HomePage_Banner
HomePage_Banner

ಆ.23: ಪರ್ಪುಂಜದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ, ವಿವಿಧ ಆಟೋಟ ಸ್ಪರ್ಧೆಗಳು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸ್ನೇಹ ಯುವಕ ಮಂಡಲ ಮತ್ತು ಸ್ನೇಹ ಮಹಿಳಾ ಮಂಡಲ ಪರ್ಪುಂಜ ಇದರ ಜಂಟಿ ಆಶ್ರಯದಲ್ಲಿ 15 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಹಾಗೂ ವಿವಿಧ ಆಟೋಟ ಸ್ಪರ್ಧೆಗಳು ಆ.23 ರಂದು ಪರ್ಪುಂಜ ರಾಮಜಾಲು ಗರಡಿ ವಠಾರದಲ್ಲಿ ನಡೆಯಲಿದೆ. ಬೆಳಿಗ್ಗೆ ರಾಮಜಾಲು ಗರಡಿಯ ಆಡಳಿತ ಮೊಕ್ತೇಸರ ಸಂಜೀವ ಪೂಜಾರಿ ಕೂರೇಲುರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮಿತ್ರದಾಸ ರೈ ಡೆಕ್ಕಳ, ಕುಂಬ್ರ ದುರ್ಗಾಪ್ರಸಾದ್ ರೈ, ಗಣೇಶ್ ಕೋಡಿಬೈಲು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಪುರುಷರಿಗೆ ಮತ್ತು ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ. ಪುರುಷರಿಗೆ ಕಂಬ ಏರುವುದು, ಮಡಿಕೆ ಹೊಡೆಯುವುದು, ಹಗ್ಗಜಗ್ಗಾಟ, ಲಗೋರಿ, ಗುಡ್ಡಗಾಡು ಓಟ ಇತ್ಯಾದಿ, ಮಹಿಳೆಯರಿಗೆ ಮಡಿಕೆ ಹೊಡೆಯುವುದು, ಹಗ್ಗಜಗ್ಗಾಟ, ಲಕ್ಕಿಸರ್ಕಲ್, ಲಗೋರಿ, ಗುಂಡೆಸತ ಇತ್ಯಾದಿ ಇದಲ್ಲದೆ ಮಕ್ಕಳಿಗೆ ಛದ್ಮವೇಷ, ಕಡ್ಡೆಹೆಕ್ಕುವುದು, ಲಿಂಬೆಚಮಚ, 100 ಮೀಟರ್ ಓಟ ಇತ್ಯಾದಿ ನಡೆಯಲಿದೆ.

ಸಂಜೆ ಸಮಾರೋಪ ನಡೆಯಲಿದ್ದು, ಶಾಸಕ ಸಂಜೀವ ಮಠಂದೂರು, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಜನಾರ್ದನ, ಶಿವಕೃಪಾ ಅಡಿಟೋರಿಯಂನ ಹರಿ ಕೋಡಿಬೈಲು, ಕುಂಬ್ರ ಮೂರ್ತೆದಾರರ ಸಹಕಾರಿ ಸಂಘದ ಅಧ್ಯಕ್ಷ ಆರ್.ಸಿ ನಾರಾಯಣ, ನ್ಯಾಯವಾದಿ ಅಕ್ಷತಾ ಯುವರಾಜ್ ಶೆಟ್ಟಿ, ಅರ್ಚಕ ಹರೀಶ್ ಶಾಂತಿ ಮತ್ತಿತರರು ಭಾಗವಹಿಸಲಿದ್ದಾರೆ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಯುವಕ ಮಂಡಲದ ಗೌರವಾಧ್ಯಕ್ಷ ಪ್ರೇಮ್‌ರಾಜ್ ರೈ ಪರ್ಪುಂಜ, ಅಧ್ಯಕ್ಷ ಪ್ರೀತೇಶ್ ಗೌಡ, ಸ್ನೇಹ ಮಹಿಳಾ ಮಂಡಲದ ಗೌರವಾಧ್ಯಕ್ಷೆ ಬೇಬಿ ರೈ, ಅಧ್ಯಕ್ಷೆ ಪ್ರಮೀಳಾ ಟಿ ಹಾಗೂ ಪದಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.