ಸೆ. 2-4: ಕೋಡಿಂಬಾಡಿಯಲ್ಲಿ 36ನೇ ವರ್ಷದ ಗಣೇಶೋತ್ಸವ

Puttur_Advt_NewsUnder_1
Puttur_Advt_NewsUnder_1
  • ನೂತನ ರಂಗ ಮಂದಿರ ಉದ್ಘಾಟನೆ-108 ತೆಂಗಿನ ಕಾಯಿ ಗಣಯಾಗ


ಪುತ್ತೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಡಿಂಬಾಡಿ ಇದರ ವತಿಯಿಂದ 36ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ.2ರಿಂದ 4ರವರೆಗೆ ಕೋಡಿಂಬಾಡಿ ಅಶ್ವತ್ಥಕಟ್ಟೆ ವಠಾರದಲ್ಲಿ ನಡೆಯಲಿದೆ. ಸೆ.2ರಂದು ಬೆಳಿಗ್ಗೆ ಶ್ರೀ ಮಹಾಗಣಪತಿ ಪ್ರತಿಷ್ಠಾ ಪೂಜೆ ನಡೆಯಲಿದ್ದು ವಿನಾಯಕನಗರ ಕೃಷ್ಣ ಕೃಪಾ ಇಂಡಸ್ಟ್ರ್ರೀಸ್‌ನ ಮಾಲಕ ಭವಿನ್ ಸೌಜನಿಯವರು ಧ್ವಜಾರೋಹಣ ನೆರವೇರಿಸಲಿದ್ದಾರೆ.

ನಂತರ ಗಣಹೋಮ, ಮಹಾಪೂಜೆ-ಪ್ರಸಾದ ವಿತರಣೆ ನಡೆಯಲಿದ್ದು ಬಳಿಕ ಜಿ.ಪಂ. ಸದಸ್ಯೆ ಶಯನಾ ಜಯಾನಂದರವರು ನೂತನ ರಂಗ ಮಂದಿರ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದ್ದು ಸಂಜೆ ವಿನಾಯಕನಗರ ಯುವಶಕ್ತಿ ಗೆಳೆಯರ ಬಳಗದವರಿಂದ ಭಜನಾ ಸೇವೆ, ಕೋಡಿಂಬಾಡಿ ಹಿ.ಪ್ರಾ.ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ. ನಂತರ ಗ್ರಾ.ಪಂ. ಅಧ್ಯಕ್ಷೆ ಸಂಧ್ಯಾ ರಾಮಚಂದ್ರ ಗೌಡರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಹಾಗೂ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಪ್ರಾಂತ ಕಾರ್ಯವಾಹ ಡಾ. ಜಯಪ್ರಕಾಶ್ ಮೋನಡ್ಕರವರು ಧಾರ್ಮಿಕ ಉಪನ್ಯಾಸ ನೀಡಲಿದ್ದು ಮುಖ್ಯ ಅತಿಥಿಗಳಾಗಿ ಜಿ.ಪಂ. ಸದಸ್ಯೆ ಶಯನಾ ಜಯಾನಂದ, ಗ್ರಾ.ಪಂ. ಉಪಾಧ್ಯಕ್ಷ ಬಾಬು ಗೌಡ ಮತ್ತು ಕೋಡಿಂಬಾಡಿ ಹಿ.ಪ್ರಾ.ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಚಿತ್ರಾ ಸುರೇಶ್ ಬೋಳಾಜೆರವರು ಭಾಗವಹಿಸಲಿದ್ದಾರೆ. ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದ್ದು ನಂತರ ರಾಜ್ಯ ಪ್ರಶಸ್ತಿ ಪುರಸ್ಕೃತ ಮಂಗಳೂರು ರಾಕರ್ಸ್ ತಂಡದವರಿಂದ ವೈವಿಧ್ಯಮಯ ನೃತ್ಯ ರೂಪಕ ನಡೆಯಲಿದೆ. ಈ ದಿನ ಕೋಡಿಂಬಾಡಿಯ ವನಿತಾ ಸಮಾಜದವರು ಸ್ವಯಂಸೇವಕರಾಗಿ ಸಹಕರಿಸಲಿದ್ದಾರೆ.

