ಆ.31: ತಾಂತ್ರಿಕ ಕೃಷಿ ಅಧಿಕಾರಿ ಕೆ.ಪದ್ಮನಾಭ ಶೆಟ್ಟಿ ಸೇವಾನಿವೃತ್ತಿ

Puttur_Advt_NewsUnder_1
Puttur_Advt_NewsUnder_1

ವರದಿ: ಉಮಾಪ್ರಸಾದ್ ರೈ ನಡುಬೈಲು

ಪುತ್ತೂರು: ಪುತ್ತೂರು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಕೃಷಿ ಅಧಿಕಾರಿಯಾಗಿರುವ ಕೆ. ಪದ್ಮನಾಭ ಶೆಟ್ಟಿರವರು ಅ.31ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ. 1982 ಮಾ.16ರಂದು ಬೆಳ್ತಂಗಡಿ ತಾಲೂಕಿನಲ್ಲಿ ಸೇವೆಗೆ ಸೇರಿದ ಇವರು 1990ನೇ ಮೇ 15ರಂದು ವರ್ಗಾವಣೆಗೊಂಡು 1998 ಜು.6ರವರೆಗೆ ಸುಳ್ಯ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸಿ 1998 ಜು.7ರಂದು ವರ್ಗಾವಣೆಗೊಂಡು ಪುತ್ತೂರು ತಾಲೂಕಿನ ಕಡಬ ರೈತ ಸಂಪರ್ಕ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಿದ್ದರು. 2011 ಎ.1ರಿಂದ ಪುತ್ತೂರು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ  ತಾಂತ್ರಿಕ ಕೃಷಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಕೃಷಿ ಇಲಾಖೆಯಲ್ಲಿ ಸುದೀರ್ಘ 37 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಪದ್ಮನಾಭ ಶೆಟ್ಟಿರವರು 2015ರ ಎ.25 ರಿಂದ 2016 ನ.30 ರ ವರೆಗೆ ಮುಜರಾಯಿ ಇಲಾಖೆಗೆ ಸೇರಿದ ಬಾಯಂಬಾಡಿ ಷಣ್ಮುಖ ದೇವಾಲಯದ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.  1987-88ರಲ್ಲಿ ಜೆಸಿಐನ ಸದಸ್ಯರಾಗಿ ಮತ್ತು  7 ವರ್ಷಗಳಿಂದ ರೋಟರಿ ಕ್ಲಬ್ ಸದಸ್ಯರಾಗಿರುತ್ತಾರೆ . ಇವರು ಪತ್ನಿ ವತ್ಸಲಾ ಪದ್ಮನಾಭ ಶೆಟ್ಟಿ, ಪುತ್ರಿ ಎಂಬಿಬಿಎಸ್ ವಿದ್ಯಾರ್ಥಿಯಾಗಿರುವ ಕೃತಿ ಶೆಟ್ಟಿಯವರೊಂದಿಗೆ ಪುತ್ತೂರಿನಲ್ಲಿ ವಾಸವಾಗಿದ್ದಾರೆ, ಇನ್ನೋರ್ವ ಪುತ್ರಿ ಶ್ರುತಿ ಸಂದೇಶ ರವರು ಬೆಂಗಳೂರಿನ ಎಸ್‌ಜಿಎಸ್ ಕಾಲೇಜ್‌ನ ಉಪನ್ಯಾಸಕಿಯಾಗಿದ್ದು, ಅಳಿಯ ಸಂದೇಶ್ ಇಂಜಿನಿಯರ್ ಆಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.