ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಹೋಮ, ಪಾಕಶಾಲೆ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕರ್ತವ್ಯ ಎಂಬ ಭಾವನೆಯಿಂದ ಸಮಾಜದಲ್ಲಿ ಸೇವೆ ಮಾಡಿದಾಗ ಯಶಸ್ಸು ಸಾಧ್ಯ. ಸೇವೆಯ ಮೂಲಕ ನಮ್ಮನ್ನು ಭಗವಂತನಿಗೆ ಅರ್ಪಣೆ ಮಾಡಬೇಕು. ಸಮಾಜದಿಂದ ಗಳಿಸಿದ ಸಂಪಾದನೆಯ ಒಂದಂಶವನ್ನು ಸಮಾಜಕ್ಕೆ ಅರ್ಪಿಸಿದಾಗ ದೇವರ ಆಶೀರ್ವಾದ ದೊರೆಯಲಿದೆ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ವಿನಯ ಹೆಗ್ಡೆ ಹೇಳಿದರು. ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಆ.24ರಂದು ನಡೆದ ಮಹಾಮೃತ್ಯುಂಜ ಹೋಮ ಹಾಗೂ ನೂತನ ಪಾಕಶಾಲೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಿತ್ಯ ದೇವಸ್ಥಾನಕ್ಕೆ ಹೋಗುವುದರಿಂದ ಮನಸ್ಸಿಗೆ ಸಂತೃಪ್ತಿ ಪ್ರಾಪ್ತಿಯಾಗುತ್ತದೆ. ಕೃತಜ್ಞತಾ ಭಾವನೆ ನಮ್ಮಲ್ಲಿ ಮೂಡುತ್ತದೆ. ಯಶಸ್ಸು ನಮ್ಮ ಕೈಯಲ್ಲೇ ಇದ್ದು ಸೇವೆಯ ಮೂಲಕ ದೇವರ ಅಶೀರ್ವಾದದ ಪಡಿಯಬೇಕು ಎಂದರು. ಹಿಂದುಗಳಾದ ನಮಗೆ ನಮ್ಮ ಧರ್ಮದ ಮೇಲೆ ಅತಿಯಾದ ನಂಬಿಕೆ ಇರಬೇಕು. ಯಾರ ಮೇಲೂ ಧ್ವೇಷ ಇರಬಾರದು, ಕರ್ತವ್ಯ ಭಾವನೆ ನಮ್ಮದಾಗಬೇಕು. ಸಮಾಜದ ಶ್ರೇಯಸ್ಸಿಗಾಗಿ ನಾವು ಪ್ರಾರ್ಥಿಸಬೇಕು. ಆರು ಕಡೆ ವಿದ್ಯಾ ಸಂಸ್ಥೆಗಳಿದ್ದ ಎಲ್ಲಾ ಕಡೆಗಳಲ್ಲಿಯೂ ವಿದ್ಯಾ ಕ್ಷೇತ್ರ ಪ್ರಾರಂಭಕ್ಕೆ ಮುನ್ನ ಅಲ್ಲಿ ದೇವಾಲಯ ಪ್ರಾಶಸ್ತ್ಯ ನೀಡಿರುವುದಾಗಿ ಅವರು ಹೇಳಿದರು.

ಅನ್ನದಾನದ ಪ್ರಾಯೋಜಕತ್ವ
ದೇವಸ್ಥಾನಕ್ಕೆ ಆಗಮಿಸುವ ಮೂಲಕ ಸಂತೃಪ್ತನಾಗಿದ್ದೇನೆ. ಅವಕಾಶ ದೊರೆತರೆ ಮುಂದಿನ ದಿನಗಳಲ್ಲಿ ಕುಟುಂಬ ಸಮೇತವಾಗಿ ದೇವಸ್ಥಾನಕ್ಕೆ ಭೇಟಿ ನೀಡಲಾಗುವುದು. ದೇವಸ್ಥಾನದಲ್ಲಿ ನಿತ್ಯ ಅನ್ನದಾನ ನಡೆಸುವುದಾದರೆ ತಿಂಗಳನಲ್ಲಿ ಒಂದು ದಿನದ ಅನ್ನದಾನ ಪ್ರಾಯೋಕತೆಯನ್ನು ನೀಡುವುದಾಗಿ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ವಿನಯ ಹೆಗ್ಡೆ ಭರವಸೆ ನೀಡಿದರು.

