ಬ್ರೇಸ್‌ಲೆಟ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಬ್ರಹ್ಮನಗರದ ರಾಜು


ಪುತ್ತೂರು: ದರ್ಬೆಯಲ್ಲಿ ಬಿದ್ದು ಸಿಕ್ಕಿದ್ದ ಚಿನ್ನದ ಬ್ರೇಸ್‌ಲೆಟ್‌ನ್ನು ವಾರಿಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಘಟನೆ ಆ. 27 ರಂದು ನಡೆದಿದೆ. ಬ್ರಹ್ಮನಗರದ ರಾಜು ಎಂಬವರಿಗೆ ಕೆಲದಿನಗಳ ಹಿಂದೆ ದರ್ಬೆಯಲ್ಲಿ ಚಿನ್ನದ ಬ್ರೇಸ್‌ಲೆಟ್ ಬಿದ್ದು ಸಿಕ್ಕಿತ್ತು. ವಾರಿಸುದಾರರು ಯಾರೆಂದು ತಿಳಿಯದೆ ಬ್ರೇಸ್‌ಲೆಟ್‌ನ್ನು ಬ್ರಹ್ಮನಗರ ದುರ್ಗಾ ಮಾರಿಯಮ್ಮ ದೇವಸ್ಥಾನದ ಆಡಳಿತ ಕಚೇರಿಯಲ್ಲಿ ಇಟ್ಟಿದ್ದರು. ಬ್ರೇಸ್‌ಲೆಟ್ ಬಿದ್ದು ಸಿಕ್ಕಿರುವುದರ ಬಗ್ಗೆ ವಾಟ್ಸಾಪ್‌ನಲ್ಲಿ ಮಾಹಿತಿ ರವಾನಿಸಲಾಗಿತ್ತು. ಮಾಹಿತಿ ತಿಳಿದ ಬ್ರೇಸ್‌ಲೆಟ್ ವಾರಿಸುದಾರರಾದ ಶಿವಪ್ರಸಾದ್ ತಲೆಪ್ಪಾಡಿಯವರು ಫೋನ್ ಮುಖಾಂತರ ಸಂಪರ್ಕಿಸಿದ್ದರು. ಆ. 27ರಂದು ದೇವಸ್ಥಾನದ ಮುಂಭಾಗದಲ್ಲಿ ವಾರಿಸುದಾರರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಅಶೋಕ್ ಭಂಡಾರಿ ರಾಗಿದಕುಮೇರು, ಶೇಖರ ಬ್ರಹ್ಮನಗರ, ಸುರೇಂದ್ರ ಬ್ರಹ್ಮನಗರ, ಮೋಹನದಾಸ್ ಬ್ರಹ್ಮನಗರ, ರಾಜ್ ಬ್ರಹ್ಮನಗರ ಮತ್ತು ಪ್ರಕಾಶ್ ಬ್ರಹ್ಮನಗರ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.