ಗಜಾನನ ಗೋಗಟೆ ನಾಡೋಳಿರವರ ಸ್ಮರಣಾರ್ಥ: ಹೊಸಮಠದಲ್ಲಿ ಹೈ ಮಾಸ್ಟ್ ಸೊಲಾರ್ ದೀಪ ಅಳವಡಿಕೆ

Puttur_Advt_NewsUnder_1
Puttur_Advt_NewsUnder_1

ಕಡಬ: ಅಮೇರಿಕದಲ್ಲಿ ನೆಲೆಸಿದ್ದ ದಿ.ಗಜಾನನ ಗೋಗಟೆ ನಾಡೋಳಿ ಅವರ ಸ್ಮರಣಾರ್ಥ ಅವರ ಪತ್ನಿ ರೇಖಾಗಜಾನನ ಗೋಗಟೆ ಹಾಗೂ ಅವರ ಪುತ್ರ ಕೃಷ್ಣ ಗಜಾನನ ಗೋಗಟೆಯವರು ಕೊಡುಗೆಯಾಗಿ ನೀಡಿದ್ದ ಹೈ ಮಾಸ್ಟ್ ಸೋಲಾರ್ ದೀಪವನ್ನು ಹೊಸಮಠ ಜಂಕ್ಷನ್‌ನಲ್ಲಿ ಅಳವಡಿಸಲಾಗಿದ್ದು ಇದನ್ನು ಗಜಾನನ ಗೋಗಟೆಯವರ ಮಾತೃಶ್ರೀ ವಸಂತಿ ಗೋಗಟೆಯವರು ಆ.30 ರಂದು ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ಹೊಸಮಠ ಸಿ.ಎ ಬ್ಯಾಂಕಿನ ಮಾಜಿ ಅಧ್ಯಕ್ಷ ಎನ್.ಕರುಣಾಕರ ಗೋಗಟೆಯವರು ಮಾತನಾಡಿ, ದೂರದ ಅಮೇರಿಕಾದಲ್ಲಿ ನೆಲೆಸಿದ್ದು ಬಳಿಕ ದಿವಂಗತರಾದ ಗಜಾನನ ಗೋಗಟೆಯವರಿಗೆ ತನ್ನ ಹುಟ್ಟೂರಿಗೆ ಏನಾದರೂ ಕೊಡುಗೆ ನೀಡಬೇಕೆಂಬ ಹಂಬಲ ಇತ್ತು, ಅವರ ಇಚ್ಚೆಯಂತೆ ಪತ್ನಿ ಹಾಗೂ ಪುತ್ರ ಈ ಸೋಲಾರ್ ದೀಪವನ್ನು ಕೊಡುಗೆಯಾಗಿ ನೀಡಿದ್ದಾರೆ, ಇದರಿಂದ ಹೊಸಮಠದಲ್ಲಿ ರಾತ್ರಿ ವೇಳೆ ಬೆಳಕಿನ ವ್ಯವಸ್ಥೆಯಾಗಿದೆ ಎಂದು ಹೇಳಿದರು. ಹೊಸಮಠ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ, ದಿ|ಗಜಾನನ ಗೋಗಟೆಯವರ ಸಹೋದರ ಕಿರಣ್ ಗೋಗಟೆಯವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಕುಟ್ರುಪಾಡಿ ಗ್ರಾ.ಪಂ. ಅಧ್ಯಕ್ಷೆ ವಿದ್ಯಾ.ಕೆ.ಗೋಗಟೆ, ಉಪಾಧ್ಯಕ್ಷ ಆನಂದ ಪೂಜಾರಿ ಅಲಾರ್ಮೆ, ಅಭಿವೃದ್ದಿ ಅಧಿಕಾರಿ ವಿಲ್ಪ್ರೆಡ್ ಲಾರೆನ್ಸ್ ರೋಡ್ರಿಗಸ್, ಸದಸ್ಯರಾದ ದೇವಯ್ಯ ಪನ್ಯಾಡಿ, ಲಿಂಗಪ್ಪ ಗೌಡ, ತನಿಯ ಸಂಪಡ್ಕ, ಸೂಸಮ್ಮ ಮತ್ತಾಯಿ,ಯಶೋಧಾ, ಆಲಿ ಯಾನೆ ಮಹಮ್ಮದಾಲಿ,ಜಾನಕಿ ಪಟ್ಟೆ, ಶಿವಪ್ರಸಾದ್ ಪುತ್ತಿಲ,ಜಾನಕಿ ಕುಂಟೋಡಿ, ಗೀತಾ.ಪಿ, ಹೊಸಮಠ ಸಿ.ಎ.ಬ್ಯಾಂಕಿನ ಮುಖ್ಯ ಕಾರ್‍ಯನಿರ್ವಾಹಣಾಧಿಕಾರಿ ಸೋಮಸುಂದರ ಶೆಟ್ಟಿ, ವಿಟು ಟೆಕ್ನಾಲಜಿನ ಚಂದ್ರಶೇಖರ, ರೂಪಾ ಗೋರೆ, ವಸುಧಾ ಗೋಗಟೆ, ಕಾಶಿನಾಥ್ ಗೋಗಟೆ ಪ್ರಮುಖರಾದ ಜೋಕಿ ಮಾರ್ಟಿಸ್, ಅಚ್ಯುತ ಗೌಡ ಉಳಿಪ್ಪು,ಶಾಜಿ ಆಂಟನಿ, ಟಿ.ಎಮ್.ಮ್ಯಾತ್ಯೂ, ಗ್ರಾಮಾಭಿವೃದ್ದಿ ಯೋಜನೆಯವರು, ಆಶಾ ಕಾರ್‍ಯಕರ್ತೆಯರು, ಸಾರ್ವಜನಿಕರು ಉಪಸ್ಥಿತರಿದ್ದರು.ಹೊಸಮಠ ಸಿ.ಎ.ಬ್ಯಾಂಕಿನ ಅಧ್ಯಕ್ಷ ಶಶಾಂಕ ಗೋಖಲೆ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.