Breaking News

ಶ್ರೀ ಗಜಾನನ ವಿದ್ಯಾಸಂಸ್ಥೆಯ ವಠಾರ ಹನುಮಗಿರಿಯಲ್ಲಿ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ

Puttur_Advt_NewsUnder_1
Puttur_Advt_NewsUnder_1

ಈಶ್ವರಮಂಗಲ: ಶ್ರೀ ಗಜಾನನ ವಿದ್ಯಾಸಂಸ್ಥೆಯ ವಠಾರದಲ್ಲಿ ನವಚೇತನ ಮಿತ್ರವೃಂದ ಇದರ ವತಿಯಿಂದ ಆ.23ರಂದು ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನಡೆಯಿತು. ಹನುಮಗಿರಿ ಶ್ರೀ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ಬೆಳಿಗ್ಗೆ ಗಣಪತಿ ಹೋಮ, ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗಾಗಿ ವಿವಿಧ ಸಾಂಸ್ಕೃತಿಕ ಮತ್ತು ಆಟೋಟ ಸ್ಪರ್ಧೆಗಳು ನಡೆಯಿತು.

ಕೃಷ್ಣ ವೇಷಾಧಾರಿಗಳ ಮೆರವಣಿಗೆಯನ್ನು ಶ್ರೀಕೃಷ್ಣ ವೆಜಿಟೇಬಲ್ ಮಾಲಕ ಜಯಾನಂದರವರು ತೆಂಗಿನ ಕಾಯಿ ಒಡೆಯುವುದರ ಮೂಲಕ ನೆರವೇರಿಸಿದರು.  ಕೃಷ್ಣವೇಷಧಾರಿಗಳು ಟ್ಯಾಬ್ಲೋಗಳೊಂದಿಗೆ ಹನುಮಗಿರಿಯಿಂದ ಹೊರಟು ಪೇಟೆಯ ಹೃದಯಭಾಗದ ಸಂದೀಪ್ ಉನ್ನಿಕೃಷ್ಣನ್ ವೃತ್ತದವರೆಗೆ ಆಕರ್ಷಕ ಮೆರವಣಿಗೆ ಸಾಗಿತು.

ನವಚೇತನ ಮಿತ್ರವೃಂದದ ಗೌರವಾಧ್ಯಕ್ಷ ಡಾ.ಶ್ರೀ ಕುಮಾರ್ ಕತ್ರಿಬೈಲುರವರು ಧಾರ್ಮಿಕ ಸಭೆಯ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಪ್ರತಿಯೊಬ್ಬ ಮಗುವಿನ ಹುಟ್ಟುಹಬ್ಬವನ್ನು ಮನೆಯಲ್ಲಿ ಆಚರಣೆ ಮಾಡುತ್ತಾರೆ. ಆದರೆ ಕೃಷ್ಣನ ಹುಟ್ಟುಹಬ್ಬವವನ್ನು ಬೇರೆ ಬೇರೆ ಕಡೆಗಳಲ್ಲಿ ಮಕ್ಕಳಿಗೆ ಕೃಷ್ಣನ ವೇಷವನ್ನು ಧರಿಸಿ ಸಾರ್ವಜನಿಕವಾಗಿ ಆಚರಣೆ ಮಾಡುತ್ತಾರೆ. ಧರ್ಮವನ್ನು ಎಲ್ಲರೂ ರಕ್ಷಣೆ ಮಾಡಬೇಕು, ನಾವು ಮಕ್ಕಳನ್ನು ಸಣ್ಣವರಿರುವಾಗಲೇ ಒಳ್ಳೆಯ ರೀತಿಯಿಂದ ಬೆಳೆಸಬೇಕು. ಚೋರನಾಗದೆ ರಾಜನಾಗಿ ಬೆಳೆಸಬೇಕು ಎಂದು ಹೆತ್ತವರಿಗೆ ಕಿವಿ ಮಾತನ್ನು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಸಂಪ್ಯ ಠಾಣಾ ನಿರೀಕ್ಷಕ ಸಕ್ತಿವೇಲುರವರು ಮಾತನಾಡಿ ಕೃಷ್ಣನು ದುಷ್ಟರನ್ನು ಅಡಗಿಸಿ ಒಳ್ಳೆಯವರನ್ನು ರಕ್ಷಿಸಿದ್ದಾನೆ. ಅದೇ ರೀತಿ ನಮ್ಮ ಜೀವನದಲ್ಲಿ ಆ ಕೆಲಸವನ್ನು ಅಳವಡಿಸಿಕೊಳ್ಳಬೇಕು. ಇಂತಹ ಸಂಸ್ಕೃತಿಯನ್ನು ಬೆಳೆಸುವಂತೆ ಆಗಲಿ. ಸತ್ಯ, ಧರ್ಮ ಬೆಳವಣಿಗೆ ಆಗಲಿ ಎಂದು ಶುಭ ಹಾರೈಸಿದರು.

