ಮರೆಯಾದ ಹಕ್ಕಿಗೂಡು-ನಮ್ರತಾ.ಎಂ.

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಮ್ಮ ಮನೆಯ ಅಂಗಳದ ಹೂವಿನಗಿಡದಲ್ಲಿ ಎರಡು ಹಕ್ಕಿಗಳು ಒಂದು ಸುಂದರವಾದ ಗೂಡು ಕಟ್ಟಿದ್ದವು. ಅದರಲ್ಲಿ ಎರಡು ಪುಟ್ಟ ಮುದ್ದಾದ ಹಕ್ಕಿ ಮರಿಗಳು. ನನಗೆ ಅದನ್ನು ನೋಡುವುದು ಅಂದರೆ ತುಂಬಾ ಖುಷಿ. ದಿನಾ ಅದರ ಅಮ್ಮ ಹೊರಗೆ ಹೋಗಿ ಕಾಳುಗಳನ್ನು ತಂದು ಮರಿಗಳಿಗೆ ತಿನ್ನಿಸುತ್ತಿತ್ತು. ದಿನಾ ಬೆಳಿಗ್ಗೆ ಹಕ್ಕಿಗಳಿಗೆ “ಗುಡ್ ಮಾರ್ನಿಂಗ್” ಹೇಳಿ ನನ್ನ ಕೆಲಸ ಮುಂದುವರಿಸುತ್ತಿದೆ. ಶಾಲೆಯಿಂದ ಬಂದ ಕೂಡಲೇ ಅದರ ಬಳಿ ಸಾಗಿ ಒಮ್ಮೆ ನೋಡದಿದ್ದರೆ ನನಗೆ ಸಮಾದಾನವಾಗುತ್ತಿರಲಿಲ್ಲ.

ಅಂದು ಶಾಲೆಯಿಂದ ಬರುವಾಗ ತುಂಬಾ ತಡವಾಗಿತ್ತು ವಿಪರೀತ ಹಸಿವಾಗಿತ್ತು. ತುಂಬಾ ಸುಸ್ತು ಬೇರೆ ಓಡಿಕೊಂಡು ಬಂದವಳೇ ಕಾಲು ತೊಳೆದು ಒಳಗೆ ಹೋಗಿ ತಿಂಡಿ ತಿನ್ನಲು ಕುಳಿತೆನು. ಆಗ ಅಮ್ಮ ಸ್ವಲ್ಪ ಬೇಸರದಲ್ಲಿರುವಂತೆ ಕಂಡಿತು. ಕಾರಣ ಕೇಳಿದಾಗ ನನಗೆ ತುಂಬಾ ಬೇಸರವಾಯಿತು. ನನಗೆ ಅಮ್ಮ ಹೀಗೆ ಹೇಳಿದರು.

“ಇಂದು ಮಧ್ಯಾಹ್ನ ನಾನು(ಅಮ್ಮ) ಒಳಗಿದ್ದೆ . ಆಗ ಹಕ್ಕಿಗಳು ಜೋರಾಗಿ ಕಿರುಚಿದ ಹಾಗೆ ಕೇಳಿತು. ಓಡಿ ಬಂದು ನೋಡಿದರೆ ಒಂದು ದೊಡ್ಡ ಕೇರೆ ಹಾವು ಕ್ರೋಟಾನ್ ಗಿಡ ಹಾಗೂ ಅದರಲ್ಲಿದ್ದ ಗೂಡನ್ನು ಕೂಡ ಸುತ್ತುಕೊಂಡಿದೆ. ಅದರ ಬಾಯಲ್ಲಿ ಆ ಪುಟ್ಟ ಹಕ್ಕಿ ಮರಿ ವಿಲವಿಲನೆ ಒದ್ದಾಡುತ್ತಿದೆ. ನೋಡುತ್ತಿರುವ ಹಾಗೇ ಆ ಮರಿಯನ್ನು ಗುಳುಂ ನುಂಗಿತು. ಇನ್ನೊಂದು ಮರಿಯನ್ನು ಉಳಿಸಿಕೊಳ್ಳುವ ಎಂದು ದೊಡ್ಡ ಕೋಲನ್ನು ಹಿಡಿದು ಹಾವನ್ನು ಓಡಿಸಿದರೆ ಅಲ್ಲಿ ಇನ್ನೊಂದು ಮರಿಯೂ ಇಲ್ಲ. ಅದನ್ನು ಮೊದಲೇ ನುಂಗಿದೆ. ಹಕ್ಕಿಗಳೆರಡು ತಮ್ಮ ಪುಟ್ಟ (ಹಕ್ಕಿ) ಕಂದಮ್ಮಗಳನ್ನು ಕಳೆದುಕೊಂಡು ಅಸಹಾಯಕರಾಗಿ ರೋದಿಸುತ್ತಿರುವುದನ್ನು ಕಂಡಾಗ ತುಂಬಾ ವೇದನೆಯಾಯಿತು” ಎಂದು ಅಮ್ಮ ಹೇಳಿ ನಿಲ್ಲಿಸಿದಾಗ ನನ್ನ ಬಾಯಲ್ಲಿದ್ದ ತಿಂಡಿಯು ಹಾಗೇ ಗಂಟಲಲ್ಲಿ ಸಿಕ್ಕಿಕೊಂಡ ಹಾಗಾಯಿತು.

ಛೇ! ಆ ಅಮ್ಮ ಹಕ್ಕಿ ಕಣ್ಣೆದುರೇ ಮರಿಗಳನ್ನು ಕಳೆದುಕೊಂಡಾಗ ಹೇಗೆ ಸಹಿಸಿಕೊಂಡಿರಬಹುದು, ಎಂದು ಯೋಚಿಸಲೂ ಭಯವಾಯಿತು. ತಿಂಡಿ ತಿನ್ನಲೂ ಮನಸ್ಸಾಗದೇ ಎದ್ದಾಗ ಅಮ್ಮನೇ ಸಮಾಧಾನ ಮಾಡಿದರು. ಇದೆಲ್ಲಾ ಪ್ರಕೃತಿ ನಿಯಮ ನಾವೇನೂ ಮಾಡಲು ಸಾಧ್ಯವಿಲ್ಲ. ಭಾರವಾದ ಮನಸ್ಸಿನಿಂದ ಗಿಡದ ಬಳಿ ಬಂದಾಗ ಚದುರಿ ಬಿದ್ದಿದ್ದ ಗೂಡು ನನ್ನನ್ನು ನೋಡಿ ಅತ್ತಂತಾಯಿತು.

ನಮ್ರತಾ.ಎಂ.
9ನೇ ತರಗತಿ
ಸ.ಪ.ಪೂ. ಪ್ರೌಢಶಾಲೆ
ಕೊಂಬೆಟ್ಟು ಪುತ್ತೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.