Breaking News

ಸೆ.1: ಬೆಳ್ಳಿಪ್ಪಾಡಿಯಲ್ಲಿ 15ನೇ ವರ್ಷದ ಶ್ರೀ ಕೃಷ್ಣವೇಷ ಸ್ಪರ್ಧೆ-ಕೆಸರುಗದ್ದೆ ಕ್ರೀಡೋತ್ಸವ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ವಿಶ್ವಹಿಂದೂ ಪರಿಷದ್ ಮತ್ತು ಬಜರಂಗದಳ ಘಟಕ ಬೆಳ್ಳಿಪ್ಪಾಡಿ ಇದರ ನೇತೃತ್ವದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 15ನೇ ವರ್ಷದ ಶ್ರೀ ಕೃಷ್ಣ ವೇಷ ಸ್ಪರ್ಧೆ ಹಾಗೂ ಕೆಸರುಗದ್ದೆ ಕ್ರೀಡೋತ್ಸವ ಸೆ.1ರಂದು ಬೆಳ್ಳಿಪ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವರ ಬಾಕಿಮಾರು ಗದ್ದೆಯಲ್ಲಿ ನಡೆಯಲಿದೆ. ಬೆಳಿಗ್ಗೆ9 ಗಂಟೆಗೆ ಸಭಾ ಕಾರ್ಯಕ್ರಮ ಮತ್ತು ಉದ್ಘಾಟನೆ ನಡೆಯಲಿದ್ದು ಬಳಿಕ 1ರಿಂದ 5 ವರ್ಷ ಹಾಗೂ 6ರಿಂದ 10 ವರ್ಷದವರೆಗಿನವರಿಗೆ ಶ್ರೀ ಕೃಷ್ಣವೇಷ ಸ್ಪರ್ಧೆ ನಡೆಯಲಿದೆ. ಪುರುಷರಿಗೆ ವಾಲಿಬಾಲ್, ಹಗ್ಗಜಗ್ಗಾಟ, ಮಾನವ ಕಂಬಳ, ಮಡಕೆ ಹೊಡೆಯುವುದು ಹಾಗೂ ಇತರ ಸ್ಪರ್ಧೆಗಳು ನಡೆಯಲಿದ್ದು ಮಹಿಳೆಯರಿಗೆ ಹಗ್ಗಜಗ್ಗಾಟ, ಥ್ರೋಬಾಲ್ ಹಾಗೂ ಇತರ ಸ್ಪರ್ಧೆಗಳು ಮತ್ತು ಬಾಲಕ-ಬಾಲಕಿಯರಿಗೆ ವಿವಿಧ ಸ್ಪರ್ಧೆಗಳು ಜರಗಲಿದೆ. ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.