Breaking News

ಸೆ.7:ಬ್ರಹ್ಮಶ್ರೀ ನಾರಾಯಣ ಗುರುಸ್ವಾಮೀಜಿಯವರ 165ನೇ ಜನ್ಮದಿನಾಚರಣೆ ಪ್ರಯುಕ್ತ ವಿವಿಧ ಮುಕ್ತ ಸ್ಪರ್ಧೆಗಳು

Puttur_Advt_NewsUnder_1
Puttur_Advt_NewsUnder_1

 

ಪುತ್ತೂರು: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಮತ್ತು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಂದಿರದ ಆಶ್ರಯದಲ್ಲಿ ಬಪ್ಪಳಿಗೆ-ಪುತ್ತೂರು ಇಲ್ಲಿನ ನಾರಾಯಣ ಗುರು ಸಭಾಭವನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮೀಜಿಯವರ 165ನೇ ಜನ್ಮ ದಿನಾಚರಣೆ ಆಚರಿಸಲಿರುವ ಹಿನ್ನೆಲೆಯಲ್ಲಿ ವಿವಿಧ ಸಮಾಜ ಬಾಂಧವರಿಗೆ ವಿವಿಧ ಸ್ಪರ್ಧೆ(ಮುಕ್ತ)ಗಳು ಸೆ.7 ರಂದು ಅಪರಾಹ್ನ ನಡೆಯಲಿದೆ.

ಮುಕ್ತ ಸ್ಪರ್ಧೆಗಳು: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿಯವರ ಜನ್ಮ ದಿನಾಚರಣೆಯ ಅಂಗವಾಗಿ ತಾಲೂಕಿನ ಬಿಲ್ಲವ ಸಮಾಜ ಬಾಂಧವರಿಗೆ ಮಾತ್ರವಲ್ಲದೆ ತಾಲೂಕಿನ ಎಲ್ಲಾ ಸಮಾಜ ಬಾಂಧವರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಪ್ರೌಢಶಾಲಾ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಗಳು, ಕಾಲೇಜು ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗಾಗಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶಗಳು ಮತ್ತು ಅದರ ಅನುಷ್ಠಾನ ಎಂಬ ವಿಷಯದ ಬಗ್ಗೆ 45 ನಿಮಿಷಗಳ ಪ್ರಬಂಧ ಸ್ಪರ್ಧೆ ನಡೆಯಲಿದೆ. ಹೈಸ್ಕೂಲ್ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ `ಸಾಮಾಜಿಕ ಕಟ್ಟುಪಾಡುಗಳ ಪರಿವರ್ತನೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಪಾತ್ರ’, ಕಾಲೇಜು ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗಾಗಿ ಮಾನವೀಯ ಮೌಲ್ಯಗಳು ಮತ್ತು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಎಂಬ ವಿಷಯದ ಬಗ್ಗೆ 7 ನಿಮಿಷಗಳ ಭಾಷಣ ಸ್ಪರ್ಧೆ ನಡೆಯಲಿದೆ.

ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಪ್ರತ್ಯೇಕ 5 ನಿಮಿಷಗಳ ಭಕ್ತಿ, ಭಾವಗೀತೆ ಸ್ಪರ್ಧೆಗಳು, ಹೈಸ್ಕೂಲ್ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಪೆನ್ಸಿಲ್‌ನಲ್ಲಿ ೩೦ ನಿಮಿಷದೊಳಗಡೆ ನಾರಾಯಣ ಗುರುಗಳ ಚಿತ್ರ ಬಿಡಿಸುವ ಸ್ಪರ್ಧೆ ನಡೆಯಲಿದ್ದು ಪ್ರಥಮ ಮತ್ತು ದ್ವಿತೀಯ ಸ್ಪರ್ಧಾ ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ಗುರುಪೂಜೆ ದಿನದಂದು ವಿತರಿಸಲಾಗುವುದು.

ಪ್ರತಿಭಾ ಪುರಸ್ಕಾರ: ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮೀಜಿಯವರ 165ನೇ ಜನ್ಮ ದಿನಾಚರಣೆಯ ಅಂಗವಾಗಿ ಬಿಲ್ಲವ ಸಮಾಜ ಬಾಂಧವರಿಗೆ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ಶೇಕಡಾ 85 ಮತ್ತು ಮೇಲ್ಪಟ್ಟು, ಪಿಯುಸಿ, ಐಟಿಐ, ಡಿ.ಎಡ್ ಅಂತಿಮ ಪರೀಕ್ಷೆಯಲ್ಲಿ ಶೇಕಡಾ 80 ಮತ್ತು ಮೇಲ್ಪಟ್ಟು, ಎಲ್ಲಾ ತರದ ಪದವಿ, ಡಿಫ್ಲೊಮಾ, ಬಿಬಿಎಂ, ಬಿಸಿಎ, ಬಿ.ಎಡ್, ಎಲ್‌ಎಲ್‌ಬಿ ಇತ್ಯಾದಿ ಕೋರ್ಸಿನ ಅಂತಿಮ ಪರೀಕ್ಷೆಯಲ್ಲಿ ಶೇಕಡಾ 75 ಮತ್ತು ಮೇಲ್ಪಟ್ಟು, ಎಲ್ಲಾ ಸ್ನಾತಕೋತ್ತರ, ವೈದ್ಯಕೀಯ, ತಾಂತ್ರಿಕ ಎಂಸಿಎ, ಸಿಎ, ಎಂಬಿಎ, ಎಂಎಸ್‌ಡಬ್ಲ್ಯೂ, ಎಂಎ, ಎಂ.ಕಾಂ, ಎಂ.ಟೆಕ್ ಕೋರ್ಸಿನ ಅಂತಿಮ ಪರೀಕ್ಷೆಯಲ್ಲಿ ಶೇಕಡಾ 70 ಮತ್ತು ಮೇಲ್ಪಟ್ಟು ಅಂಕಗಳನ್ನು ಪಡೆದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ, 2017-18ರಲ್ಲಿ ಜಿಲ್ಲಾ ಮಟ್ಟಕ್ಕಿಂತ ಮೇಲ್ಪಟ್ಟ ಕ್ರೀಡಾ ಪ್ರತಿಭೆ, ಕಲಾ ಪ್ರತಿಭೆ, ಬಾಲ ಪ್ರತಿಭೆ, ಸಾಹಿತ್ಯ ಪ್ರತಿಭೆ ಹೊಂದಿದವರಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ.

ಸನ್ಮಾನ: ಐಪಿಎಸ್, ಐಎಎಸ್, ಕೆಎಎಸ್, ಕೆಇಎಸ್, ಪಿಎಚ್‌ಡಿ ಪದವಿ ಪಡೆದವರಿಗೆ, 2018-19ರ ಸಾಲಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರ ಪ್ರಶಸ್ತಿ ಅಥವಾ ರಾಜ್ಯ ಪ್ರಶಸ್ತಿ ಪಡೆದವರಿಗೆ, ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಐವರು ಮಹನೀಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.