Breaking News

ಭೀಕರ ಪ್ರವಾಹಕ್ಕೆ ತುತ್ತಾದ ಚಾರ್ಮಾಡಿಯ ಕೊಳಂಬೆಯಲ್ಲಿ ಅಂಬಿಕಾದ ವಿದ್ಯಾರ್ಥಿಗಳಿಂದ ಶ್ರಮದಾನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು:  ಚಾರ್ಮಾಡಿಯ ತಾಲೂಕಿನ ಕೊಳಂಬೆ ಗ್ರಾಮದಲ್ಲಿ ಪ್ರವಾಹದಿಂದಾಗಿ ಮನೆಗಳಿಗೆ ಹಾನಿ ಹಾಗೂ ಕೃಷಿ ಭೂಮಿಯಲ್ಲಿ ಮರಳು ತುಂಬಿದ್ದು ಸಂತ್ರಸ್ತರ ನೆರವಿಗಾಗಿ ಅಂಬಿಕಾ ವಿದ್ಯಾ ಸಮೂಹ ಸಂಸ್ಥೆಯಿಂದ ಸಂಸ್ಥೆಯ ಸಂಚಾಲಕರಾದ ಶ್ರೀ ಸುಬ್ರಹ್ಮಣ್ಯ ನಟ್ಟೋಜರೊಂದಿಗೆ ಉಪಪ್ರಾಚಾರ್ಯರು, ಉಪನ್ಯಾಸಕರು ಸುಮಾರು ಎಪ್ಪತ್ತು ವಿದ್ಯಾರ್ಥಿಗಳು ಶ್ರಮದಾನ ಮಾಡಿ ಸಂತ್ರಸ್ತರ ನೆರವಿಗೆ ಮುಂದಾದರು. ಸಂಸ್ಥೆಯ ಸಂಚಾಲಕ ಶ್ರೀ ಸುಬ್ರಹ್ಮಣ್ಯ ನಟ್ಟೋಜರು ಸಂತ್ರಸ್ತರ ಮನೆಗಳ ಪುನರ್ನಿಮಾಣಕ್ಕೆ ರೂ.10,000 ಧನ ಸಹಾಯ ಮಾಡಿದರು.

ವಿದ್ಯಾರ್ಥಿ ನಾಯಕರಾದ ಶ್ರೀನಿಧಿ, ಮನ್ವಿ, ಪ್ರಥಮ್, ವರುಣ್ ಇವರ ಮುಂದಾಳತ್ವದಲ್ಲಿ ಭತ್ತ ಬೆಳೆಯುವ ಗದ್ದೆಗಳಲ್ಲಿ, ಅಡಿಕೆ ತೋಟಗಳಲ್ಲಿ ಪ್ರವಾಹದಿಂದಾಗಿ ತುಂಬಿದ್ದ ಹೊಯ್ಗೆಯನ್ನು ತೆಗೆದು ಮತ್ತೆ ಕೃಷಿಗಾಗಿ ಭೂಮಿ ಉಪಯುಕ್ತವಾಗುವಂತೆ ಶ್ರಮಿಸಿದರು. ಬಿದ್ದುಹೋದ ಮನೆಯ ಮರುಬಳಕೆ ಮಾಡಬಹುದಾದ ಹಂಚು, ಹಲಗೆ ಕಲ್ಲುಗಳನ್ನು ಪ್ರತ್ಯೇಕಿಸಿ ಜೋಡಿಸುವ ಕೆಲಸ ಪೂರೈಸಿ ಸಂತ್ರಸ್ತರಿಗೆ ಸಹಾಯ ಹಸ್ತ ನೀಡುವಲ್ಲಿ ಮಾನವೀಯತೆ ಮೆರೆದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.