ಧರ್ಮದರ್ಶಿ ಶಿವರಾಂ ಪಿ. ಮಾತನಾಡಿ ಧರ್ಮವನ್ನು ರಕ್ಷಣೆ ಮಾಡಬೇಕು. ಶ್ರೀ ಕೃಷ್ಣನ ಆಚಾರವನ್ನು ಅನುಸರಿಸಬೇಕು.  ಸಮಾಜಕ್ಕೆ ನಮ್ಮಿಂದ ಒಳ್ಳೆಯ ಕಾರ್ಯವಾಗಬೇಕು ಎಂದು ಹೇಳಿ ಶುಭ ಹಾರೈಸಿದರು.

ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀ ರಾಮ ಪಕ್ಕಳ ಮಾತನಾಡಿ ಮಿತ್ರವೃಂದದ ಸದಸ್ಯರೆಲ್ಲರೂ ಒಂದೇ ಮನಸಿನಲ್ಲಿ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಿಕೊಂಡು ಬಂದಿದ್ದಾರೆ. ಪ್ರತೀ ವರ್ಷ ಕೃಷ್ಣವೇಷ ಧರಿಸುವ ಮಕ್ಕಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಇದಕ್ಕೆ ತಂದೆ ತಾಯಿಗಳು ಬಹಳ ಶ್ರಮ ವಹಿಸುತ್ತಿದ್ದಾರೆ.

ನಿವೃತ್ತ ಶಿಕ್ಷಕ ನಾಗಪ್ಪ ಗೌಡ ಬೊಮ್ಮೆಟ್ಟಿ ಶುಭ ಹಾರೈಸಿದರು. ಆನಂದ ರೈ ಸಾಂತ್ಯ, ಸಂದೀಪ್ ಕಾರಂತ, ಪ್ರದೀಪ್ ನಾಯರ್ ಕುಂಟಾಪು, ಸುಖೇಶ್ ರೈ, ಭರತ್ ರೈ ಮೂಡಾಯೂರು ಪುಷ್ಪ ನೀಡಿ ಅತಿಥಿಗಳನ್ನು ಸ್ವಾಗತಿಸಿದರು. ಶಿಕ್ಷಕ ದೇವಿಪ್ರಕಾಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ರಾಜೇಶ್ ಡಿ., ಮಿತ್ರವೃಂದದ ಪದಾಧಿಕಾರಿಗಳು ಸಹಕರಿಸಿದರು. ಮೆರವಣಿಗೆಯಲ್ಲಿ ಸುಮಾರು 165 ಮುದ್ದುಕೃಷ್ಣ ಹಾಗೂ ರಾಧೆಯರು ಪಾಲ್ಗೊಂಡರು. ನವಚೇತನ ಮಿತ್ರವೃಂದದ ಅಧ್ಯಕ್ಷ ಪ್ರಶಾಂತ್ ನಾಯರ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಸಂಚಾಲಕರಾದ ಹರೀಶ್ ರಾವ್ ವಂದಿಸಿದರು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಕಬಡ್ಡಿ( ಹುಡುಗರಿಗೆ), ವಾಲಿಬಾಲ್(ಹುಡುಗಿಯರಿಗೆ), ಮಡಕೆ ಒಡೆಯುವುದು, ಕಬಡ್ಡಿ(ಪುರುಷರಿಗೆ), ಮಡಕೆ ಒಡೆಯುವುದು, ಸವಾಲಿನ ಗಂಟು(ಮಹಿಳೆಯರಿಗೆ)ಸ್ಪರ್ಧೆಗಳು ನಡೆಯಿತು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.