Breaking News

ನೆಲ್ಯಾಡಿ: ನಿವೃತ್ತ ಗ್ಯಾಂಗ್‌ಮ್ಯಾನ್ ಬಾಬು ಹೆಗ್ಡೆ ನಿಧನ

Puttur_Advt_NewsUnder_1
Puttur_Advt_NewsUnder_1


ನೆಲ್ಯಾಡಿ: ನೆಲ್ಯಾಡಿ ಗ್ರಾಮದ ಪಡ್ಪುಗುಡ್ಡೆ ನಿವಾಸಿ, ನಿವೃತ್ತ ಹೆದ್ದಾರಿ ಗ್ಯಾಂಗ್‌ಮ್ಯಾನ್ ಬಾಬು ಹೆಗ್ಡೆ(83ವ.)ರವರು ಅಲ್ಪಕಾಲದ ಅಸೌಖ್ಯದಿಂದ ಆ.28ರಂದು ಸ್ವಗೃಹದಲ್ಲಿ ನಿಧನರಾದರು. ಬಾಬು ಹೆಗ್ಡೆಯವರು ಸುಮಾರು 25 ವರ್ಷಗಳ ಕಾಲ ಹೆದ್ದಾರಿ ಗ್ಯಾಂಗ್‌ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು.

ಮೃತರು ಪುತ್ರರಾದ ದಾಮೋದರ ಹೆಗ್ಡೆ, ನಾರಾಯಣ ಹೆಗ್ಡೆ, ಜನಾರ್ದನ ಹೆಗ್ಡೆ, ಚೆನ್ನಪ್ಪ(ಚಂದ್ರಶೇಖರ)ಹೆಗ್ಡೆ, ಪುತ್ರಿಯರಾದ ಜಯಂತಿ, ಯಶೋಧರನ್ನು ಅಗಲಿದ್ದಾರೆ. ಮೃತರ ಮನೆಗೆ ಜಿ.ಪಂ.ಸದಸ್ಯ ಸರ್ವೋತ್ತಮ ಗೌಡ, ತಾ.ಪಂ.ಸದಸ್ಯೆ ಉಷಾ ಅಂಚನ್, ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ, ಮಾಜಿ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ಸದಸ್ಯರಾದ ಕೆ.ಪಿ.ಅಬ್ರಹಾಂ, ಅಬ್ದುಲ್ ಹಮೀದ್, ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಗಳ ಸಂಚಾಲಕ ಅಬ್ರಹಾಂ ವರ್ಗೀಸ್, ನೆಲ್ಯಾಡಿ ಶ್ರೀರಾಮ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರವಿಚಂದ್ರ ಹೊಸವೊಕ್ಲು ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.