ಆ.31: ಪುತ್ತೂರು ಮೊಸರು ಕುಡಿಕೆ ಉತ್ಸವ

Puttur_Advt_NewsUnder_1
Puttur_Advt_NewsUnder_1
  • ಪುತ್ತೂರು ಮುದ್ದುಕೃಷ್ಣ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ
  • ವಿವಿಧ ವಿಭಾಗದಲ್ಲಿ ಹಲವು ಸ್ಪರ್ಧೆಗಳು
  • ಸಂಜೆ ಶೋಭಾಯಾತ್ರೆಯಲ್ಲಿ ಅಟ್ಟಿ ಮಡಿಕೆ ಒಡೆಯುವ ಸ್ಪರ್ಧೆ

ಪುತ್ತೂರು: ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಸ್ಥಾಪನೆಯಾದ ವಿಶ್ವ ಹಿಂದೂ ಪರಿಷತ್‌ನ ಸ್ಥಾಪನಾ ದಿನದ ಪ್ರಯುಕ್ತ ನಡೆಯುವ 11 ನೇ ವರುಷದ ಪುತ್ತೂರು ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮ ಆ.31ರಂದು ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಜರುಗಲಿದೆ. ಆ.25ರಂದು ಜಿಲ್ಲಾ ಮಟ್ಟದ ಶ್ರೀಕೃಷ್ಣ ವೇಷ ಸ್ಪರ್ಧೆ ಮತ್ತು ಕಬಡ್ಡಿ ಪಂದ್ಯಾಟ ಜರುಗಲಿದೆ. ಆ.31ಕ್ಕೆ ಶೋಭಾಯಾತ್ರೆಯೊಂದಿಗೆ ಮೆರವಣಿಗೆಯಲ್ಲಿ ದಾರಿಯುದ್ದಕ್ಕೂ ಅಟ್ಟಿ ಮಡಿಕೆ ಒಡೆಯುವ ಸ್ಪರ್ಧೆ ಜರುಗಲಿದೆ.

ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಕಡಮಜಲು ಸುಭಾಷ್ ರೈ ಅವರು ಮಾತನಾಡಿ ಆ.31ರಂದು ಮೊಸರು ಕುಡಿಕೆ ಉತ್ಸವ ಮತ್ತು ಶೋಭಾಯಾತ್ರೆ ಜರುಗಲಿದೆ. ಬೆಳಿಗ್ಗಿನಿಂದಲೇ ವಿವಿಧ ಸ್ಪರ್ಧಾ ಕಾರ್ಯಕ್ರಮ ಜರುಗಲಿದೆ ಎಂದ ಅವರು 11 ವರ್ಷದಿಂದ 16 ವರ್ಷದ ಒಳಗಿನ ಮಕ್ಕಳಿಗೆ ಭಾರತ ಮಾತೆಯ ಚಿತ್ರ, ಸಂಗೀತ, ಸ್ಮರಣ ಶಕ್ತಿ, ಮಡಿಕೆ ಒಡೆಯುವುದು, ದೇಶಭಕ್ತಿ ಗೀತೆ, ಜಾನಪದ ಗೀತೆ, ನಿಧಾನಗತಿ ಸೈಕಲ್, ಅಡ್ಡಕಂಬ, ಭಗವದ್ಗೀತೆ ಕಂಠಪಾಠ ಹಾಗೂ ಮಹಿಳೆಯರಿಗೆ ಸಂಗೀತ ಕುರ್ಚಿ, ಸಂಗೀತ, ಗುಂಡೆಸೆತ, ಮಡಿಕೆ ಒಡೆಯುವುದು, ರಂಗವಲ್ಲಿ ಸ್ಪರ್ಧೆಗಳು ಜರುಗಲಿದೆ.

