ಉಪ್ಪಿನಂಗಡಿ: ಇಂದ್ರಪ್ರಸ್ತ ವಿದ್ಯಾಲಯದಲ್ಲಿ ತಾಲ್ಲೂಕು ಮಟ್ಟದ ತ್ರೋಬಾಲ್ ಪಂದ್ಯಾಟ

Puttur_Advt_NewsUnder_1
Puttur_Advt_NewsUnder_1
  • ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪ್ರತಿಭೆ ಹೊರ ಹಾಕಲು ವೇದಿಕೆ ನಿರ್ಮಾಣ-ಸಂಜೀವ ಮಠಂದೂರು
  •  ವಿದ್ಯಾರ್ಥಿಗಳಲ್ಲಿ ಇಚ್ಛಾಶಕ್ತಿ, ಗುರಿ ಇರಬೇಕು-ರಾಧಾಕೃಷ್ಣ ಬೋರ್ಕರ್
  • ಕ್ರೀಡೆಯಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿ-ಶಯನಾ ಜಯಾನಂದ
  • ವಿದ್ಯಾರ್ಥಿಗಳಲ್ಲಿ ಶೃಧ್ದೆ, ದೃಢತೆ ಮುಖ್ಯ- ಯು.ಎಸ್.ಎ. ನಾಯಕ್

ಉಪ್ಪಿನಂಗಡಿ: ಗ್ರಾಮೀಣ ಭಾಗಗಳಲ್ಲಿ ಅದೆಷ್ಟೋ ಪ್ರತಿಭೆಗಳಿದ್ದು, ಅಂತಹವರನ್ನು ಹೊರ ತೆಗೆಯಲು ಕ್ರೀಡಾಕೂಟ ವೇದಿಕೆ ನಿರ್ಮಿಸಿ ಕೊಡುತ್ತದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಅವರು ಆ. 28ರಂದು ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಇವುಗಳ ಸಹಯೋಗದೊಂದಿಗೆ 14ರ ವಯೋಮಾನದ ಬಾಲಕ-ಬಾಲಕಿಯರ ತಾಲ್ಲೂಕು ಮಟ್ಟದ ಥ್ರೋಬಾಲ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿ, ಭಾರತದ ಹೆಮ್ಮೆಯ ವೇಗದ ಓಟಗಾರ್ತಿ ಪಿ.ಟಿ. ಉಷಾ, ರಾಜ್ಯದಲ್ಲಿ ಕಬಡ್ಡಿ ಪಟುವಾಗಿ ಮಿಂಚುತ್ತಿರುವ ಸಂತೋಷ್ ರೈ ತೀರಾ ಗ್ರಾಮೀಣ ಪ್ರದೇಶದ ಪ್ರತಿಭೆಗಳಾಗಿದ್ದು, ಇಂತಹ ಬಹಳಷ್ಟು ಅದ್ಭುತ ಪ್ರತಿಭೆಗಳು ಗ್ರಾಮೀಣ ಭಾಗದಲ್ಲಿ ಇದ್ದು, ಅವರುಗಳನ್ನು ಹೊರ ತರುವ ಕೆಲಸಗಳನ್ನು ದೈಹಿಕ ಶಿಕ್ಷಕರು ಮಾಡಬೇಕು ಎಂದ ಅವರು ವಿದ್ಯಾರ್ಥಿ ಕ್ರೀಡಾಪಟುಗಳು ತಮ್ಮ ಪ್ರತಿಭೆಗಳನ್ನು ತೋರ್ಪಡಿಸುವ ಮೂಲಕ ದೇಶದ ಕೀರ್ತಿ ಪತಾಕೆ ಹಾರಿಸುವ ಗುರಿ ಹೊಂದಿರಬೇಕು ಎಂದರು.

