ಒಡಿಯೂರು ಶ್ರೀ ಗುರುದೇವ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪ್ರವೇಶೋತ್ಸವ – ಬೀಳ್ಕೊಡುಗೆ ಸಮಾರಂಭ

Puttur_Advt_NewsUnder_1
Puttur_Advt_NewsUnder_1

 

ವಿಟ್ಲ: ಬದುಕನ್ನು ನಾವು ಪ್ರೀತಿಸಬೇಕು ಆಗ ಬದುಕು ನಮ್ಮನ್ನು ಪ್ರೀತಿಸುತ್ತದೆ. ಈ ಬಗ್ಗೆ ಚಿಂತನೆ ಮಾಡಿದರೆ ಆದರ್ಶ ಬದುಕು ನಮ್ಮದಾಗುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮಿಗಳವರು ಹೇಳಿದರು.
ಅವರು ಗುರುದೇವ ಐ.ಟಿ.ಐ.ನ 2019-20ನೇ ಸಾಲಿನ ಪ್ರವೇಶೋತ್ಸವ ಮತ್ತು ಬೀಳ್ಕೊಡುಗೆ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ವಿದ್ಯೆಯೆ ಶ್ರೇಷ್ಠವಾದ ಸಂಪತ್ತು. ವಿದ್ಯೆಯೊಂದಿಗೆ ವಿನಯವು ಮನೆ ಮಾಡಿರಬೇಕು. ಬದುಕು ಕೌಶಲ್ಯಯುತವಾಗಿದ್ದು, ‘ಸ್ಕಿಲ್’ ಎಂಬುದು ‘ಸ್ಟಿಲ್’ ಆಗಿರದೆ ನಿರಂತರತೆಯಿಂದರಲಿ. ವಿದ್ಯಾರ್ಥಿಗಳು ದುಶ್ಚಟಕ್ಕೆ ಬಲಿಯಾಗದೆ ಆದರ್ಶವಾಗಿರಬೇಕು”
ಸಾಧ್ವಿ ಶ್ರೀ ಮಾತಾನಂದಮಯಿಯವರು ಆಶೀರ್ವಚನ ನೀಡಿ ವ್ಯಕ್ತಿ ಸರಿಯಾಗಿ ಸಂಸ್ಕಾರಯುತ ಪ್ರಾಮಾಣಿಕತೆಯ ವ್ಯಕ್ತಿತ್ವವನ್ನು ಬೆಳೆಸಿಕೊಂಡರೆ ಅದು ರಾಷ್ಟ್ರದ ಸಂಪತ್ತಾಗುತ್ತದೆ. ಉತ್ತಮ ನಡವಳಿಕೆಗಳನ್ನು ಜೀವನದಲ್ಲಿ ಅಳವಡಿಸಿದಾಗ ತನ್ನಿಂದ ತಾನೆ ಸಮೃದ್ಧ ಸಮಾಜ ನಿರ್ಮಾಣವಾಗುತ್ತದೆ. ಯಾಂತ್ರಿಕ ಯುಗಕ್ಕೆ ನಮ್ಮ ಬದುಕನ್ನು ಹೊಂದಿಕೊಂಡು ಜೀವಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಕರೋಪಾಡಿ ಗ್ರಾ.ಪಂ. ಅಧ್ಯಕ್ಷೆ ಬೇಬಿ ಆರ್.ಶೆಟ್ಟಿ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ಎ. ಸುರೇಶ್ ರೈ, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕರಾದ ಗಣಪತಿ ಭಟ್ ಸೇರಾಜೆ, ಮುಖ್ಯೋಪಾಧ್ಯಾಯರಾದ ಎ. ಜಯಪ್ರಕಾಶ ಶೆಟ್ಟಿ, ಹಿರಿಯ ಪತ್ರಕರ್ತರಾದ ಯಶವಂತ ವಿಟ್ಲ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ನಿರ್ದೇಶಕ ಲಿಂಗಪ್ಪ ಗೌಡ ಪನೆಯಡ್ಕ, ಸಂಸ್ಥಾನದ ಕಾರ್ಯನಿರ್ವಾಹಕರಾದ ಪದ್ಮನಾಭ ಒಡಿಯೂರು ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆಯಲ್ಲಿ ತರಬೇತು ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ಪೂಜ್ಯ ಶ್ರೀಗಳವರು ವಿತರಿಸಿದರು. ಐ.ಟಿ.ಐ.ಯ ದ್ವಿತೀಯ ವರ್ಷದ ವಿದ್ಯಾರ್ಥಿಗಳು ನೂತನವಾಗಿ ಪ್ರವೇಶಪಡೆದ ವಿದ್ಯಾರ್ಥಿಗಳಿಗೆ ಹೂಗುಚ್ಚ ನೀಡಿ ಸ್ವಾಗತಿಸಿದರು. ಸಂಸ್ಥೆಯ ಪ್ರಾಚಾರ್ಯರಾದ ಕರುಣಾಕರ ಎನ್.ಬಿ. ಪ್ರಸ್ತಾವನೆಗೈದು, ಸಿಬ್ಬಂದಿ ಮೋಹನ್ ಸ್ವಾಗತಿಸಿದರು, ಪ್ರವೀಣ್ ಕುಮಾರ್ ವಂದಿಸಿದರು. ಜಯಂತ ಆಜೇರುರವರು ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.