ಪುರುಷರಿಗೆ ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ ಸ್ಪರ್ಧೆ ಜರುಗಲಿದ್ದು, ಪುರುಷರಿಗೆ ಉದ್ದಕಂಬ ಸ್ಪರ್ಧೆ ಜರುಗಲಿದೆ. ಆ.25ರಂದು ದಿ.ನಿತಿನ್ ಕುಮಾರ್ ನಿಡ್ಪಳ್ಳಿ ಅವರ ಸ್ಮರಣಾರ್ಥ ಜಿಲ್ಲಾ ಮಟ್ಟದ ಕೃಷ್ಣ ವೇಷ ಸ್ಪರ್ಧೆ ಜರುಗಲಿದೆ. ಯುವ ಉದ್ಯಮಿ ಪೂರ್ಣಜಿತ್ ರೈ ಬೆಳ್ಳಿಪ್ಪಾಡಿ ಅವರು ಸ್ಪರ್ಧೆಯನ್ನು ಉದ್ಘಾಟಿಸಲಿದ್ದಾರೆ. ಸ್ಪರ್ಧೆಯಲ್ಲಿ 2 ವರ್ಷದ ಒಳಗಿನ ಪುತ್ತೂರು ಮುದ್ದುಕೃಷ್ಣ ಸ್ಪರ್ಧೆಯಲ್ಲಿ ವಿಜೇತರಿಗೆ ಚಿನ್ನದ ಪದಕ ನೀಡಲಾಗುವುದು. ಅದೇ ರೀತಿ ಕಂದಕೃಷ್ಣ, ಬಾಲಕೃಷ್ಣ, ಕಿಶೋರಕೃಷ್ಣ, ಗೋಪಿಕೃಷ್ಣ, ರಾಧಾಕೃಷ್ಣ, ಯಶೋಧಕೃಷ್ಣ, ಕೃಷ್ಣ ಅರ್ಜುನ, ಸುಧಾಮಕೃಷ್ಣ, ಶಂಖನಾದ ಸ್ಪರ್ಧೆಯು ಜರುಗಲಿದೆ ಎಂದು ಅವರು ಹೇಳಿದರು.

ಶೋಭಾಯಾತ್ರೆ, ಸಭಾ ಕಾರ್ಯಕ್ರಮ:
ಆ.31ರಂದು ಮಧ್ಯಾಹ್ನ ಗಂಟೆ 2.30ಕ್ಕೆ ಪುತ್ತೂರು ಮೊಸರು ಕುಡಿಕೆ ಉತ್ಸವದ ಶೋಭಾಯಾತ್ರೆಯು ಬೊಳುವಾರು ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಿಂದ ಹೊರಡಲಿದೆ. ಮಹಾಲಿಂಗೇಶ್ವರ ಟೂರ್ಸ್ ಆಂಡ್ ಟ್ರಾವೆಲ್ಸ್ ಹರೀಶ್ ಭಟ್ ನಡುಸಾರು ಅವರು ಶೋಭಾಯಾತ್ರೆಯನ್ನು ಉದ್ಘಾಟಿಸಲಿದ್ದಾರೆ. ಸಂಜೆ ಗಂಟೆ 4.30ಕ್ಕೆ ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಗೀತ್ ಸಂಗೀತ್ ಉಪ್ಪಳ ಇವರಿಂದ ಭಕ್ತಿರಸಧಾರೆ ಕಾರ್ಯಕ್ರಮ ಜರುಗಲಿದೆ. ಬಳಿಕ ನಡೆಯುವ ಧಾರ್ಮಿಕ ಸಭೆಯಲ್ಲಿ ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ ರಘು ಸಕಲೇಶಪುರ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ದುರ್ಗಾವಾಹಿನಿ ಕರ್ನಾಟಕ ದಕ್ಷಿಣ ಪ್ರಾಂತ ಸಂಚಾಲಕಿ ವಿದ್ಯಾ ಮಲ್ಯ, ಬಜರಂಗದಳ ಮಂಗಳೂರು ವಿಭಾಗ ಸಂಯೋಜಕ ಭುಜಂಗ ಕುಲಾಲ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಕಡಮಜಲು ಸುಭಾಷ್ ರೈ ಹೇಳಿದರು.

