ಸೋಷಿಯಲ್ ಮೀಡಿಯಾ ಬಳಕೆದಾರರ ಪ್ರೊಫೈಲ್‌ಗೆ ಆಧಾರ್ ಲಿಂಕ್ ಅಗತ್ಯ : ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಕೇಂದ್ರ ಸರಕಾರ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸಾಮಾಜಿಕ ಜಾಲತಾಣಗಳ ಬಳಕೆದಾರರ ಪ್ರೊಫೈಲ್‌ಗಳ ಜತೆಗೆ ಆಧಾರ್ ಸಂಖ್ಯೆ ಜೋಡಿಸುವುದು ಅಗತ್ಯ ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ರಾಷ್ಟ್ರ ವಿರೋಧಿ ಕೃತ್ಯಗಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಯಾಗುತ್ತಿದೆ. ಇದರ ಜತೆಗೆ ಹಿಂಸೆಗೆ ಪ್ರಚೋದನೆ, ನೀಲಿ ಚಿತ್ರ ಹಾಗೂ ಅಶ್ಲೀಲ ಸಂದೇಶಗಳ ಪ್ರಸರಣ ಮೊದಲಾದವುಗಳಿಗೂ ಇದು ಬಳಕೆಯಾಗುತ್ತಿದೆ. ಹೀಗಾಗಿ ಅವಕ್ಕೆ ಕಡಿವಾಣ ಹಾಕಲು ಆಧಾರ್ ಜೋಡಣೆ ಕಡ್ಡಾಯ ಎಂದು ಸೈಬರ್ ಕ್ರೈಮ್ ವಿಭಾಗದ ಹಿರಿಯ ಕಾನೂನು ಅಧಿಕಾರಿಯೊಬ್ಬರು ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.

ಇದೇ ಪ್ರಕರಣದ ವಿಚಾರಣೆ ವೇಳೆ ತಮಿಳುನಾಡು ಸರಕಾರದ ಪರ ವಾದಿಸಿದ ಅಟಾರ್ಜಿ ಜನರಲ್ ಕೆ.ಕೆ. ವೇಣುಗೋಪಾಲ್ ಸಹ ಆಧಾರ್ ಜೋಡಣೆ ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪಿಐಎಲ್‌ಗಳ ಸಲ್ಲಿಕೆ: ಸಾಮಾಜಿಕ ಸ್ವಾಸ್ಥ್ಯ ಹಾಳುಗೆಡಹುವಂತಹ ನಕಲಿ ಸುದ್ದಿ, ಮಾನಹಾನಿಕರ ಹೇಳಿಕೆಗಳು, ಹಿಂಸಾಚಾರಕ್ಕೆ ಪ್ರಚೋದನೆ ಮತ್ತು ಅಶ್ಲೀಲ ವಿಷಯಗಳ ಪ್ರಸರಣ ತಡೆಯಲು ಹಾಗೂ ಉಗ್ರ ಕೃತ್ಯಗಳ ಮೇಲೆ ನಿಗಾ ಇರಿಸಲು ಸಾಮಾಜಿಕ ಬಳಕೆ ದಾರರ ಪ್ರೊಫೈಲ್‌ಗಳನ್ನು ಆಧಾರ್ ಸಂಖ್ಯೆಗಳೊಂದಿಗೆ ಸಂಪರ್ಕಿಸುವ ಅಗತ್ಯವಿದೆ ಎಂದು ಆಂಟನಿ ಕ್ಲಮನ್ ರುಬಿನ್ ಎಂಬುವರು ಕಳೆದ ಜುಲೈನಲ್ಲಿ ಮದ್ರಾಸ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಬಾಂಬೆ ಹಾಗೂ ಮಧ್ಯಪ್ರದೇಶ ಹೈಕೋರ್ಟ್‌ನಲ್ಲೂ ಇದೇ ರೀತಿಯ ಅರ್ಜಿಗಳು ನಂತರದಲ್ಲಿ ಸಲ್ಲಿಕೆಯಾಗಿವೆ. ವಿವಿಧ ಹೈಕೋರ್ಟ್‌ಗಳಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ತರಿಸಿಕೊಂಡು ವಿಚಾರಣೆ ನಡೆಸಬೇಕೆಂದು ಫೇಸ್‌ಬುಕ್ ಸರ್ವೋಚ್ಛ ನ್ಯಾಯಾಲಯದಲ್ಲಿ ಮನವಿ ಮಾಡಿದೆ.

