ಈಶ್ವರಮಂಗಲ ಶ್ರೀಪಂಚಲಿಂಗೇಶ್ವರ ದೇವಳದಲ್ಲಿ ಪ್ರಶ್ನಾಚಿಂತನೆ

Puttur_Advt_NewsUnder_1
Puttur_Advt_NewsUnder_1

 

ಈಶ್ವರಮಂಗಲ: ಇಲ್ಲಿನ ಪಂಚಲಿಂಗೇಶ್ವರ ದೇವರ ಸಾನ್ನಿಧ್ಯದಲ್ಲಿ ಶ್ರೀ ಕಿನ್ನಿಮಾಣಿ-ಪೂಮಾಣಿ ದೈವಗಳ ಆಯುಧ ಪುನರ್ ನಿರ್ಮಾಣದ ಬಗ್ಗೆ ಪ್ರಶ್ನಾ ಚಿಂತನೆ ಕಾರ್ಯಕ್ರಮವು ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ದೈವಜ್ಞ ಮಹೇಶ್ ಭಟ್ ನೇತೃತ್ವದಲ್ಲಿ ಆ.21 ರಂದು ನಡೆಯಿತು.

ದೇವರ ಮೂಲಸ್ಥಾನ ಮೆಣಸಿನಕಾನ ಅದಿಂಜವು ಅಭಿವೃದ್ಧಿಯಾಗದೆ ಯಾವುದೂ ಸಾಧ್ಯವಿಲ್ಲ ಎನ್ನುವುದು ಪ್ರಶ್ನೆ ಚಿಂತನೆಯಲ್ಲಿ ಕಂಡು ಬಂದಿರುವುದರಿಂದ ಮೂಲಸ್ಥಾನದ ಅಭಿವೃದ್ಧಿಗೆ ಸಂಕಲ್ಪ ಮಾಡಿ ದೇವಸ್ಥಾನದಲ್ಲಿ ಕೆಲವು ದಾರ್ಮಿಕ ವಿಧಿ-ವಿಧಾನವನ್ನು ಮಾಡಿ ಮೂಲಸ್ಥಾನದಲ್ಲಿ , ಕ್ಷೇತ್ರದ ತಂತ್ರಿಗಳ ಉಪಸ್ಥಿತಿಯಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿ , ಮುಂದೆ ಅಷ್ಟಮಂಗಲ ಪ್ರಶ್ನೆ ಮೂಲಕ ಚಿಂತನೆ ಮಾಡುವುದು ಎಂದು ತೀರ್ಮಾನಿಸಲಾಯಿತು.

ಕುಂಟಾರು ಬ್ರಹ್ಮಶ್ರೀ ಶ್ರೀಧರ ತಂತ್ರಿಗಳು, ಆಡಳಿತಾಧಿಕಾರಿ ಸಂದೇಶ್ ಕೆ ಎನ್, ಮಾಜಿ ಆಡಳಿತ ಮೊಕ್ತೇಸರರಾದ ನರಸಿಂಹ ಪಕ್ಕಳ, ಜಲಧರ ಶೆಟ್ಟಿ,ಮಹಿಳ್ನಾತ್ ಶೆಟ್ಟಿ ಸಾಂತ್ಯ, ಪ್ರವೀಣ್ ರೈ ಮೇನಾಲ, ಗೋಲಾಕೃಷ್ಣ ಕುಂಜತ್ತಾಯ, ಮಾಜಿ ಶಾಸಕಿ ಮಲ್ಲಿಕಾಪ್ರಸಾದ್, ತಿಲಕ್ ಭಂಡಾರಿ ಮೇನಾಲ, ಕೃಷ್ಣರಾಜ್ ಭಂಡಾರಿ ಮೇನಾಲ, ಸಂದೀಪ್ ಕಾರಂತ, ಸುರೇಶ್ ಆಳ್ವ ಸಾಂತ್ಯ, ಸುಬಾಸ್ ರೈ ಮೈರೋಲು, ವಿಕ್ರಂ ರೈ ಸಾಂತ್ಯ, ಆನಂದ ರೈ ಸಾಂತ್ಯ. ರತನ್ ನಾಯಕ್, ಅಶ್ವಿಥ್ ಮಡ್ಯಲಮಜಲು, ನಾಗಪ್ಪ ಗೌಡ ಬೊಮ್ಮೆಟ್ಟಿ, ಪ್ರದೀಪ್ ರೈ ಮೇನಾಲ, ಶ್ರೀನಿವಾಸ್ ಹಿರ್‍ಯಾಣ, ನಾರಾಯಣ ಗೌಡ ಉರಿಕ್ಯಾಡಿ, ಶಂಕರ ಪಟ್ರೋಡಿ, ರಾಂಪ್ರಸಾದ್ ಆಳ್ವ ಮೇನಾಲ, ಜಯಪ್ರಕಾಶ್ ಶೆಟ್ಟಿ ನೂಜಿಬೈಲು , ಸದಾಶಿವ ರೈ ನಡುಬೈಲು, ಜಯಪ್ರಕಾಶ್ ಶೆಟ್ಟಿ ನೂಜಿಬೈಲು, ಕೇಶವ ಕೋರಿಗದ್ದೆ, ಚಿನ್ಮಯ ರೈ ನಡುಬೈಲು ಮತ್ತು ಭಕ್ತರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.