ಪಣೆಮಜಲು ರಹ್ಮಾನಿಯಾ ಜುಮ್ಮಾ ಮಸೀದಿಯಲ್ಲಿ ‘ಮಜ್ಲಿಸುನ್ನೂರ್ – ಆಧ್ಯಾತ್ಮಿಕ ಸಂಗಮ’

Puttur_Advt_NewsUnder_1
Puttur_Advt_NewsUnder_1
  • ಈ ನಶ್ವರ ಬದುಕಿನ ವ್ಯಾಮೋಹಕ್ಕೆ ಬಲಿಯಾಗಿ ಪರಲೋಕವನ್ನು ಮರೆಯದಿರಿ:ಹಾಮಿದ್ ತಂಙಳ್ ಮಂಜೇಶ್ವರ

ಸವಣೂರು: “ಕೆಲವೇ ದಿನಗಳಿಗೆ ಸೀಮಿತವಾದ ಈ ಲೌಕಿಕ ಬದುಕಿನ ವ್ಯಾಮೋಹಕ್ಕೆ ಬಲಿಯಾಗಿ ಶಾಶ್ವತವಾದ ಪಾರತ್ರಿಕ ಜೀವನವನ್ನು ಮರೆಯಬಾರದು.ನಮ್ಮನ್ನಗಲಿದ ಮಹಾತ್ಮರ ಬದುಕು, ಅವರು ಮಾಡಿದ ತ್ಯಾಗಗಳು ನಮಗೆ ಆದರ್ಶಪ್ರಾಯವಾಗಬೇಕು. ಅವರ ಅನುಸ್ಮರಣೆಯ ಮೂಲಕ ನಮ್ಮ ಬಾಳಿನಲ್ಲಿ ಖಂಡಿತಾ ಧನಾತ್ಮಕ ಬದಲಾವಣೆಗಳನ್ನು ಉಂಟು ಮಾಡಬಹುದು “ಎಂದು ಅಸ್ಸಯ್ಯದ್ ಹಾಮಿದ್ ತಂಙಳ್ ಮಂಜೇಶ್ವರ ನುಡಿದರು. ಅವರು ಇಲ್ಲಿನ ಪಣೆಮಜಲು ರಹ್ಮಾನಿಯಾ ಜುಮಾ ಮಸೀದಿಯಲ್ಲಿ ನಡೆದ ‘ಮಜ್ಲಿಸುನ್ನೂರ್ – ಆಧ್ಯಾತ್ಮಿಕ ಸಂಗಮ’ ದ ನೇತೃತ್ವವನ್ನು ವಹಿಸಿ ಮಾತನಾಡಿದರು.

ವೇದಿಕೆಯಲ್ಲಿ ಖತೀಬರಾದ ಅಲ್ ಹಾಜ್ ಅಬ್ಬಾಸ್ ಮದನಿ, ಜಮಾಅತ್ ಅಧ್ಯಕ್ಷರಾದ ಬೇರಿಕೆ ಮೂಸಾ ಹಾಜಿ, ಉಪಾಧ್ಯಕ್ಷರಾದ ಇಸ್ಮಾಯಿಲ್ ಪಣೆಮಜಲು, ಸಹಅಧ್ಯಾಪಕರಾದ ಅಬ್ದುಲ್ ರಹಿಮಾನ್ ಮುಸ್ಲಿಯಾರ್, ಅಬ್ಬಾಸ್ ದಾರಿಮಿ ಸರ್ವೆ, ಚಾಪಳ್ಳ ದರ್ಸ್ ವಿದ್ಯಾರ್ಥಿಗಳಾದ ಮನ್ಸೂರ್ ಸವಣೂರು, ಮುನವ್ವರ್ ಕರಾಯ ಉಪಸ್ಥಿತರಿದ್ದರು.

ಕೂಡುರಸ್ತೆ ಖತೀಬರಾದ ಯಾಕೂಬ್ ದಾರಿಮಿ ಮಾಂತೂರು ಸ್ವಾಗತಿಸಿದರು.ಸಮಾರಂಭದಲ್ಲಿ ಮಸೀದಿಯ ಕಾರ್ಯದರ್ಶಿ ಸಂಶುದ್ದೀನ್ ಹಾಜಿ ಸರ್ವೆ, ಅಶ್ರಫ್ ಸರ್ವೆ, ಹಂಝ ಸಿರಾಜ್, ಕೋಶಾಧಿಕಾರಿ ಅಬ್ದುಲ್ ಕುಂಞಿ ಅರ್ತಿಕೆರೆ, ಯೂಸುಫ್ ಹಾಜಿ ಬೇರಿಕೆ, ಸಿದ್ದೀಕ್ ಸುಲ್ತಾನ್ ಕೂಡುರಸ್ತೆ, ಯೂಸುಫ್ ಹಾಜಿ ಬೇರಿಕೆ(ಶಾರ್ಜ), ಅಲ್ ನಜಾತ್ ಯೂತ್ ಫೆಡರೇಶನ್ ಕಾರ್ಯದರ್ಶಿ ಹೈದರ್ ಅಲಿ ಐವತ್ತೊಕ್ಲು ಮೊದಲಾದವರು ಉಪಸ್ಥಿತರಿದ್ದರು. ಪಣೆಮಜಲು ಜಮಾಅತಿನ ಹಾಗೂ ನೆರೆಯ ಸವಣೂರು, ಬಡಕ್ಕೋಡಿ ಜಮಾಅತಿನ ನೂರಾರು ಪುರುಷರು, ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು. ಕೊನೆಯಲ್ಲಿ ತಬರ್ರುಕ್ ವಿತರಣೆ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.