ಸೆ.3ರಂದು ಬೆಳಿಗ್ಗೆ ವೇ.ಮೂ. ಶ್ರೀವತ್ಸ ಕೆದಿಲಾಯ ಶಿಬರರವರ ನೇತೃತ್ವದಲ್ಲಿ 108 ತೆಂಗಿನ ಕಾಯಿ ಗಣಯಾಗ ನಡೆಯಲಿದ್ದು ನಂತರ ಗಣಯಾಗದ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಕೋಡಿಂಬಾಡಿ ಅಶ್ವತ್ಥಕಟ್ಟೆ ಧರ್ಮಶ್ರೀ ಭಜನಾ ಮಂಡಳಿಯವರಿಂದ ಭಜನಾ ಸೇವೆ, ಕೋಡಿಂಬಾಡಿ ಗ್ರಾಮ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳ ಪುಟಾಣಿಗಳಿಂದ ಕಲಾ ವೈವಿಧ್ಯ ಜರಗಲಿದೆ. ನಂತರ ಪುತ್ತೂರಿನ ವೈದ್ಯಕೀಯ ತಜ್ಞ ಡಾ.ಸುರೇಶ್ ಪುತ್ತೂರಾಯರವರ ಅಧ್ಯಕ್ಷತೆಯಲ್ಲಿ ದಾರ್ಮಿಕ ಸಭೆ ನಡೆಯಲಿದ್ದು ಗ್ರಾಮ ವಿಕಾಸ ಸಂಯೋಜಕ ರಾಮಕೃಷ್ಣ ಬಿ. ಮೂಡಂಬೈಲುರವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕರಾದ ಉದ್ಯಮಿ ಅಶೋಕ್ ಕುಮಾರ್ ರೈ, ತಾ.ಪಂ. ಸದಸ್ಯ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೋಡಿಂಬಾಡಿ ಒಕ್ಕೂಟದ ಅಧ್ಯಕ್ಷ ಸುರೇಶ್ ಗೌಡ ಬೋಳಾಜೆರವರು ಭಾಗವಹಿಸಲಿದ್ದಾರೆ. ನಂತರ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದ್ದು ನಂತರ ಮಂಗಳೂರಿನ ಲಹರಿ ತಂಡದವರಿಂದ `ಪುದರ್ ಬೊಡ್ಚಿ ಊರು ಬೊಡ್ಚಿ’ ತುಳು ನಾಟಕ ನಡೆಯಲಿದೆ. ಈ ದಿನ ಕೋಡಿಂಬಾಡಿ ಅಶ್ವತ್ಥಕಟ್ಟೆ ಧರ್ಮಶ್ರೀ ಕಲಾವೃಂದದವರು ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಸೆ.4ರಂದು ಬೆಳಿಗ್ಗೆ ಬೊಳುವಾರು ತಿರುಪತಿ ತಿರುಮಲ ಟ್ರಸ್ಟ್ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಸೇವೆ ನಡೆಯಲಿದೆ. ನಂತರ ಗಣಹೋಮ, ಅಶ್ವತ್ಥಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದ್ದು ಸಂಜೆ ವಿಸರ್ಜನಾ ಪೂಜೆ, ಶೋಭಾಯಾತ್ರೆ ನಡೆಯಲಿದೆ. ಶೋಭಾಯಾತ್ರೆಯು ಅಶ್ವತ್ಥಕಟ್ಟೆ ವಠಾರದಿಂದ ಹೊರಟು ಸೇಡಿಯಾಪು, ದಾರಂದಕುಕ್ಕುವರೆಗೆ ಸಾಗಿ ಮರಳಿ ಕೋಡಿಂಬಾಡಿ ವಿನಾಯಕನಗರದಿಂದಾಗಿ ಮಠಂತಬೆಟ್ಟು ಶ್ರೀ ರಾಜರಾಜೇಶ್ವರಿ ದೇವಸ್ಥಾನ, ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬಳಿಯಿಂದ ಹಿಂತಿರುಗಿ ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದವರೆಗೆ ಸಾಗಿ ಶಾಂತಿನಗರದ ಕೆರೆಯಲ್ಲಿ ಶ್ರೀ ಮಹಾಗಣಪತಿ ವಿಗ್ರಹದ ಜಲಸ್ಥಂಭನ ನಡೆಯಲಿದೆ. ಈ ದಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಸ್ವಯಂಸೇವಕರಾಗಿ ಸಹಕರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.