ನ್ಯಾಯವಾದಿ ಕರುಣಾಕರ ರೈ ಕರ್ನೂರುಗುತ್ತು ನಿಧನ


ಪುತ್ತೂರು: ನೆ.ಮುಡ್ನೂರು ಗ್ರಾಮದ ಕರ್ನೂರುಗುತ್ತು ದಿ. ಜತ್ತಪ್ಪ ರೈ ಮತ್ತು ಲಲಿತ ದಂಪತಿಯ ಮಗ ಕರುಣಾಕರ ರೈ (65)ರವರು ಹೃದಯಾಘಾತದಿಂದ ಆ.27ರಂದು ಬೆಳಿಗ್ಗೆ ನಿಧನರಾಗಿದ್ದಾರೆ.

ಮೃತರು ಮಾಡಾವಿನಲ್ಲಿರುವ ತನ್ನ ಮನೆಯಲ್ಲಿ ಎದೆ ನೋವು ಕಾಣಿಸಿಕೊಂಡಿದ್ದು ತಕ್ಷಣ ಅವರನ್ನು ಮಹಾವೀರ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮೃತಪಟ್ಟಿದ್ದಾರೆ. 

ಕರುಣಾಕರ ರೈಯವರು ಪುತ್ತೂರಿನಲ್ಲಿ ಸುಮಾರು 25 ವರ್ಷಗಳಿಂದ ನ್ಯಾಯವಾದಿಯಾಗಿ ಸೇವೆ ಸಲ್ಲಿಸಿದ್ದರು. ಮೃತರು ಪುತ್ರರಾದ ಅಶ್ವಿನ್, ಅಕ್ಷಯ್, ದೆಹಲಿ ಬ್ಯಾಂಕ್ ನಿವೃತ್ತ ಉದ್ಯೋಗಿ ಅಣ್ಣ ದಿನಕರ ರೈ, ಸಹೋದರಿ ನಳಿನಿ ರೈ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. 

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.