ಆಶೀರ್ವಚನ ನೀಡಿದ ಕೆಮ್ಮಿಂಜೆ ಕಾರ್ತಿಕ್ ತಂತ್ರಿ ಮಾತನಾಡಿ, ವಿದ್ಯಾ ಕೇಂದ್ರ ಹಾಗೂ ಶ್ರದ್ಧಾ ಕೇಂದ್ರಗಳು ಸುವ್ಯವಸ್ಥೆಯಿಂದ ಮುನ್ನಡೆದಾಗ ಗ್ರಾಮದ ಅಭಿವೃದ್ಧಿ ಸಾಧ್ಯ. ಜನತೆಯಲ್ಲಿ ಸುಖ, ಶಾಂತಿ ನೆಲೆಗೂಡಿ, ನೆಮ್ಮದಿಯು ಪ್ರಾಪ್ತಾಯಾಗುತ್ತದೆ. ಧರ್ಮದ ಮೂಲವಾಗಿರುವ ತ್ಯಾಗ ಹಾಗೂ ಅರ್ಪಣೆಯ ಭಾವವನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದ ಅವರು ದೇವಸ್ಥಾನದಲ್ಲಿ ನಡೆಯುವ ಅನ್ನದಾನ ಕ್ಷೇತ್ರದ ಸಾನಿಧ್ಯ ವೃದ್ಧಿಗೆ ಪೂರಕ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಮಾತನಾಡಿ, ಪ್ರೀತಿ, ಭಕ್ತಿ, ಭಕ್ತ ಇದ್ದಾಗ ಕ್ಷೇತ್ರದ ಸಾನಿಧ್ಯ ವೃದ್ಧಿ. ದೇವಸ್ಥಾನದ ಅಭಿವೃದ್ಧಿಯಲ್ಲಿ ಗ್ರಾಮದ ಜನತೆ ಸಹಕಾರ ದೊರೆತಿದೆ. ಸಮರ್ಪಣಾ ಭಾವನೆಯಿಂದ ಜನತೆ ದೇವಸ್ಥಾನದ ಅಭಿವೃದ್ಧಿಯಲ್ಲಿ ತಮನ್ನು ತೊಡಗಿಸಿಕೊಳ್ಳುತ್ತಾರೆ. ನೂತನ ಪಾಕಶಾಲೆಗೆ ಅಕ್ಷಯ ಪಾಕಶಾಲೆ ಎಂದು ಅವರು ಘೋಷಣೆ ಮಾಡಿದರು.
ಮಂಗಳೂರು ಗರೋಡಿ ಸ್ಟೀಲ್ಸ್‌ನ ಪಾಲುದಾರ ಮನೊಜ್ ಕುಮಾರ್ ಸಾರಿಪಳ್ಳ ಶುಭಹಾರೈಸಿದರು. ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ಬೀಡು, ಮೊಕ್ತೇಸರ ವಿನೋದ್ ರೈ ಗುತ್ತು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಹಾಮೃತ್ಯುಂಜಯ ಹೋಮ:
ಲೋಕಕಲ್ಯಾಣಾರ್ಥವಾಗಿ ಕ್ಷೇತ್ರದಲ್ಲಿ ಕೆಮ್ಮಿಂಜೆ ಕಾರ್ತಿಕ್ ತಂತ್ರಿಗಳ ನೇತೃತ್ವದಲ್ಲಿ ಮಹಾ ಮೃತ್ಯುಂಜಯ ಹೋಮ ನಡೆಯಿತು.ವನಿತಾ ವಸಂತಕೃಷ್ಣ ಕೋನಡ್ಕ ಪ್ರಾರ್ಥಿಸಿದರು. ದೇವಾಲಯದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮನಮೋಹನ ರೈ ಚೆಲ್ಯಡ್ಕ ಸ್ವಾಗತಿಸಿದರು. ಸಂಚಾಲಕ ದಿನೇಶ್ ಮರಡಿತ್ತಾಯ ಗುಮ್ಮಟೆಗದ್ದೆ ಪ್ರಸ್ತಾವಣೆಗೈದರು. ಕೋಶಾಧಿಕಾರಿ ಶಿವಪ್ರಸಾದ್ ತಲೆಪ್ಪಾಡಿ ಕಾರ್ಯಕ್ರಮ ನಿರೂಪಿಸಿ, ಪ್ರಧಾನ ಕಾರ್ಯದರ್ಶಿ ವಸಂತಕೃಷ್ಣ ಕೋನಡ್ಕ ವಂದಿಸಿದರು. ಪ್ರಾರಂಭದಲ್ಲಿ ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಸಂಘದವರಿಂದ ಭಜನೆ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪನೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.