ಪುತ್ತೂರು: ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಸೆಪ್ಟೆಂಬರ್ ಒಂದರಿಂದ ಜರಗಲಿರುವ ಮಿಲಿಯನ್ ಡಾಲರ್ ಗ್ಲೋಬಲ್ ಕಾನ್ಫರೆನ್ಸ್ಗೆ ತಿಂಗಳಾಡಿ ಪದ್ಮಶ್ರೀ ಗ್ರೂಪ್ನ ಆಡಳಿತ ಪಾಲುದಾರರಾದ ಕೆದಂಬಾಡಿಗುತ್ತು ರತ್ನಾಕರ್ ರೈರವರು ಪ್ರವಾಸ ಕೈಗೊಳ್ಳಲಿದ್ದು, ಸುಮಾರು 15 ದಿನಗಳ ಕಾಲ ಕಾನ್ಫರೆನ್ಸ್ನಲ್ಲಿ ಭಾಗಿಯಾಗಲಿದ್ದಾರೆ.
ರತ್ನಾಕರ್ ರೈಯವರು ಈಗಾಗಲೇ ಆಮೇರಿಕಾದ ಕ್ಯಾಲಿಪೋರ್ನಿಯಾ, ಫಿಲಡೆಲ್ಫಿಯಾದ ಪೆನ್ವಿಲ್ವೇನಿಯಾ, ನ್ಯೂ ಒರ್ಲೆನ್ನ ಲೂಸಿಯಾನ, ಪ್ರೋರಿಡಾದ ಒರ್ಲಾಂಡೋ ಹಾಗೂ ಕೆನಡಾದ ಟೊರೊಂಟೋ ಒನ್ಟರಿಯೋದಲ್ಲಿ ನಡೆದ ವರ್ಲ್ಡ್ ಇನ್ಸೂರೆನ್ಸ್ ಕಾನ್ಫರೆನ್ಸ್ನಲ್ಲಿ ಭಾಗವಹಿಸಿದ್ದು, ಕಳೆದ ವರ್ಷ ಜೂ.21 ರಿಂದ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ನಲ್ಲಿ ನಡೆದಿದ್ದ ಕಾನ್ಫರೆನ್ಸ್ನಲ್ಲಿ ಆರನೇ ಬಾರಿಗೆ ಭಾಗವಹಿಸಿದ್ದರು. ಈ ಬಾರಿ ಏಳನೇ ಬಾರಿ ರತ್ನಾಕರ್ ರೈಯವರು ಆಸ್ಟ್ರೇಲಿಯಾದ ಸಿಡ್ನಿಯಲ್ಲಿನ ಕಾನ್ಫರೆನ್ಸ್ನಲ್ಲಿ ಭಾಗಿಯಾಗುತ್ತಿದ್ದಾರೆ. ಮಾತ್ರವಲ್ಲದೆ ಸತತ 10 ಬಾರಿ ಎಂಡಿಆರ್ಟಿಯಾಗಿದ್ದು ಈಗಾಗಲೇ 2020ರ ಎಂಡಿಆರ್ಟಿಯನ್ನು ಪೂರ್ತಿಗೊಳಿಸಿರುತ್ತಾರೆ.
ಆಮೇರಿಕಾದ ನ್ಯೂ ಒರ್ಲಾಂಡೋ ಫ್ಲೋರಿಡಾದಲ್ಲಿ ಕಳೆದ ವರ್ಷ ನಡೆದಿದ್ದ ವರ್ಲ್ಡ್ ಇನ್ಸೂರೆನ್ಸ್ ಕಾನ್ಫರೆನ್ಸ್ನಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಎಲ್ಐಸಿ ಸಿಒಟಿ, ದಕ್ಷಿಣ ಮಧ್ಯ ವಲಯದಲ್ಲಿ 2018ರ ಎಂಡಿಆರ್ಟಿ ಅರ್ಹತೆ ಪಡೆದ ಮೊದಲಿಗರಾಗಿ ರತ್ನಾಕರ್ ರೈರವರು ಆಮೇರಿಕಾ ಪ್ರವಾಸವನ್ನು ಕೈಗೊಂಡಿದ್ದರು. ಜೀವವಿಮಾ ನಿಗಮದ ಪ್ರತಿನಿಧಿಯಾಗಿದ್ದು, ಪುತ್ತೂರಿನ ಜೀವವಿಮಾ ವ್ಯವಹಾರ ಕ್ಷೇತ್ರದಲ್ಲಿ ಸತತ ಏಳು ಬಾರಿ ಎಂಡಿಆರ್ಟಿ ಆಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಸಿಒಟಿ(ಕೋರ್ಟ್ ಆಫ್ ದಿ ಟೇಬಲ್)ಆಗಿ ಆಯ್ಕೆಯಾಗಿದ್ದ ರತ್ನಾಕರ್ ರೈಯವರು ಈ ವಿಶಿಷ್ಟ ಸಾಧನೆಯೊಂದಿಗೆ ಜೀವವಿಮಾ ನಿಗಮದ ಅತ್ಯಂತ ಪ್ರತಿಷ್ಠಿತ ಕಾರ್ಪೋರೇಟ್ ಕ್ಲಬ್ನ ಸದಸ್ಯರಾಗಿರುತ್ತಾರೆ.
