Breaking News

ಈಶ್ವರಮಂಗಲ: ಹಿಂಜಾವೇಯಿಂದ ನಿರ್ಮಾಣಗೊಂಡ ಮನೆ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಗೃಹಪ್ರವೇಶ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಈಶ್ವರಮಂಗಲದ ಬೆಳ್ಳಿಚಡವು ಎಂಬಲ್ಲಿನ ಜಲಧರ ಕಾಲೋನಿಯಲ್ಲಿ ಬಡತನದ ಬೇಗೆಯಲ್ಲಿರುವ ಸಣ್ಣ ಕುಟುಂಬವೊಂದರ ಮನೆಯೊಂದು ಮುರಿದು ಬಿದ್ದ ಹಿನ್ನೆಲೆಯಲ್ಲಿ ಅವರಿಗೆ ಆಸರೆಯಾದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ತಾತ್ಕಾಲಿಕವಾಗಿ ನಿರ್ಮಿಸಿಕೊಟ್ಟ ಮನೆಯನ್ನು ಆ.23ರಂದು ಶ್ರೀಕೃಷ್ಣಜನ್ಮಾಷ್ಟಮಿಯಂದು ಗೃಹಪ್ರವೇಶ ಮಾಡಿಸಿ ಕೊಡಲಾಯಿತು.

ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಸಮೀಪದ ಬೆಳ್ಳಿಚಡವು ಎಂಬಲ್ಲಿ ಜಲಧರ ಕಾಲೋನಿಯಲ್ಲಿ ಮಾನಸಿಕ ಅಸ್ವಸ್ಥಗೊಂಡಿರುವ ಪುತ್ರನನ್ನು ಸಲಹುತ್ತಾ ಜೀವನ ಸಾಗಿಸುತ್ತಿದ್ದ ಪಿಜಿನ ಎಂಬವರ ಮನೆ ಮುರಿದು ಬಿದ್ದಿದ್ದು, ಅವರಿಗೆ ತಾತ್ಕಾಲಿಕ ಮನೆ ನಿರ್ಮಾಣ ಮಾಡುವ ಭರವಸೆಯನ್ನು ಹಿಂದೂ ಜಾಗರಣಾ ವೇದಿಕೆ ನೀಡಿತ್ತು. ಈ ನಿಟ್ಟಿನಲ್ಲಿ ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅವರ ಸಹಕಾರದೊಂದಿಗೆ ಹಾಗೂ ಛತ್ರಪತಿ ವಾಹನ ಚಾಲಕ ಮಾಲಕ ಸಂಘದ ಸದಸ್ಯರ ಸಹಕಾರದೊಂದಿಗೆ ಮರು ನಿರ್ಮಾಣ ಮಾಡಿಕೊಡಲಾಗಿತ್ತು. ಇದೀಗ ಆ.23ರಂದು ತಾ.ಪಂ ರಾಧಾಕೃಷ್ಣ ಬೋರ್ಕರ್ ಅವರು ಮನೆಯ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.

ಭಜನಾ ಕಾರ್ಯಕ್ರಮದ ಮೂಲಕ ನೂತನ ಗೃಹಪ್ರವೇಶ ಕಾರ್ಯಕ್ರಮ ನಡೆಯಿತು. ಮನೆಯ ಯಜಮಾನ ಪಿಜಿನ ದಂಪತಿ ದೀಪ ಬೆಳಗಿಸಿದರು. ಕಾವು ಸಿ.ಎ ಬ್ಯಾಂಕ್‌ನ ಉಪಾಧ್ಯಕ್ಷ ಪ್ರವೀಣ್ ರೈ, ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಉತ್ಸವ ಸಮಿತಿ ಅಧ್ಯಕ್ಷ ನಿತಿನ್ ಪ್ರಸಾದ್ ಹೆಗ್ಡೆ, ಹಿಂದೂ ಜಾಗರಣಾ ವೇದಿಕೆ ತಾಲೂಕು ಘಟಕದ ಕಾರ್ಯದರ್ಶಿ ಚಿನ್ಮಯ್ ರೈ, ಈಶ್ವರಮಂಗಲ ಹಿಂದೂ ಜಾಗರಣ ವೇದಿಕೆ ಈಶ್ವರಮಂಗಲ ಘಟಕದ ಅಧ್ಯಕ್ಷ ಸತೀಶ್ ಸುರುಳಿಮೂಲೆ, ಕಾರ್ಯದರ್ಶಿ ಶಿವಪ್ರಸಾದ್, ರಾಜೇಶ್ ಪಂಚೋಡಿ, ಕೃಷ್ಣ ಮುಂಡ್ಯ, ಸುರೇಶ್ ನಡುಬೈಲ್, ಮಂಜುನಾಥ ಬೆಳ್ಳಿಚಡವು, ಹರೀಶ್ ಬಾಬು, ಅನಿಲ್, ರವೀಂದ್ರ, ಪರಮೇಶ್ವರ ಮತ್ತಿತರ ಕಾರ್ಯಕರ್ತರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.