ಕೊಡಗು ಸೈನಿಕ ಶಾಲೆ ದಾಖಲಾತಿಗೆ ಅರ್ಜಿ ಆಹ್ವಾನ

Puttur_Advt_NewsUnder_1
Puttur_Advt_NewsUnder_1

ಉಡುಪಿ: ಅಖಿಲ ಭಾರತ ಸೈನಿಕ ಶಾಲಾ ಪರೀಕ್ಷೆಯ ಮೂಲಕ ಕೊಡಗಿನ ಸೈನಿಕ ಶಾಲೆಯ 6 ಮತ್ತು 9ನೇ ತರಗತಿಗಳಿಗೆ 2020-21ನೇ ಸಾಲಿನ ದಾಖಲಾತಿಗೆ ಬಾಲಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸೈನಿಕ ಶಾಲೆ ಕೊಡಗು, ಬೆಂಗಳೂರು, ಮಂಗಳೂರು, ಶಿವಮೊಗ್ಗ, ಮೈಸೂರು ನಗರ, ಚಿತ್ರದುರ್ಗ ಮತ್ತು ಬೈಲಕುಪ್ಪೆ [ಜಿಲ್ಲೆ-ಮೈಸೂರು] ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿವೆ. ೯ನೇ ತರಗತಿ ಪ್ರವೇಶ ಪರೀಕ್ಷೆ ಸೈನಿಕ ಶಾಲೆ ಕೊಡಗಿನಲ್ಲಿ ನಡೆಯಲಿದೆ.

ಆನ್‌ಲೈನ್ ಅರ್ಜಿ/ ನೋಂದಣಿ/ ಅರ್ಜಿ ಶುಲ್ಕ ಇವುಗಳಿಗಾಗಿ sainikschooladmission.in ಅನ್ನು ಸಂಪರ್ಕಿಸಬಹುದು. ನೋಂದಣಿ ಶುಲ್ಕವು ಸಾಮಾನ್ಯ ವರ್ಗ ಮತ್ತು ರಕ್ಷಣಾ ಇಲಾಖೆಯವರಿಗೆ 400 ರೂ. ಮತ್ತು ಪರಿಶಿಷ್ಟ ಜಾತಿ/ ಪಂಗಡದವರಿಗೆ 250 ರೂ. ಅರ್ಜಿ ಸಲ್ಲಿಸಲು ಸೆ.23 ಕೊನೆಯ ದಿನವಾಗಿದೆ.
ಆನ್‌ಲೈನ್ ನೋಂದಣಿ ಸಮಯದಲ್ಲಿ ಪೋಷಕರು, ಅಭ್ಯರ್ಥಿ ಮತ್ತು ಪೋಷಕರ ಆಧಾರ್ ಕಾರ್ಡ್, ಅಭ್ಯರ್ಥಿಯ ಪಾಸ್‌ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ ಹಾಗೂ ಸಹಿಯನ್ನು ಸ್ಕ್ಯಾನ್ ಮಾಡಿ ಇಟ್ಟುಕೊಳ್ಳಬೇಕು.

ಅರ್ಜಿ ಶುಲ್ಕವನ್ನು ಕ್ರೆಡಿಟ್ ಕಾರ್ಡ್/ ಡೆಬಿಟ್ ಕಾರ್ಡ್/ ನೆಟ್ ಬ್ಯಾಂಕಿಂಗ್ ಮೂಲಕ ಕಟ್ಟಬಹುದು. ಅಭ್ಯರ್ಥಿಯ ಜನನ ದಿನಾಂಕ, ಜಾತಿ ದೃಢೀಕರಣ ಪತ್ರ, ಪೋಷಕರ ಇ-ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ, ಪೋಷಕರ ಖಾಯಂ ಮತ್ತು ಪೋಸ್ಟಲ್ ವಿಳಾಸ, ವಾಸ ದೃಢೀಕರಣ ಪತ್ರವನ್ನು ಇಟ್ಟುಕೊಳ್ಳಬೇಕು.

ಹೆಚ್ಚಿನ ಮಾಹಿತಿಗೆ ದೂ.ಸಂ.: 8510055577, 8510044411, 08276-278963 ಅನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.