ಟಿ.ರಾಧಾಕೃಷ್ಣ ಭಟ್ ಸ್ಮರಣಾರ್ಥ ಕಬಡ್ಡಿ ಪಂದ್ಯಾಟ
ವಿ.ಹಿಂ.ಪ ಜಿಲ್ಲಾ ಕಾರ್ಯದರ್ಶಿಯಾಗಿದ್ದ ದಿ. ಟಿ.ರಾಧಾಕೃಷ್ಣ ಭಟ್ ಅವರ ಸ್ಮರಣಾರ್ಥ ಆ.25ರಂದು ಶ್ರೀ ಮಹಾಲಿಂಗೇಶ್ವರ ದೇವಲದ ವಠಾರದಲ್ಲಿ ಪುರುಷರ ಮ್ಯಾಟ್ ಅಂಕಣದ ಕಬಡ್ಡಿ ಪಂದ್ಯಾಟ ನಡೆಯಲಿದೆ. ಯುವ ಉದ್ಯಮಿ ಸಹಜ್ ರೈ ಬಳಜ್ಜ ಅವರು ಪಂದ್ಯಾಟವನ್ನು ಉದ್ಘಾಟಿಸಲಿದ್ದಾರೆ ಎಂದು ವಿ.ಹಿಂ.ಪ ಜಿಲ್ಲಾ ಅಧ್ಯಕ್ಷ ಡಾ. ಕೃಷ್ಣಪ್ರಸನ್ನ ಅವರು ತಿಳಿಸಿದ್ದಾರೆ.

ಶೋಭಾಯಾತ್ರೆಯ ಉದ್ದಕ್ಕೂ ಅಟ್ಟಿಮಡಿಕೆ ಒಡೆಯುವ ಮೂಲಕ ಸಾಹಸ ಪ್ರದರ್ಶನ
ಆ.31ರಂದು ಬೊಳುವಾರಿನಲ್ಲಿ ಶ್ರೀಕೃಷ್ಣನ ರಥದೊಂದಿಗೆ ಶೋಭಾಯಾತ್ರೆ ಆರಂಭಗೊಳ್ಳಲಿದ್ದು ಶೋಭಾಯಾತ್ರೆಯಲ್ಲಿ ವಿಶೇಷ ಆಕರ್ಷಣೆಯಾಗಿ ವಿಟ್ಲ ವೀರಾಂಜನೇಯ ವ್ಯಾಯಾಮ ಶಾಲೆ ಚಂದಳಿಕೆ ಇವರಿಂದ ತಾಲೀಮು ಪ್ರದರ್ಶನ, ಅಸೈಗೋಳಿಯ ತ್ರಿಶೂಲ್ ನಾಸಿಕ್ ಬ್ಯಾಂಡ್, ಗೊಂಬೆಗಳ ನೃತ್ಯ, ಶ್ರೀರಾಮ್ ಚೆಂಡೆ ಮತ್ತು ಸುಮಾರು 15 ವೀರ ಯುವಕರ ತಂಡದಿಂದ ಸಾಹಸಮಯ ಅಟ್ಟಿ ಮಡಿಕೆ ಒಡೆಯುವ ಪ್ರದರ್ಶನ ನಡೆಯಲಿದೆ. ಬೊಳುವಾರು ಆಂಜನೇಯ ಮಂತ್ರಾಲಯದಿಂದ ಮುಖ್ಯರಸ್ತೆಯಾಗಿ ಅಂಚೆ ಕಚೇರಿ ಬಳಿಯಿಂದ ದೇವಸ್ಥಾನದ ಗದ್ದೆಗೆ ಸಾಗಿ ಅಲ್ಲಿ ಸಭಾ ಕಾರ್ಯಕ್ರಮದ ಬಳಿಕ ಬಸ್‌ನಿಲ್ದಾಣದ ಮೂಲಕ ಕಲ್ಲಾರೆ, ಅರುಣಾ ಚಿತ್ರಮಂದಿರದ ಬಳಿಯಿಂದ ಎಪಿಎಂಸಿ ರಸ್ತೆಯಾಗಿ ಶ್ರೀ ಮಹಾಲಿಂಗೇಶ್ವರ ಗದ್ದೆಯಲ್ಲಿ ಶೋಭಾಯಾತ್ರೆ ಕೊನೆಗೊಳ್ಳುವುದು – ಡಾ. ಕೃಷ್ಣಪ್ರಸನ್ನ ಅಧ್ಯಕ್ಷರು, ವಿಹಿಂಪ ಪುತ್ತೂರು ಜಿಲ್ಲೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.