  • 40 ಕೋಟಿ ಭಾರತದಲ್ಲಿ ವಾಟ್ಸಪ್ ಬಳಕೆದಾರರ ಸಂಖ್ಯೆ
  • 31.36 ಕೋಟಿ ಭಾರತದಲ್ಲಿ ಫೇಸ್ ಬುಕ್ ಬಳಕೆದಾರರ ಸಂಖ್ಯೆ

ಮದ್ರಾಸ್, ಬಾಂಬೆ ಮತ್ತು ಮಧ್ಯಪ್ರದೇಶ ಹೈಕೋರ್ಟ್‌ಗಳಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಹಸ್ತಾಂತರಿಸಿಕೊಂಡು ಅವುಗಳ ವಿಚಾರಣೆ ನಡೆಸಲು ಒಪ್ಪಿಗೆ ಸೂಚಿಸಿದ ಸುಪ್ರೀಂ ಕೋರ್ಟ್, ಸೆ.13ರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಕೋರಿ ಕೇಂದ್ರ ಸರಕಾರ, ಗೂಗಲ್, ಟ್ವೀಟರ್ ಹಾಗೂ ಯೂಟ್ಯೂಬ್‌ಗಳಿಗೆ ನೋಟಿಸ್ ಜಾರಿಗೊಳಿಸಿದೆ. ಇದೇ ವೇಳೆ, ‘ವಿಚಾರಣೆ ಮುಂದುವರಿಸಬಹುದು, ಆದರೆ ಅಂತಿಮ ಆದೇಶ ನೀಡುವಂತಿಲ್ಲ’ ಎಂದು ಮದ್ರಾಸ್ ಹೈಕೋರ್ಟ್‌ಗೆ ನ್ಯಾಯಮೂರ್ತಿ ದೀಪಕ್ ಗುಪ್ತಾ ಅವರ ಪೀಠ ನಿರ್ದೇಶನ ನೀಡಿತ್ತು.

ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆ: ಫೇಸ್‌ಬುಕ್ ಮತ್ತು ವಾಟ್ಸಆಪ್ ಪರ ಕ್ರಮವಾಗಿ ವಕೀಲ ಮುಕುಲ್ ರೋಹಟಗಿ ಹಾಗೂ ಕಪಿಲ್ ಸಿಬಲ್ ವಾದ ಮಂಡಿಸಿದ್ದು, `ಸೋಷಿಯಲ್ ಮೀಡಿಯಾ ಬಳಕೆದಾರರ ಪ್ರೊಫೈಲ್‌ಗಳಿಗೆ ಆಧಾರ್ ಲಿಂಕ್ ಮಾಡುವ ವಿಚಾರದಲ್ಲಿ ವ್ಯಕ್ತಿಯ ಖಾಸಗಿತನ ಹಕ್ಕಿನ ವಿಚಾರ ಪ್ರಮುಖವಾಗುತ್ತದೆ. ಒಂದೇ ವಿಷಯದ ಕುರಿತ ಅರ್ಜಿಗಳನ್ನು ಮೂರು ಹೈಕೋರ್ಟ್‌ಗಳು ವಿಚಾರಣೆ ನಡೆಸಿ ಭಿನ್ನ ತೀರ್ಪು ನೀಡಿದಲ್ಲಿ ಗೊಂದಲ ಸೃಷ್ಠಿಯಾಗುತ್ತದೆ. ಹಾಗಾಗಿ ಸುಪ್ರೀಂ ಕೋರ್ಟ್ ಈ ವಿಷಯವನ್ನು ನಿರ್ಧರಿಸಲಿ’ ಎಂದು ಪ್ರತಿಪಾದಿಸಿದರು. ‘ಕ್ರಿಮಿನಲ್  ಪ್ರಕರಣ ಗಳ ತನಿಖೆಯ ಸಂದರ್ಭದಲ್ಲಿ ತನಿಖಾ ಸಂಸ್ಥೆಗಳೊಂದಿಗೆ ಸೋಷಿಯಲ್ ಮೀಡಿಯಾದಲ್ಲಿನ ಡೇಟಾ ಹಂಚಿಕೊಳ್ಳು ವಂತೆ ಸರ್ವಿಸ್ ಪ್ರೊವೈಡರ್‌ಗಳಿಗೆ ಮನವಿ ಮಾಡಿ ಕೊಳ್ಳಬೇಕೇ ಅಥವಾ ಬೇಡವೇ ಎಂಬ ಗೊಂದಲವನ್ನು ಸುಪ್ರಿಂ ಕೋರ್ಟ್ ನಿರ್ಧರಿಸಬೇಕು’ ಎಂದೂ ಅವರು ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.