ಅರಿಯಡ್ಕ: ಮಜ್ಜಾರಡ್ಕ ಅಂಗನವಾಡಿಯಲ್ಲಿ ಸಾಧಕರಿಗೆ ಸನ್ಮಾನ

Puttur_Advt_NewsUnder_1
Puttur_Advt_NewsUnder_1

‘ರೈತ ದೇವೋಭವ’ ಘೋಷಣೆ ದೇಶದಲ್ಲಿ ಮೊಳಗಬೇಕು -ಕಡಮಜಲು ಸುಭಾಷ್ ರೈ

ಪುತ್ತೂರು: ನಾವೆಲ್ಲರೂ ದೇಶಭಕ್ತರು, ದೇಶದ ಮೇಲೆ ನಮಗೆ ಅಪಾರವಾದ ಗೌರವ,ಭಕ್ತಿ ಇದೆ. ಅದೇ ರೀತಿ ನಮಗೆಲ್ಲರಿಗೂ ಅನ್ನ ನೀಡುವ ರೈತರ ಮೇಲೂ ನಮಗೆ ಭಕ್ತಿ ಬರಬೇಕು, ಮಾತೃ ದೇವೋಭವ, ಪಿತೃದೇವೋಭವ ಎಂಬಂತೆ ‘ರೈತ ದೇವೋಭವ’ ಎಂಬ ಘೋಷಣೆ ಇಡೀ ದೇಶದಲ್ಲಿ ಮೊಳಗಬೇಕು ಎಂದು ದೇಶಭಕ್ತ ಎನ್.ಎಸ್. ಕಿಲ್ಲೆ ಪ್ರತಿಷ್ಠಾನದ ಅಧ್ಯಕ್ಷ ಕಡಮಜಲು ಸುಭಾಷ್ ರೈ ಹೇಳಿದರು.

ಅವರು ಅಂಗನವಾಡಿ ಕೇಂದ್ರ ಮಜ್ಜಾರಡ್ಕ, ಸ್ತ್ರೀ ಶಕ್ತಿ ಗುಂಪು ಶ್ರೀ ಕ್ಷೇ.ಧ.ಗ್ರಾ.ಯೋಜನೆ ಮತ್ತು ನವೋದಯ ಸ್ವಸಹಾಯ ಸಂಘ ಇವರ ಆಶ್ರಯದಲ್ಲಿ ಮಜ್ಜಾರಡ್ಕ ಅಂಗನವಾಡಿ ಕೇಂದ್ರದ ವಠಾರದಲ್ಲಿ ನಡೆದ 73 ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಾವೆಲ್ಲರೂ ದೇಶ ರಕ್ಷಣೆಯ ಯೋಧರಾಗಬೇಕು ಎಂದ ಅವರು 370 ವಿಧಿ ರದ್ದು ಮಾಡಿರುವ ಪ್ರಧಾನಿ ಮೋದಿಯವರ ಕ್ರಮವನ್ನು ಶ್ಲಾಘನೆ ಮಾಡಿದರು. ಈ ವರ್ಷದ ಸ್ವಾತಂತ್ರ್ಯ ದಿನಾಚರಣೆ ನಮಗೆ ಮಹತ್ವದ ದಿನಾಚರಣೆ ಆಗಿದೆ ಎಂದು ಹೇಳಿ ಶುಭ ಹಾರೈಸಿದರು.

ಧ್ವಜರೋಹಣ ನೆರವೇರಿಸಿದ ಮಂಗಳೂರು ಇಂಡಸ್ಟ್ರೀಯಲ್ ಪೆಸ್ಟ್ ಕಂಟ್ರೋಲ್‌ನ ಸಂಸ್ಥಾಪಕ ಬೆದ್ರುಮಾರು ಸೋಮಶೇಖರ ರೈಯವರು ಸಮಸ್ತ ಜನತೆಗೆ ಸ್ವಾತಂತ್ರೋತ್ಸವದ ಶುಭ ಸಂದೇಶ ಹೇಳಿದರು. ಅತಿಥಿಗಳಾಗಿ ಆಗಮಿಸಿದ್ದ ಅರಿಯಡ್ಕ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಲೋಕೇಶ್ ರೈ ಅಮೈರವರು, ಸ್ವಾತಂತ್ರೋತ್ಸವ ನಮ್ಮೆಲ್ಲರ ಹಬ್ಬವಾಗಬೇಕು ಎಂದರು. ಪತ್ರಕರ್ತ ಸಿಶೇ ಕಜೆಮಾರ್ ಮಾತನಾಡಿ, ದೇಶಪ್ರೇಮದೊಂದಿಗೆ ಪರಿಸರ ಪ್ರೇಮವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಸಭಾಧ್ಯಕ್ಷತೆ ವಹಿಸಿದ್ದ ಬಾಲವಿಕಾಸ ಸಮಿತಿ ಅಧ್ಯಕ್ಷೆ ನಯನ ಎಂ.ರೈಯವರು ಎಲ್ಲರಿಗೂ ಸ್ವಾತಂತ್ರೋತ್ಸವದ ಶುಭ ಸಂದೇಶ ಸಾರಿದರು.

ಸಾಧಕರಿಗೆ ಸನ್ಮಾನ
ಈ ಸಂದರ್ಭದಲ್ಲಿ ಬಾಲವಿಕಾಸ ಸಮಿತಿಯ ಮಾಜಿ ಅಧ್ಯಕ್ಷ ಅರಿಯಡ್ಕ ಎಂ.ಸತೀಶ್ಚಂದ್ರ ರೈ ಬೋಳ್ತಿಲ, ಅರಿಯಡ್ಕ ಗ್ರಾಪಂ ಸದಸ್ಯ, ಬಾಲವಿಕಾಸ ಸಮಿತಿ ಮಾಜಿ ಅಧ್ಯಕ್ಷ ರಾಜೇಶ್ ಮಣಿಯಾಣಿ, ಪ್ರಗತಿಪರ ಕೃಷಿಕ ಮೋನಪ್ಪ ರೈ ಮಾಡದಗುಡ್ಡೆರವರುಗಳನ್ನು ಶಾಲು,ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಸತೀಶ್ಚಂದ್ರ ರೈ ಕೃತಜ್ಞತೆ ಸಲ್ಲಿಸಿದರು.

ವೇದಿಕೆಯಲ್ಲಿ ಪ್ರೇಮ್ ಅಲ್ಯೂಮಿನಿಯಂ ವರ್ಕ್ಸ್‌ನ ಪ್ರೇಮ್‌ರಾಜ್ ಹೊಸಮನೆ, ಅರಿಯಡ್ಕ ಗ್ರಾಪಂ ಸದಸ್ಯೆ ಹೇಮಾವತಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ಅಂಗನವಾಡಿ ಪುಟಾಣಿಗಳಿಗೆ, ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ ಬಹುಮಾನ ವಿತರಿಸಲಾಯಿತು. ಬಹುಮಾನ ವಿಜೇತರ ಪಟ್ಟಿಯನ್ನು ನಿರ್ಮಲ ವಾಚಿಸಿದರು. ಕೃಪಾ ಸ್ವಾಗತಿಸಿದರು.ಅಂಗನವಾಡಿ ಶಿಕ್ಷಕಿ ವಸಂತಿ ಟಿ. ವಂದಿಸಿದರು. ಯುವರಾಜ್ ಪೂಂಜ ಕಾರ್ಯಕ್ರಮ ನಿರ್ವಹಿಸಿದರು. ಅಂಗನವಾಡಿ ಸಹಾಯಕಿ, ಮಕ್ಕಳ ಪೋಷಕರು ಸಹಕರಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.