Home_Page_Advt
Home_Page_Advt
Home_Page_Advt
Breaking News

ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ನೆರೆ ಸಂತ್ರಸ್ತರಿಗೆ ಸಹಾಯಹಸ್ತ

  • ಮಾನವೀಯ ಮೌಲ್ಯವನ್ನು ಎತ್ತಿ ಹಿಡಿದ ವಿದ್ಯಾರ್ಥಿಗಳು..!!


ಉಪ್ಪಿನಂಗಡಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಈಚೆಗೆ ಸುರಿದ ನಿರಂತರ ಮಳೆ, ತುಂಬಿ ಹರಿದ ಕುಮಾರಧಾರ ಮತ್ತು ನೇತ್ರಾವತಿ ನದಿ ಉಕ್ಕಿ ಹರಿದ ನೆರೆಯಿಂದಾಗಿ ಮನೆ ಕಳೆದುಕೊಂಡ ಮತ್ತು ಮನೆಗಳಿಗೆ ನೀರು ನುಗ್ಗಿ ಸಂಕಷ್ಟಕ್ಕೆ ಒಳಗಾದ ತಮ್ಮ ಸಹಪಾಠಿ ವಿದ್ಯಾರ್ಥಿ ಸಮೂಹದ ನೆರೆ ಸಂತ್ರಸ್ತ ಕುಟುಂಬಗಳಿಗೆ ನೆರವಾಗುವ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಸಹಾಯಹಸ್ತ ನೀಡಿದ್ದಾರೆ.

ಕಾಲೇಜಿನ ವಿದ್ಯಾರ್ಥಿಗಳು ಪರಸ್ಪರ ಚರ್ಚಿಸಿ ತೆಗೆದುಕೊಂಡ ನಿರ್ಧಾರದಂತೆ ವಿದ್ಯಾರ್ಥಿಗಳ ಅನುಕೂಲತೆಗೆ ಅನುಗುಣವಾಗಿ ವಸ್ತುಗಳನ್ನು ಮತ್ತು ನಿಧಿಯೊಂದನ್ನು ಸಂಗ್ರಹಿಸಿದ್ದು, ಆ ಪ್ರಕಾರವಾಗಿ ದೊರೆತ ಬಟ್ಟೆ, ಸಾರಿ, ಬೆಡ್‌ಶೀಟ್‌ಗಳನ್ನು ಒಳಗೊಂಡಂತೆ ವಸ್ತ್ರಗಳು, ಚಾಪೆ, ಮನೆಗೆ ಬೇಕಾದ ಪಾತ್ರೆ, ಪಗಡಿಗಳು, ೩ ಮನೆಗಳಿಗೆ ತಲಾ ೧ ಕ್ವಿಂಟಾಲ್‌ನಂತೆ ೩ ಕ್ವಿಂಟಾಲ್ ಅಕ್ಕಿ ಜೊತೆಗೆ ಮನೆ ಸಂಪೂರ್ಣವಾಗಿ ಕಳೆದುಕೊಂಡಿರುವ ೧ ಕುಟುಂಬಕ್ಕೆ ೧೫ ಸಾವಿರ ನಗದು ಹಣವನ್ನು ನೀಡಲಾಯಿತು.

ವಿದ್ಯಾರ್ಥಿ, ಉಪನ್ಯಾಸಕರಿಂದ ಸಮೀಕ್ಷೆ:
ನೆರೆ ಸಂತ್ರಸ್ಥರಾದ ಕುಟುಂಬಗಳ ಬಗ್ಗೆ ಮಾಹಿತಿ ಪಡೆದ ವಿದ್ಯಾರ್ಥಿಗಳು ತಮ್ಮ ಉಪನ್ಯಾಸಕರ ಸಹಾಯ ಪಡೆದುಕೊಂಡು, ಸಂತ್ರಸ್ತ ಮನೆಗಳಿಗೆ ಭೇಟಿ ನೀಡಿ, ಅವರ  ಸಂಕಷ್ಟಗಳನ್ನು ಆಲಿಸಿ, ಬಳಿಕ ಸಂಗ್ರಹವಾದ ವಸ್ತುಗಳನ್ನು ಅವರುಗಳ ಮನೆಗಳಿಗೆ ತೆರಳಿ ಹಸ್ತಾಂತರಿಸಿದರು. ವಿದ್ಯಾರ್ಥಿಗಳ ಸಹಾನುಭೂತಿ ಸೇವೆಗೆ ಪ್ರಾಚಾರ್ಯ ಸುಬ್ಬಪ್ಪ ಕೈಕಂಬ, ವಿದ್ಯಾರ್ಥಿಗಳ ಕ್ಷೇಮ ಪಾಲನಾಧಿಕಾರಿ ಅಹಮದ್, ದೈಹಿಕ ಶಿಕ್ಷಣ ನಿರ್ದೇಶಕ ಎವರೆಸ್ಟ್, ರಾಷ್ಟ್ರೀಯ ಸೇವಾ ಯೋಜನೆಯ ಘಟಕಾಧಿಕಾರಿ ಗೋಪಾಲ್, ಉಪನ್ಯಾಸಕರಾದ ರಾಮುಲು, ವಿ.ಜಿ. ಭಟ್, ಬಸವರಾಜೇಶ್ವರಿ ಸಾಥ್ ನೀಡಿದರು.

ವಿದ್ಯಾರ್ಥಿ ಕುಟುಂಬದ ಸಂಕಷ್ಟಕ್ಕೆ ವಿದ್ಯಾರ್ಥಿಗಳಿಂದಲೇ ಪರಿಹಾರ-ಸುಬ್ಬಪ್ಪ ಪಾಟಾಳಿ
ನೆರೆ ಸಂತ್ರಸ್ತರಿಗೆ ಸಹಾಯ ಮಾಡುವ ಬಗ್ಗೆ ನಿರ್ಧರಿದ್ದ ವಿದ್ಯಾರ್ಥಿಗಳು ತಮ್ಮಿಂದಲೇ ವಸ್ತು, ನಿಧಿ ಸಂಗ್ರಹಿಸಿದ್ದು. ಯಾರಿಗೆ ಕೊಡುವುದು ಎಂದು ಚಿಂತಿತರಾಗಿದ್ದರು. ಈ ಬಗ್ಗೆ ಸಮೀಕ್ಷೆ ನಡೆಸಿದಾಗ ಕಾಲೇಜಿನ ೩ ವಿದ್ಯಾರ್ಥಿ ಕುಟುಂಬ ಸಂತ್ರಸ್ತರಾಗಿರುವುದು ಗೊತ್ತಾಯಿತು. ಹೀಗಾಗಿ ಕಾಲೇಜಿನ ವಿದ್ಯಾರ್ಥಿ ಕುಟುಂಬಗಳಿಗೆ ನೀಡುವುದಾಗಿ ತೀರ್ಮಾನಿಸಲಾಗಿ ಉಪ್ಪಿನಂಗಡಿ, ಮಠ ಮತ್ತು ಬಜತ್ತೂರು ಗ್ರಾಮದ ವಳಾಲು ಹೀಗೆ ೩ ಮನೆಯವರಿಗೆ ಸಹಾಯಹಸ್ತ ನೀಡಲಾಯಿತು ಎಂದು ಕಾಲೇಜಿನ ಪ್ರಾಚಾರ್ಯ ಸುಬ್ಬಪ್ಪ ಕೈಕಂಬ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.