ಉಪ್ಪಿನಂಗಡಿಯಲ್ಲಿ ಬ್ಲಡ್ ಡೋನರ್ಸ್‌ನ 200ನೇ ರಕ್ತದಾನ ಶಿಬಿರ

Puttur_Advt_NewsUnder_1
Puttur_Advt_NewsUnder_1
  • ರಕ್ತದಾನ ಮಾಡುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿ ಆಗಲಿದೆಡಾ| ನಿರಂಜನ ರೈ
  •  ಉಪ್ಪಿನಂಗಡಿ ಯುವಕರ ಸೇವೆ ಇತರೇ ಊರಿನ ಯುವಕರಿಗೆ ಮಾದರಿ ಆಗಲಿ-ನಝೀರ್ ಅಝ್‌ಹರಿ ಬೊಳ್ಮಿನಾರು
  • ಯುವಕರ ಸೇವೆ ಇನ್ನಷ್ಟು ಯುವ ಸಮೂಹಕ್ಕೆ ಪ್ರೇರಣೆ ಆಗಲಿ-ಹಾಜಿ ಮುಸ್ತಫಾ ಕೆಂಪಿ

ಉಪ್ಪಿನಂಗಡಿ: ರಕ್ತದಾನ ಮಾಡುವುದರಿಂದ ರಕ್ತದಾನ ಮಾಡಿರುವ ವ್ಯಕ್ತಿಯ ಮೂಲಕ ಒಂದು ಜೀವವನ್ನು ಉಳಿಸುವುದರ ಜೊತೆಗೆ ರಕ್ತದಾನ ಮಾಡಿದ ವ್ಯಕ್ತಿಯ ರೋಗ ನಿರೋಧಕ ಶಕ್ತಿ ವೃದ್ಧಿ ಆಗಲಿದೆ ಎಂದು ಉಪ್ಪಿನಂಗಡಿಯ ವೈದ್ಯ ಡಾ| ನಿರಂಜನ ರೈ ಹೇಳಿದರು.
ಅವರು ಆ. 25ರಂದು ಉಪ್ಪಿನಂಗಡಿಯಲ್ಲಿ ಬ್ಲಡ್ ಡೋನರ್‍ಸ್ ಮಂಗಳೂರು, ಉಬಾರ್ ಡೋನರ್‍ಸ್, ಉಪ್ಪಿನಂಗಡಿ, ಎ.ಜೆ. ಆಸ್ಪತ್ರೆ ಮಂಗಳೂರು ಮತ್ತು ಇತರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆದ ಬ್ಲಡ್ ಡೋನರ್‍ಸ್ ಮಂಗಳೂರು ಇದರ 200ನೇ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ರಕ್ತದಾನ ಮಾಡುವ ಬಗ್ಗೆ ಬಹಳಷ್ಟು ಮಂದಿಯಲ್ಲಿ ತಪ್ಪು ಕಲ್ಪನೆಗಳಿವೆ, ಆದರೆ ರಕ್ತದಾನ ಮಾಡುವ ವ್ಯಕ್ತಿ ಯಾವತ್ತೂ ಲವಲವಿಕೆಯಿಂದ ಮತ್ತು ಆರೋಗ್ಯಕರವಾಗಿ ಇರಬಲ್ಲ ಎಂದ ಅವರು ನಾವುಗಳು ರಕ್ತದಾನ ಮಾಡುವ ಮೂಲಕ
ಇನ್ನೊಂದು ಜೀವಕ್ಕೆ ಜೀವ ತುಂಬುವ ಕೆಲಸ ಮಾಡೋಣ ಎಂದರು.

