ಸಸ್ವರೂಪದ ಸತ್ಯದ ಸಂಗ-ಕಿಶನ್.ಆರ್.ಬಿ.

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಸಸ್ವರೂಪದ ಸತ್ಯದ ಸಂಗ

ಒಂದು ಕಾಡು. ಆ ಕಾಡಿನಲ್ಲಿರುವ ಮರದ ಮೇಲೆ ಕಾಗೆಯೊಂದು ವಾಸವಿತ್ತು. ಅದರ ಸನಿಹದಲ್ಲಿದ್ದ ಮರದಲ್ಲಿ ಒಂದು ಪಾರಿವಾಳವೂ ಸಹ ವಾಸವಿತ್ತು. ಪಾರಿವಾಳವನ್ನು ಜನರೆಲ್ಲ ತುಂಬಾ ಪ್ರೀತಿಸುತ್ತಿದ್ದರು. ಜನರೆಲ್ಲ ಪಾರಿವಾಳವನ್ನು ಪ್ರೀತಿಸುವುದನ್ನು ನೋಡಿದ ಕಾಗೆಗೆ ತಾನು ಪಾರಿವಾಳದೊಡನೆ ಗೆಳೆತನವನ್ನು ಮಾಡಬೇಕೆನಿಸಿತು. ಪಾರಿವಾಳದ ಬಳಿ ಹೋಗಿ ಸ್ನೇಹದ ವಿನಂತಿ ಸಲ್ಲಿಸಿತು. ಜಾಗೆಯ ವಿನಂತಿಯನ್ನು ಕೇಳಿದ ಪಾರಿವಾಳ ಕಾಗೆಯೊಂದಿಗೆ ಸ್ನೇಹದಿಂದ ಇರಲು ಒಪ್ಪಿಕೊಂಡಿತು. ಆನಂತರ ಈ ಎರಡೂ ಪಕ್ಷಿಗಳು ಒಟ್ಟೊಟ್ಟಿಗೆ ಹಾರಾಡಿಕೊಂಡು ಆಟವಾಡಿಕೊಂಡು ಸಂತೋಷದಿಂದ ಇದ್ದವು.

ಹೀಗೇ ಇರಲು ಒಂದು ದಿನ ಮಧ್ಯಾಹ್ನದ ಸಮಯದಲ್ಲಿ ಅದೇ ಮಾರ್ಗದಲ್ಲಿ ಬಂದ ರಾಜ ಪರಿವಾರವೊಂದು ಬಿಸಿಲಿನ ಬೇಗೆಯನ್ನು ಸಹಿಸಲಾರದೆ ಸುಧಾರಿಸಿಕೊಳ್ಳಲೆಂದು ಕಾಗೆ ಮತ್ತು ಪಾರಿವಾಳ ವಾಸವಿದ್ದ ಮರದ ನೆರಳಿಗೆ ಬರುತ್ತಾರೆ. ಆಯಾಸಗೊಂಡಿದ್ದ ರಾಜ ಮರದ ನೆರಳಿನಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿಕೊಳ್ಳುತ್ತೇನೆಂದು ತಿಳಿಸಿ ಅಲ್ಲಿಯೇ ಜಮಾಖಾನವೊಂದನ್ನು ಹಾಸಿ ಅದರ ಮೇಲೆ ವಿಶ್ರಮಿಸಿಕೊಳ್ಳುತ್ತಿರುತ್ತಾನೆ. ಬಿಸಿಲಿನಲ್ಲಿ ಆಯಾಸಗೊಂಡಿದ್ದ ರಾಜ ನಿದ್ದೆಗೆ ಜಾರುತ್ತಾನೆ. ಮಂತ್ರಿಗಳು, ಸೈನಿಕರೆಲ್ಲ ರಾಜನ ಕಾವಲು ಕಾಯುತ್ತಿದ್ದಾರೆ.

ಹೊತ್ತು ಸರಿದಂತೆ ಬಿಸಿಲಿನ ಕಿರಣಗಳು ಬೀಳುತ್ತಿವೆ. ಮರದ ಮೇಲಿದ್ದ ಪಾರಿವಾಳ ಇದನ್ನೆಲ್ಲ ನೋಡಿತು. ರಾಜ ಆಯಾಸದಿಂದ ಮಲಗಿದ್ದಾನೆ. ಪಾಪ, ರಾಜ್ಯದ ಜನರಿಗೆಲ್ಲ ಒಳಿತು ಮಾಡುವ ರಾಜನ ಮುಖದ ಮೇಲೆ ಬಿಸಿಲು ಬೀಳುತ್ತಿದೆಯಲ್ಲಾ ಎಂದುಕೊಂಡು ತಾನು ಕುಳಿತಿದ್ದ ರೆಂಬೆಯಿಂದ ಹಾರಿ ಬಿಸಿಲಿನ ಕಿರಣ ಬೀಳುತ್ತಿದ್ದ ಕಡೆಗೆ ಹೋಗಿ ಮತ್ತೊಂದು ರೆಂಬೆಯ ಮೇಲೆ ಕುಳಿತು ಸೂರ್ಯನ ಕಿರಣಗಳು ರಾಜನ ಮೇಲೆ ಬೀಳದಂತೆ ತನ್ನೆರಡೂ ರೆಕ್ಕೆಗಳನ್ನು ಹರಡಿಕೊಂಡಿತು. ರಾಜನ ಮುಖದ ಮೇಲೆ ಬೀಳುತ್ತಿದ್ದ ಬಿಸಿಲು ಮರೆಯಾಗಿ ನೆರಳಾಯಿತು. ರಾಜನಿಗೆ ಹಾಯೆನಿಸಿತು.