ವಿದ್ಯಾರ್ಥಿಗಳಲ್ಲಿ ಇಚ್ಛಾಶಕ್ತಿ, ಗುರಿ ಇರಬೇಕು– ರಾಧಾಕೃಷ್ಣ ಬೋರ್ಕರ್
ಪುತ್ತೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಅನುಭವ ಪಡೆಯುವ ಜೊತೆಗೆ ತನ್ನ ಆಸಕ್ತಿಯ ಕ್ಷೇತ್ರದಲ್ಲಿ ಇಚ್ಛಾಶಕ್ತಿ, ಗುರಿ ಇರಬೇಕು ಆಗ ಮಾತ್ರ ಯಶಸ್ಸು ಸಾಧ್ಯ ಎಂದ ಅವರು ಕ್ರೀಡಾಕೂಟದ ತೀರ್ಪುಗಾರರು ಯಾವುದೇ ತಾರತಮ್ಯ ತೋರದೆ ನಿಜವಾದ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಬೇಕು ಎಂದರು.

ಕ್ರೀಡೆಯಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿ-ಶಯನಾ ಜಯಾನಂದ
ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಮತಿ ಶಯನಾ ಜಯಾನಂದ ಮಾತನಾಡಿ ಕಲಿಕೆ, ಅಂಕ ಪಡೆಯುವುದಕ್ಕೆ ಕೊಡುವ ಮಹತ್ವವನ್ನು ಕ್ರೀಡೆಗಳಿಗೂ ಕೊಡಬೇಕಾಗಿದ್ದು, ಕ್ರೀಡೆಯಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿ ಆಗಲಿದ್ದು ವಿದ್ಯಾರ್ಥಿಗಳು ಸಾಧನೆಯ ಗುರಿ ತಲುಪುವ ಬಗ್ಗೆ ಆಶಕ್ತಿ ಹೊಂದಿದಾಗ ಮಾತ್ರ ಯಶಸ್ಸು ಸಾಧ್ಯ ಎಂದರು.

ವಿದ್ಯಾರ್ಥಿಗಳಲ್ಲಿ ಶೃಧ್ದೆ, ದೃಢತೆ ಮುಖ್ಯ-ಯು.ಎಸ್.ಎ. ನಾಯಕ್
ಇಂದ್ರಪ್ರಸ್ಥ ವಿದ್ಯಾ ಸಂಸ್ಥೆಯ ಸಂಚಾಲಕ ಯು.ಎಸ್.ಎ. ನಾಯಕ್ ಮಾತನಾಡಿ ವಿದ್ಯಾರ್ಥಿಗಳಲ್ಲಿ ಶೃದ್ಧೆ ಮುಖ್ಯ, ಜೊತೆಗೆ ತಾನು ತಾಲ್ಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟವನ್ನು ಪ್ರತಿನಿಧಿಸುತ್ತೇನೆ ಎಂಬ ದೃಢತೆ ಹೊಂದಿರಬೇಕು, ಆಗ ಮಾತ್ರ ಗುರಿ ತಲುಪಲು ಸಾಧ್ಯ ಎಂದರು.
ತಾಲ್ಲೂಕು ಪಂಚಾಯಿತಿ ಸದಸ್ಯೆ ಶ್ರೀಮತಿ ಸುಜಾತ ಕೃಷ್ಣ ಆಚಾರ್ಯ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ ಮಾತನಾಡಿದರು. ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಕೃಷ್ಣ ರೈ, ಇಂದ್ರಪ್ರಸ್ಥ ಎಜುಕೇಶನ್ ಟ್ರಸ್ಟ್ ನಿರ್ದೇಶಕಿ ಶ್ರೀಮತಿ ವಸಂತಿ ನಾಯಕ್ ಉಪಸ್ಥಿತರಿದ್ದರು.