ಉಪ್ಪಿನಂಗಡಿ ಮಾಲಿಕ್ ದೀನಾರ್ ಜುಮಾ ಮಸೀದಿ ಖತೀಬ್ ನಝೀರ್ ಅಝ್‌ಹರಿ ಬೊಳ್ಮಿನಾರು ದುವಾಃ ನೆರವೇರಿಸಿ ಮಾತನಾಡಿ ಒಂದು ರೋಗಿಗೆ ರಕ್ತದಾನ ಮಾಡಿ ಜೀವ ರಕ್ಷಣೆ ಮಾಡಿದರೆ ಪ್ರಪಂಚದ ಸರ್ವ ಜನರಿಗೂ ಜೀವ ಕೊಟ್ಟ ಸಂದೇಶ ಅದರಲ್ಲಿ ಅಡಗಿರುತ್ತದೆ, ಇಂದಿನ ಕಾಲಘಟ್ಟದಲ್ಲಿ ಮಾನವೀಯ ಮೌಲ್ಯಗಳು ಬರೇ ಭಾಷಣಗಳಿಗೆ ಮಾತ್ರ
ಸೀಮಿತವಾಗಿರುವಾಗ ಉಪ್ಪಿನಂಗಡಿ ಯುವಕರ ಈ ಸೇವೆ ಇತರೇ ಊರಿನ ಯುವಕರಿಗೆ ಮಾದರಿ ಆಗಲಿ ಎಂದರು.

ಉಪ್ಪಿನಂಗಡಿ ಮಾಲಿಕ್ ದೀನಾರ್ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ ಅಧ್ಯಕ್ಷತೆ ವಹಿಸಿ ಮಾತನಾಡಿ ದಾನಗಳಲ್ಲಿ ರಕ್ತದಾನ ಅತ್ಯಂತ ಶ್ರೇಷ್ಠ ದಾನವಾಗಿದ್ದು, ಯುವಕರ ಮಾನವೀಯ ಸಂಬಂಧಗಳನ್ನು ಬೆಸೆಯುವ ಈ ಘನ ಕಾರ್‍ಯ ಇನ್ನಷ್ಟು ಯುವ ಸಮೂಹಕ್ಕೆ ಪ್ರೇರಣೆ ಆಗಲಿ ಎಂದರು.

ಎಸ್.ಡಿ.ಪಿ.ಐ. ರಾಜ್ಯ ಕಾರ್‍ಯದರ್ಶಿ ರಿಯಾಝ್ ಫರಂಗಿಪೇಟೆ, ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸದಸ್ಯ ಯು.ಟಿ. ಮಹಮ್ಮದ್ ತೌಶೀಫ್, ಉಪ್ಪಿನಂಗಡಿ ವರ್ತಕ ಸಂಘದ ಅಧ್ಯಕ್ಷ ಹಾರೂನ್ ರಶೀದ್ ಅಗ್ನಾಡಿ, ಕಾರ್‍ಯದರ್ಶಿ ಝಕರಿಯಾ ಕೊಡಿಪ್ಪಾಡಿ, ಮಠ ಮಸೀದಿ ಅಧ್ಯಕ್ಷ ನಜೀರ್ ಮಠ, ಪೆರಿಯಡ್ಕ ಮಸೀದಿ ಅಧ್ಯಕ್ಷ ಬಶೀರ್ ಕೆ.ಪಿ., ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳಾದ ಶಾಕಿರ್, ಶರೀಫ್ ವಳಾಲು, ಮುಸ್ತಫಾ ಪಿ.ಎಚ್. ಉಪಸ್ಥಿತರಿದ್ದರು.

ಸಾಧಕರಿಗೆ ಸನ್ಮಾನ:

ಅಮೇರಿಕಾದಲ್ಲಿ ನಡೆದ ವಿಜ್ಞಾನ ಸ್ಪರ್ಧೆಯಲ್ಲಿ ವಿಜೇತರಾದ ಉಪ್ಪಿನಂಗಡಿ ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ನಚಿಕೇತ್ ಕುಮಾರ್, ಅಮಾನ್ ಕೆ.ಎ. ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಬ್ಲಡ್ ಡೋನರ್‍ಸ್ ಮಂಗಳೂರು ಇದರ ರಝಾಕ್ ಸಾಲ್ಮರ ಸ್ವಾಗತಿಸಿ, ಉಬಾರ್ ಡೋನರ್‍ಸ್‌ನ ಶಬೀರ್ ಕೆಂಪಿ ವಂದಿಸಿದರು. ಮಹಮ್ಮದ್ ಗಝಾಲಿ ಕಾರ್‍ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.