ಕಡ್ಯ-ಕೊಣಾಜೆ: ಜಲಾ ಶಕ್ತಿ ಜಲಾಮೃತ ವಿಶೇಷ ಗ್ರಾಮಸಭೆ

Puttur_Advt_NewsUnder_1
Puttur_Advt_NewsUnder_1

ಕಡಬ : ಕಡ್ಯ-ಕೊಣಾಜೆ ಗ್ರಾಮ ಪಂಚಾಯತ್‌ನ ಜಲಾ ಶಕ್ತಿ ಜಲಾಮೃತ 2019 ವಿಶೇಷ ಗ್ರಾಮ ಸಭೆಯು ಕಡ್ಯ ಕೊಣಾಜೆ ಶ್ರೀ ದುರ್ಗಾಂಬಿಕಾ ಭಜನಾ ಮಂದಿರದ ಸಭಾಂಗಣದಲ್ಲಿ ಆ.28 ರಂದು ನಡೆಯಿತು. ಜಲಾ ಶಕ್ತಿ ಜಲಾಮೃತ ಕುರಿತು ಮಾಹಿತಿ ನೀಡಿದ ಎನ್.ಆರ್.ಇ.ಜಿ. ತಾಲೂಕು ಸಂಯೋಜಕ ಚಂದ್ರಶೇಖರ್ ಬಿ., ಮಳೆಗಾಲದಲ್ಲಿ ಎಷ್ಟೇ ಮಳೆ ಬಂದರೂ ನಿಯಮಿತ ಪ್ರಮಾಣದಲ್ಲಿ ಅಂತರ್ಜಲ ತುಂಬದೆ, ಬೇಸಿಗೆಯಲ್ಲಿ ತೀವ್ರ ತರಹದ ನೀರಿನ ಅಭಾವವನ್ನು ಎದುರಿಸುವ ಪರಿಸ್ಥಿತಿ ಉಂಟಾಗಿದೆ. ಆದ್ದರಿಂದ ಸಾರ್ವಜನಿಕರು ಮಳೆ ನೀರನ್ನು ಭೂಮಿಗೆ ಇಂಗಿಸುವ ಮೂಲಕ ಅಂತರ್ಜಲ ವೃದ್ಧಿಸುವಲ್ಲಿ ಮುಂದಾಗಿ ಜಲಮರುಪೂರಣ ವ್ಯವಸ್ಥೆ ಮಾಡಿಕೊಳ್ಳವುದು ಅನಿವಾರ್ಯ ಎಂದ ಅವರು, ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ನೀರಿಂಗಿಸುವಿಕೆ, ಜಲಮರುಪೂರಣ, ಕಿಂಡಿಅಣೆಕಟ್ಟು, ಬಾವಿ, ಕೆರೆ ಸೇರಿದಂತೆ ಜಲಸಂರಕ್ಷಣೆ ಉದ್ದೇಶಿಸಿತ ಕೆಲಸ ಕಾರ್ಯಗಳಿಗೆ ವಿಶೇಷ ಕ್ರೀಯಾ ಯೋಜನೆ ತಯಾರಿಸಿ, ಕಾಮಗಾರಿ ನಡೆಸಲು ಅವಕಾಶವಿದ್ದು, ಗ್ರಾಮಸ್ಥರು ಈ ಬಗ್ಗೆ ಆಸಕ್ತಿ ವಹಿಸಿಬೇಕೆಂದು ತಿಳಿಸಿದರು.

ಪಂಚಾಯತ್ ಅಭಿವೃಧ್ಧಿ ಅಧಿಕಾರಿ ಪದ್ಮನಾಭ ಗೌಡ ಮಾತನಾಡಿ, ಕಳೆದ ಮಳೆಗಾಲದಲ್ಲಿ ಹಾಗೂ ಪ್ರಸ್ತುತ ಮಳೆಗಾಲದಲ್ಲಿ ಮಳೆಯಿಂದ ವಿವಿದೆಡೆ ಭೂ ಕುಸಿತಗಳು ಸಂಭವಿಸಿದ್ದು, ಭೂಮಿಯ ಅಂತರ್ಜಲವೂ ಕುಸಿದು ಬೇಸಿಗೆಯಲ್ಲಿ ನೀರಿಗೆ ಆಹಾಕಾರ ಉಂಟಾಗುವ ಸ್ಥಿತಿ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ನೀರಿನ ಸಂರಕ್ಷಣೆಗೆ ಗ್ರಾಮಸ್ಥರು ಮುಂದಾಗಬೇಕೆಂದರು. ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸುರೇಶ್ ಕುಮಾರ್ ಪಿ. ಸಭೆಯ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಅಧ್ಯಕ್ಷೆ ಬೇಬಿ, ಉಪಾಧ್ಯಕ್ಷ ಯಶೋಧರ ಗೌಡ, ಸದಸ್ಯರಾದ ಪೊಡಿಯ ಗೌಡ, ಪುಷ್ಪಾ ಕುಮಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಪದ್ಮನಾಭ ಗೌಡ ಸ್ವಾಗತಿಸಿ, ಗುಮಾಸ್ತ ಸತೀಶ್ ಕೆ. ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.