ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಿಂದ ನೆರೆ ಪರಿಹಾರ ನಿಧಿಗೆ 10ಲಕ್ಷ ರೂಪಾಯಿ ದೇಣಿಗೆ

Puttur_Advt_NewsUnder_1
Puttur_Advt_NewsUnder_1

ವಿಟ್ಲ: ಕರ್ನಾಟಕದಾದ್ಯಂತ ಭೀಕರ ಅತಿವೃಷ್ಟಿಯಿಂದಾಗಿ ಸಂಭವಿಸಿ ಹಾನಿಗೊಳಗಾದ ಸಂತ್ರಸ್ತರ ನೆರವಿಗಾಗಿ ಮುಖ್ಯಮಂತ್ರಿಗಳ ನೆರೆ ಪರಿಹಾರ ನಿಧಿಗೆ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಿಂದ ಹಾಗೂ ಒಡಿಯೂರು ಶ್ರೀ ವಿವಿಧೊದ್ದೇಶ ಸೌಹಾರ್ದ ಸಹಕಾರಿಯಿಂದ ಹತ್ತು ಲಕ್ಷರೂಪಾಯಿಯ ಚೆಕ್ಕನ್ನು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರು ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತುರವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಒಡಿಯೂರು ಶ್ರೀ ವಿವಿಧೊದ್ದೇಶ ಸೌಹಾರ್ದ ಸಹಕಾರಿಯಿಂದ ಅಧ್ಯಕ್ಷ ಎ. ಸುರೇಶ್ ರೈ, ನಿರ್ದೇಶಕರುಗಳಾದ ಪಿ.ಲಿಂಗಪ್ಪ ಗೌಡ, ವೇಣುಗೋಪಾಲ ಮಾರ್ಲ, ದೇವಪ್ಪ ನೋಂಡ, ತಾರಾನಾಥ ಶೆಟ್ಟಿ ಒಡಿಯೂರು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಉಗ್ಗಪ್ಪ ಶೆಟ್ಟಿ ಕೊಂಬಿಲ, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಕಾರ್ಯನಿರ್ವಾಹಕ ಪದ್ಮನಾಭ ಒಡಿಯೂರು, ಹಿರಿಯ ಪತ್ರಕರ್ತ ಯಶವಂತ ವಿಟ್ಲ, ಬಿ.ಜೆ.ಪಿ. ದ.ಕ. ಜಿಲ್ಲಾ ಕಾರ್ಯದರ್ಶಿ ರಾಮದಾಸ್ ಶೆಟ್ಟಿ, ಬಂಟ್ವಾಳ ಕ್ಷೇತ್ರ ಕಾರ್ಯದರ್ಶಿ ರಮಾನಾಥ ರೈ, ಬಿ.ಜೆ.ಪಿ. ಕನ್ಯಾನ – ಕರೋಪಾಡಿ ಗ್ರಾಮ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮುಂಬೈಯ ಗುರುಭಕ್ತರು, ಒಡಿಯೂರು ಸಹಕಾರಿಯ ಹಾಗೂ ಶ್ರೀ ಸಂಸ್ಥಾನದ ಸಿಬ್ಬಂದಿ ವರ್ಗದವರು ಪರಿಹಾರ ನಿಧಿಗೆ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.