ಅಲ್ಪಸಂಖ್ಯಾತರ ಸ್ಕಾಲರ್‌ಶಿಪ್ ವಿಳಂಬ ನೀತಿ ಖಂಡಿಸಿ ಸರ್ವ ಕಾಲೇಜ್ ವಿದ್ಯಾರ್ಥಿ ಸಂಘದಿಂದ ಪ್ರತಿಭಟನೆ- ಮನವಿ ಸಲ್ಲಿಕೆ

ಪುತ್ತೂರು: ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ವತಿಯಿಂದ ಅಲ್ಪಸಂಖ್ಯಾತ ಇಲಾಖೆಯ ಸ್ಕಾಲರ್ಶಿಪ್ ವಿಳಂಬ ನೀತಿಯನ್ನ ಖಂಡಿಸಿ ಆ.28ರಂದು ಅಲ್ಪಸಂಖ್ಯಾತ ಇಲಾಖೆಯ ಕಛೇರಿಯ ಮುಂಭಾಗ ಪ್ರತಿಭಟಿಸಿ, ಬಳಿಕ ಮನವಿ ಸಲ್ಲಿಸಲಾಯಿತು.ಈ ಸಂಧರ್ಭದಲ್ಲಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ಭಾತೀಷ್ ಅಳಕೆಮಜಲು ಮಾತನಾಡಿ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನ ತಕ್ಷಣ ಬಿಡುಗಡೆ ಮಾಡಲು ಸಂಬಂಧಪಟ್ಟವರು ಶ್ರಮಿಸುವ ಮೂಲಕ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.

ವಿದ್ಯಾರ್ಥಿ ನಾಯಕರಾದ ಮಜೀದ್ ಕೊಡಿಪ್ಪಾಡಿ ಹಾಗೂ ಇಸ್ರಾರ್ ಗೂಡಿನಬಳಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿ ಪ್ರಮುಖರಾದ ಗುರುದತ್ ಮಲ್ಲಿ, ಶಾರೂಕ್ ಪರ್ಲಿಯಾ, ಆಸ್ಟೆಲ್ ಲೋಬೋ, ವಿಕೇಶ್ ಬಂಗೇರಾ, ಅನ್ಸುಲ್ ಶೆಟ್ಟಿ, ಸುಲೈಮಾನ್ ಶಾಫಿ, ಲಿಬ್ನಿ ಕಾರುಣ್ಯ, ಲೋಯ್, ಜೋಯಲ್, ಸಫೀಕ್ ಬಾಯಂಬಾಡಿ ಇನ್ನಿತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.