ನೆರೆ ಪರಿಹಾರ ನಿಧಿಗೆ ಒಂದೂವರೆ ಲಕ್ಷ ರೂಪಾಯಿ ಚೆಕ್ ಹಸ್ತಾಂತರ: ಸಮಾರಂಭದಲ್ಲಿ ಇಂದ್ರಪ್ರಸ್ಥ ವಿದ್ಯಾಲಯದ ಸಂಚಾಲಕ ಯು.ಎಸ್.ಎ. ನಾಯಕ್ ಮುಖ್ಯಮಂತ್ರಿಯವರ ನೆರೆ ಪರಿಹಾರ ನಿಧಿಗೆ ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಚೆಕ್ ಶಾಸಕ ಸಂಜೀವ ಮಠಂದೂರು ಅವರಿಗೆ ಹಸ್ತಾಂತರಿಸಿದರು. ಚೆಕ್ ಸ್ವೀಕರಿಸಿದ ಶಾಸಕರು ಯು.ಎಸ್.ಎ. ನಾಯಕ್‌ರವರ ಮಾನವೀಯತೆ, ಸಾಂತ್ವಾನದ ಮನಮಿಡಿಯುವ ಕೆಲಸ ಎಲ್ಲರಿಗೂ ಮಾದರಿ ಆಗಲಿ ಎಂದರು.

ಸರ್ಕಾರಿ ಶಾಲೆಗೆ 3 ಶಿಕ್ಷಕ ವೇತನ ಕೊಡುಗೆ : ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ತನ್ನ ಭಾಷಣದಲ್ಲಿ ಇಂದ್ರಪ್ರಸ್ಥ ವಿದ್ಯಾಲಯದ ಸಂಚಾಲಕರು ತಾನು ಕಲಿತ ಉಪ್ಪಿನಂಗಡಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಇರುವುದನ್ನು ಮನಗಂಡು ಇಬ್ಬರು ಶಿಕ್ಷಕರನ್ನು ಮತ್ತು ನೆಕ್ಕಿಲಾಡಿ ಶಾಲೆಗೆ ಓರ್ವ ಶಿಕ್ಷಕರು ಸೇರಿದಂತೆ ಒಟ್ಟು 3 ಶಿಕ್ಷಕರಿಗೆ ವೇತನವನ್ನು ನೀಡುತ್ತಿದ್ದಾರೆ. ಇದಕ್ಕೆ ತಾಲ್ಲೂಕು ಪಂಚಾಯಿತಿ ವತಿಯಿಂದ ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು.

ವಿಶಿಷ್ಠ ರೀತಿಯಲ್ಲಿ ಉದ್ಘಾಟನೆ: ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಯಾವುದೇ ಕಾರ್‍ಯಕ್ರಮ ನಡೆಸುವಾಗ ಅದರಲ್ಲೊಂದು ವೈಶಿಷ್ಠತೆ ಇರುತ್ತದೆ, ಅದರಂತೆ ಇಂದಿನ ಉದ್ಘಾಟನಾ ಕಾರ್‍ಯವನ್ನು “ಮೇಲಿಂದ ಬಂದ ಹೂವನ್ನು ಅರಳಿಸಿ, ಅದರಲ್ಲಿದ್ದ ಚೆಂಡನ್ನು ಹೊರಳಿಸುವ ಮೂಲಕ” ವಿಶಿಷ್ಠ ರೀತಿಯಲ್ಲಿ ಉದ್ಘಾಟಿಸಲಾಯಿತು.

ಸನ್ಮಾನ: ಸಮಾರಂಭದಲ್ಲಿ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ದೈಹಿಕ ಶಿಕ್ಷಕ ಮೋನಪ್ಪ ಪಟ್ಟೆಯವರನ್ನು ಸನ್ಮಾನಿಸಲಾಯಿತು. ವಿದ್ಯಾಲಯದ ಪ್ರಾಚಾರ್ಯ ಜೋಸ್ ಎಂ.ಜೆ. ಸ್ವಾಗತಿಸಿ, ಶಿಕ್ಷಕಿ ವೀಣಾ ವಂದಿಸಿದರು. ಸುಪ್ರೀಯ, ನೇಹ ಕಾರ್‍ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.