ವಿವೇಕಾನಂದ ಕಾಲೇಜಿನಲ್ಲಿ ‘ಮಣಿಕರ್ಣಿಕಾ ಮಾತುಗಾರರ ವೇದಿಕೆ’ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
  • ಗಣೇಶ ಹಬ್ಬ ಎಂದರೆ ಸಂಘಟನೆಯ ಸಂಕೇತ: ಪುನೀತ್


ಪತ್ತೂರು: ಗಣೇಶ ಚತುರ್ಥಿ ಸಂಭ್ರಮವನ್ನು ಇಂದು ಸಾರ್ವಜನಿಕವಾಗಿ ಆಚರಿಸಲಾಗುತ್ತಿದೆ ಇದು ಸಂಘಟನೆ ಮತ್ತು ಒಗ್ಗಟ್ಟಿನ ಸಂಕೇತವಾಗಿದೆ. ಇಲ್ಲಿ ಜಾತಿ, ಧರ್ಮವನ್ನು ಮರೆತು ಸಾಮರಸ್ಯದಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಆಚರಣೆಗಳು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಆದರೆ ಇಂದು ಗಣೇಶ ಚತುರ್ಥಿ ಆಚರಣೆಯಲ್ಲಿ ಪಕ್ಷಗಳನ್ನು ಕಾಣಬಹುದು ಇದು ಸಲ್ಲದು ಎಂದು ವಿವೇಕಾನಂದ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ಪುನೀತ್ ಎಸ್. ಹೇಳಿದರು.

ಅವರು ಇಲ್ಲಿನ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಆಯೋಜಿಸುವ ‘ಮಣಿಕರ್ಣಿಕ ಮಾತುಗಾರರ ವೇದಿಕೆ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ‘ಗಣಪತಿ ಬಪ್ಪಾ ಮೋರಿಯಾ’ ಎಂಬ ವಿಷಯದ ಬಗ್ಗೆ ಗುರುವಾರ ಮಾತನಾಡಿದರು.

ಗಣೇಶ ಎಂದರೆ ಭೂಲೋಕವೇ ತನ್ನ ತಂದೆ ತಾಯಿ ಎಂದು ಪೂಜಿಸಿದವನು. ಆದರೆ ವಿದ್ಯಾರ್ಥಿಗಳಲ್ಲಿ ತಂದೆ ತಾಯಿಯಲ್ಲಿರುವ ವಾತ್ಸಲ್ಯವು ಕಡಿಮೆಯಾಗಿದ್ದು, ಇಂದು ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿರುವುದು ವಿಷಾದ ಸಂಗತಿಯಾಗಿದೆ. ಗಣೇಶ ಚೌತಿ ಆಚರಣೆಯ ಹೆಸರಿನಲ್ಲಿ ಸೇರುವ ಯುವಕರು ತಮ್ಮ ಕೆಲಸಗಳನ್ನು ಶ್ರದ್ಧಾ ಭಕ್ತಿಯಿಂದ ಮಾಡುವುದರ ಮೂಲಕ ಸಮಾಜದಲ್ಲಿ ಸಾಮರಸ್ಯವನ್ನು ಬೆಳೆಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಉತ್ತಮ ಮಾತುಗಾರಾಗಿ ಪ್ರಥಮ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿನಿ ತನುಶ್ರೀ ಆಯ್ಕೆಯಾದರು. ದ್ವಿತೀಯ ವರ್ಷದ ಪತ್ರಿಕೋದ್ಯಮ ತರಗತಿಯು ಉತ್ತಮ ಮಾತುಗಾರರ ತಂಡವಾಗಿ ಹೊರಹೊಮ್ಮಿತು. ವಿದ್ಯಾರ್ಥಿಗಳಾದ ಅರುಣ್ ಕುಮಾರ್, ಅನಘಾ, ಹರ್ಷಿತಾ, ರಾಮ್ ಕಿಶನ್, ಜಗದೀಶ್, ಜಯಶ್ರೀ, ಶಶಿಧರ್, ಸವಿತಾ ರೈ, ತನುಶ್ರೀ, ಕಾರ್ತಿಕ್, ಧೀರಜ್, ಕೃತಿಕಾ, ವಿನೀತ, ದೀಪ್ತಿ, ಬೃಂದಾ, ಸಿಂಧೂ ಹಾಗೂ ಗೌತಮ್ ಅನುಭವಗಳನ್ನು ಹಂಚಿಕೊಂಡರು.

ವೇದಿಕೆಯಲ್ಲಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಭವ್ಯ ಪಿ.ಆರ್. ನಿಡ್ಪಳ್ಳಿ ಹಾಗೂ ಮಣಿಕರ್ಣಿಕ ಮಾತುಗಾರರ ವೇದಿಕೆ ಕಾರ್ಯಕ್ರಮದ ಕಾರ್ಯದರ್ಶಿ ತೇಜಶ್ರೀ ಪಿ.ವಿ. ಉಪಸ್ಥಿತರಿದ್ದರು. ತೃತೀಯ ವರ್ಷದ ವಿದ್ಯಾರ್ಥಿ ಮಮತಾ ಅಭಿಕಾರ್ ಸ್ವಾಗತಿಸಿ, ಆಕರ್ಷ ವಂದಿಸಿದರು. ಸ್ವಾತಿ ಕಾಮತ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.