ಸತತ ಎಂಡಿಆರ್ಟಿ: ಜೀವ ವಿಮಾ ನಿಗಮದ ಅತ್ಯಂತ ಪ್ರತಿಷ್ಠಿತ ಕೋರ್ಪೋರೇಟ್ ಕ್ಲಬ್ ಸದಸ್ಯರಾಗಿದ್ದು, 2011ರಿಂದ ಸತತ ಎಂಡಿಆರ್ಟಿಯಾಗಿ 2016ರಲ್ಲಿ ಎಂಡಿಆರ್ಟಿಯ ಮೂರು ಪಟ್ಟು ಹೊಸ ವ್ಯವಹಾರ ಮಾಡಿ ಸಿಒಟಿ ಅರ್ಹತೆ ಪಡೆದುಕೊಂಡು 17 ವರ್ಷಗಳಿಂದ ವಿಮಾ ವ್ಯವಹಾರ ಮಾಡಿಕೊಂಡು ಮುಖ್ಯ ವಿಮಾ ಸಲಹೆಗಾರರಾಗಿದ್ದು ಮಾತ್ರವಲ್ಲದೆ 10ಕ್ಕಿಂತಲೂ ಹೆಚ್ಚು ಸೂಪರ್ವೈಸರ್ ಏಜೆಂಟರನ್ನು ನೇಮಕ ಮಾಡಿಕೊಂಡು ಬರುತ್ತಿದ್ದಾರೆ ರತ್ನಾಕರ್ ರೈಯವರು.
ನಿರ್ವಹಿಸಿದ ಜವಾಬ್ದಾರಿಗಳು: ತಿಂಗಳಾಡಿ ಪದ್ಮಶ್ರೀ ಗ್ರೂಪ್ನ ಆಡಳಿತ ಪಾಲುದಾರರಾಗಿರುವ ರತ್ನಾಕರ್ ರೈ ಕೆದಂಬಾಡಿಗುತ್ತುರವರು ರೋಟರ್ಯಾಕ್ಟ್ ಕ್ಲಬ್ ತಿಂಗಳಾಡಿ ಇದರ ಸ್ಥಾಪಕ ಅಧ್ಯಕ್ಷರಾಗಿ, ರೋಟರಿ ಕ್ಲಬ್ ಪುತ್ತೂರು ಪೂರ್ವ ಪ್ರಾಯೋಜಿತ ರೋಟರಿ ಕ್ಲಬ್ ಪುತ್ತೂರು ಯುವ ಇದರ ಸ್ಥಾಪಕ ಅಧ್ಯಕ್ಷರಾಗಿ, ರೋಟರಿ ಜಿಲ್ಲಾ 2181, ವಲಯ ಐದರ ವಲಯ ಸೇನಾನಿಯಾಗಿ ಸೇವೆ ಸಲ್ಲಿಸಿದ್ದು 2020-21ನೇ ಸಾಲಿನ ರೋಟರಿ ಜಿಲ್ಲೆ 2181, ವಲಯ 5ರ ಅಸಿಸ್ಟೆಂಟ್ ಗವರ್ನರ್ ಆಗಿ ನೇಮಕಗೊಂಡಿದ್ದಾರೆ.