ಭಾಷಣ ಸ್ಪರ್ಧೆ, ಪಟ್ಟಣಕ್ಕೆ ಬಾಂಬ್, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಭಕ್ತಿಗೀತೆ ಹಾಡುವುದು, ಭಾಷಣ ಸ್ಪರ್ಧೆ, ಕಬಡ್ಡಿ, ಪಟ್ಟಣಕ್ಕೆ ಬಾಂಬ್, ಸಾರ್ವಜನಿಕರಿಗೆ ಗಣಪತಿ ದೇವರ ಚಿತ್ರ ಬಿಡಿಸುವುದು, ಭಕ್ತಿಗೀತೆ ಹಾಡುವುದು, ಪುಷ್ಪಹಾರ ಕಟ್ಟುವುದು, ಪುರುಷರಿಗೆ ಹಗ್ಗ ಜಗ್ಗಾಟ, ಕಬಡ್ಡಿ, ಒಂದು ನಿಮಿಷದ ಸ್ಪರ್ಧೆ, ಮಹಿಳೆಯರಿಗೆ ಹಗ್ಗ ಜಗ್ಗಾಟ, ಪಟ್ಟಣಕ್ಕೆ ಬಾಂಬ್, ಒಂದು ನಿಮಿಷದ ಸ್ಪರ್ಧೆ ನಡೆಯಿತು. ಶಿಕ್ಷಕರಾದ ವಿಮಲ್‌ಕುಮಾರ್, ಜಯಂತಿ, ಜನಾರ್ದನ ಟಿ.,ಯವರು ತೀರ್ಪುಗಾರರಾಗಿ ಸಹಕರಿಸಿದರು. ಸುರೇಶ್ ಪಡಿಪಂಡ ಕ್ರೀಡಾಕೂಟ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.