ನಿಜವಾದ ಗೆಳತನ-ಪಲ್ಲವಿ ಆರ್.ಬಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನಿಜವಾದ ಗೆಳತನ
ಒಂದು ದಿನ ಒಂದು ಹಳ್ಳಿಯಲ್ಲಿ ಒಬ್ಬ ಹುಡುಗ ವಾಸಿಸುತ್ತಿದ್ದ. ಅವನ ಹೆಸರು ರಾಮ. ಒಂದು ದಿನ ಅವನು ಬೇರೆ ಊರಿಗೆ ಹೋಗಿ ಕೆಲಸ ಮಾಡಲು ನಿರ್ಧರಿಸಿದ. ಅವನಿಗೆ ಅವನ ದಾರಿಯಲ್ಲಿ ತುಂಬಾ ದಟ್ಟವಾದ ಕಾಡುಗಳು ಸಿಗುತ್ತದೆ. ಅವನಿಗೆ ಆ ಊರನ್ನು ತಲುಪಬೇಕೆಂದರೆ ಒಂದು ದಿನ ಬೇಕಾಗುತ್ತದೆ. ಆದರೆ ಅವನಿಗೆ ಹೋಗಲು ಬೇರೆ ದಾರಿಯಿಲ್ಲ. ಆಮೇಲೆ ರಾಮ ನಡೆಯುತ್ತ ಹೋದ. ಮತ್ತೆ ಅವ ಕಾಡಿಗೆ ತಲುಪಿದ. ರಾಮ ಕಾಡಿನ ಮಧ್ಯದಲ್ಲಿ ಹೋಗುವಾಗ ಒಬ್ಬ ಕಾಡು ಮನುಷ್ಯ ಕೆಸರಿಗೆ ಬಿದ್ದಿದ್ದ. ರಾಮ ಅದನ್ನು ನೋಡಿದನು. ಅವನೊಂದಿಗೆ ಹಗ್ಗಗಳು ಇದ್ದವು. ರಾಮ ಆ ಹಗ್ಗವನ್ನು ಕೆಸರಿಗೆ ಹಾಕಿದನು ಮತ್ತು ಆ ಕಾಡು ಮನುಷ್ಯನಿಗೆ ಹಿಡಿಯಲು ಹೇಳಿದನು.

ಕಾಡು ಮನುಷ್ಯ ಹಗ್ಗವನ್ನು ಹಿಡಿದುಕೊಂಡನು. ರಾಮ ಕೂಡ ಹಗ್ಗವನ್ನು ಹಿಡಿದುಕೊಂಡನು. ರಾಮ ಹಗ್ಗವನ್ನು ಎಳೆದನು ಮತ್ತು ಕಾಡು ಮನುಷ್ಯನನ್ನು ಕೆಸರಿನಿಂದ ಹೊರಗೆ ತೆಗೆದನು. ಕಾಡು ಮನುಷ್ಯ ಮತ್ತು ರಾಮ ಗೆಳೆಯರಾದರು. ಅವರು ಸ್ವಲ್ಪ ದೂರ ಹೋಗುತ್ತಿರುವಾಗ ಅವರಿಗೆ ಒಂದು ಹುಲಿ ಕಂಡಿತು. ಆ ಹುಲಿ ಅವರನ್ನು ತಿನ್ನಲು ಬಂದಿತು. ರಾಮನೊಂದಿಗೆ ಬೇಂಡೇಜ್, ಬೆಂಕಿ ಪೆಟ್ಟಿಗೆ ಮತ್ತು ಅಲ್ಲಿ ಒಂದು ಮರದ ತುಂಡು ಬಿದ್ದಿತು.

ರಾಮ ಮರದ ತುಂಡನ್ನು ತೆಗೆದುಕೊಂಡು ಅದಕ್ಕೆ ಬೇಂಡೇಜ್ ಸುತ್ತಿ ಬೆಂಕಿ ಕೊಟ್ಟನು. ಅವನು ಮರದ ತುಂಡನ್ನು ತೆಗೆದುಕೊಂಡು ಹುಲಿಯ ಹತ್ತಿರ ಹೋದ. ಆಗ ಹುಲಿ ಓಡಿ ಹೋಯಿತು. ಮತ್ತೆ ಕಾಡುಮನುಷ್ಯ ಮತ್ತು ರಾಮ ಬಚವಾದರು. ಆಮೇಲೆ ಕಾಡುಮನುಷ್ಯ ರಾಮನನ್ನು ಮತ್ತೊಂದು ಹಳ್ಳಿಗೆ ತಲುಪಿಸಿ ಕಾಡಿಗೆ ವಾಪಸಾದರು. ರಾಮ ಮತ್ತೊಂದು ಹಳ್ಳಿಯಲ್ಲಿ ಅವನ ಕೆಲಸವನ್ನು ಮಾಡುತ್ತಾ ಅಲ್ಲೇ ಕೆಲವು ದಿನ ವಾಸ ಮಾಡಿದ. ಅಲ್ಲಿ ಕೆಲಸ ಮಡಿ ತುಂಬಾ ಸಂಪಾದನೆ ಮಾಡಿದ. ಹಾಗೆಯೇ ಅವನ ಕೆಲಸ ಮುಗಿಯಿತು.

ರಾಮ ಅವನ ಮನೆ ತಲುಪಬೇಕೆಂದರೆ ಆ ದಟ್ಟವಾದ ಕಾಡನ್ನು ದಾಟಬೇಕು. ಅವನು ಹಾಗೆಯೇ ಹೋಗುತ್ತಿರುವಾಗ ಅವರು, ಅವರನ್ನು ತಿನ್ನಲು ಬಂದ ಹುಲಿಯನ್ನು ಕಂಡರು. ಅದು ಒಂದು ಬಲೆಗೆ ಸಿಕ್ಕಿಕೊಂಡು ಇದ್ದುದನ್ನು ಕಂಡರು. ರಾಮ ತನ್ನೊಂದಿಗೆ ಒಂದು ಕತ್ತರಿಯನ್ನು ಇಟ್ಟುಕೊಂಡಿದ್ದ. ಅವ ಬಲೆಯನ್ನು ತನ್ನ ಕತ್ತರಿಯಿಂದ ಕತ್ತರಿಸಿ ಹುಲಿಯನ್ನು ಕಾಪಾಡಿದ ಮತ್ತು ಹುಲಿ ಕೂಡ ಅವರೊಂದಿಗೆ ಗೆಳೆತನ ಮಾಡಿಕೊಂಡಿತು. ಈಗ ಆ ಮೂರು ಗೆಳೆಯರು ಗೆಳೆತನ ಮಾಡಿಕೊಂಡು ತಮ್ಮ ತಮ್ಮ ಮನೆಗೆ ಹೋದರು.

ನೀತಿ : ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ. ಇದಕ್ಕೆ ನಿಜವಾದ ಗೆಳೆತನ ಎಂದು ಹೇಳುತ್ತಾರೆ.

 

ಪಲ್ಲವಿ ಆರ್.ಬಿ, ತಂದೆ :ರಾಮಚಂದ್ರ ಬಿ.ಎಸ್. ಕಿಶನ್ ನಿಲಯ, ಬೊಳ್ಳೆಗುಡ್ಡೆ ಮನೆ ಕೆಮ್ಮಿಂಜೆ ಗ್ರಾಮ, ಪುತ್ತೂರು 8ನೇ ತರಗತಿ, ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆ ನರಿಮೊಗರು, ಪುತ್ತೂರು.

 

 

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.