ಆದರೆ ಜೊತೆಯಲ್ಲಿಯೇ ಇದ್ದ ಕಾಗೆಗೆ ಪಾರಿವಾಳ ಯಾಕಾಗಿ ಹಾರಿ ಹೋಯಿತು ಎಂಬುದು ತಿಳಿಯದೆ ತಾನೂ ಹಾರಿ ಬಂದು ಪಾರಿವಾಳದ ಪಕ್ಕದಲ್ಲಿಯೇ ಕುಳಿತುಕೊಂಡಿತು. ಕುಳಿತಿದ್ದ ಕಾಗೆ ಸುಮ್ಮನೆ ಕೂರಲಿಲ್ಲ, ಕುಳಿತ ಸ್ವಲ್ಪ ಹೊತ್ತಿಗೆ ಮಲವಿಸರ್ಜನೆ ಮಾಡಿ ಹಾರಿ ಹೋಯಿತು. ಕಾಗೆ ವಿಸರ್ಜನೆ ಮಾಡಿ ಹಾರಿ ಹೋಯಿತು. ಕಾಗೆ ವಿಸರ್ಜಿಸಿದ್ದು ನೇರ ರಾಜನ ಮುಖದ ಮೇಲೆಯೇ ಬಿದ್ದಿತು. ಅದನ್ನು ಕಂಡ ರಾಜಭಟರು ತಮ್ಮ ಬಂದೂಕಿನಿಂದ ಗುಂಡು ಹಾರಿಸಿದರು. ಭಟರು ಗುಂಡು ಹಾರಿಸುವಷ್ಟರಲ್ಲಿ ಕಾಗೆ ಹಾರಿ ಹೋಗಿತ್ತು..

ಭಟರು ಹಾರಿಸಿದ ಗುಂಡು ಪಾರಿವಾಳಕ್ಕೆ ತಗುಲಿ ಅದು ತನ್ನ ಪ್ರಾಣ ಕಳೆದುಕೊಂಡಿತು. ಇಲ್ಲಿ ಪಾರಿವಾಳ ಮಾಡಿದ ತಪ್ಪೇನೂ ಇಲ್ಲ. ಮಲಗಿರುವ ರಾಜನ ಮುಖದ ಮೇಲೆ ಬೀಳುತ್ತಿರುವ ಬಿಸಿಲನ್ನು ತಡೆದು ನೆರಳು ಒದಗಿಸಿ ಒಳ್ಳೆಯ ಕೆಲಸ ಮಾಡಿತ್ತು. ಇಲ್ಲಿ ತಪ್ಪು ಮಾಡಿದ್ದು ಕಾಗೆ,  ಆದರೆ ಶಿಕ್ಷೆ ಅನುಭವಿಸಿದ್ದು ಪಾರಿವಾಳ.  ಹೀಗೆಯೇ ಕೆಟ್ಟವರು ಕೆಟ್ಟದ್ದು ಮಾಡಿ ತಪ್ಪಿಸಿಕೊಳ್ಳುತ್ತಾರೆ. ಅಂತಹವರ ಸಹವಾಸದಲ್ಲಿದ್ದ ಕಾರಣದಿಂದ ಒಳ್ಳೆಯವರು ಶಿಕ್ಷೆಗೊಳಗಾಗುತ್ತಾರೆ.

ನೀತಿ: ಸಂಗವನ್ನು ಮಾಡುವುದಿದ್ದರೆ ಸಜ್ಜನರ ಸಂಗ ಮಾಡಬೇಕು.

 

ಹೆಸರು: ಕಿಶನ್.ಆರ್.ಬಿ. ತಂದೆ: ರಾಮಚಂದ್ರ ಬಿ.ಎಸ್. ಕಿಶನ್ ನಿಲಯ, ಬೊಳ್ಳಗುಡ್ಡೆ ಮನೆ ಕೆಮ್ಮಿಂಜೆ ಗ್ರಾಮ, ಪುತ್ತೂರು. 10ನೇ ತರಗತಿ, ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ನರಿಮೊಗರು, ಪುತ್ತೂರು.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.