ಬೆಟ್ಟಂಪಾಡಿ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನ, ಪುಸ್ತಕ ಪ್ರದರ್ಶನ

ನಿಡ್ಪಳ್ಳಿ: ರಾಷ್ಟ್ರೀಯ ಗ್ರಂಥ ಪಾಲಕರ ದಿನಾಚರಣೆಯನ್ನು ಬೆಟ್ಟಂಪಾಡಿ ಪದವಿ ಕಾಲೇಜಿನಲ್ಲಿ ಆ.30 ರಂದು ನಡೆಸಲಾಯಿತು.

ಅಲ್ಲದೆ ಕಾಲೇಜಿನ ಅಡಿಟೊರಿಯಂನಲ್ಲಿ ಪುಸ್ತಕ ಪ್ರದರ್ಶನವನ್ನು ನಿಟ್ಟೆ ಕಾಲೇಜಿನ ಗ್ರಂಥಪಾಲಕ ಡಾ.ಚಂದ್ರಶೇಖರ ಡಿ ಉದ್ಘಾಟಿಸಿದರು. ಪುತ್ತೂರು ಸರಕಾರಿ ಮಹಿಳಾ ಪದವಿ ಕಾಲೇಜಿನ ಗ್ರಂಥಪಾಲಕ ಪ್ರವೀಣ್ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಇಂಗ್ಲೀಷ್ ಉಪನ್ಯಾಸಕಿ ರೇಖಾ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದರು. ಪುತ್ತೂರು ಪದವಿ ಕಾಲೇಜಿನ ಗ್ರಂಥ ಪಾಲಕ ರಾಮಚಂದ್ರ ಮುಖ್ಯ ಅತಿಥಿಯಾಗಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ವರದರಾಜ ಚಂದ್ರಗಿರಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಗ್ರಂಥ ಪಾಲಕ ರಾಮ, ಉಪನ್ಯಾಸಕ ಹರಿಪ್ರಸಾದ್ ಮತ್ತೀತರರು ಉಪಸ್ಥಿತರಿದ್ದರು.ಕಾಲೇಜು ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.