ಬಾಲಗಂಗಾಧರ ತಿಲಕರಿಂದ ಸ್ವಾತಂತ್ರ್ಯ ಹೋರಾಟದ ಏಕೀಕರಣ: ಡಾ. ಎಂ.ಕೆ.ಪ್ರಸಾದ್‌ರಿಂದ ದೇಶ ಪ್ರೇಮ ಬೆಳೆಸುವ ಜಾಗೃತಿ ಕಾರ್ಯ

Puttur_Advt_NewsUnder_1
Puttur_Advt_NewsUnder_1
  • ಈ ಬಾರಿ ದೇವಳದ ವಠಾರದ ಗಣೇಶೋತ್ಸವದಲ್ಲಿ ಆರ್ಟಿಕಲ್ 370 ರದ್ಧತಿ ವಿಶೇಷ

ಪುತ್ತೂರು: ಭಕ್ತಿ ಹಾಗೂ ಭಾವೈಕ್ಯತೆಯ ಜತೆಗೆ ಸ್ವಾತಂತ್ರ್ಯ ಹೋರಾಟಕ್ಕಾಗಿ ಜನರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಬಾಲಗಂಗಾಧರ ತಿಲಕರ ಮುಂದಾಳತ್ವದಲ್ಲಿ ಆರಂಭಗೊಂಡ ಸಾರ್ವಜನಿಕ ಗಣೇಶೋತ್ಸವ ಗಣೇಶ ಹಬ್ಬವು ಇಂದು ನಮ್ಮೆಲ್ಲರ ಅಚ್ಚುಮೆಚ್ಚಿನ ಹಬ್ಬ. ಚದುರಿ ಹೋಗಿದ್ದ ಅಂದಿನ ಅನಕ್ಷರಸ್ಥ ಸಮಾಜದಲ್ಲಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಜನರನ್ನು ಒಂದೇ ವೇದಿಕೆಯಡಿ ಏಕೀಕರಣಗೊಳಿಸಲು ತಿಲಕರು ಆಯ್ಕೆ ಮಾಡಿದ್ದು ಈ ಗಣೇಶ ಹಬ್ಬವನ್ನು. ಜನರೂ ಅಷ್ಟೇ. ತಿಲಕರ ಕರೆಗೆ ಜಾತಿ-ಮತ ಭೇದವಿಲ್ಲದೆ ಬಹುಬೇಗನೆ ಸ್ಪಂದಿಸಿದರು. ದೇಶಾದ್ಯಂತ ಭಕ್ತಿಯ ಪ್ರವಾಹ ಹರಿಯುವುದರೊಂದಿಗೆ ಬ್ರಿಟಿಷರಿಗೆ ನಮ್ಮ ಏಕತೆಯ ಬಿಸಿಯನ್ನೂ ಮುಟ್ಟಿಸಿತು. ದಿನಕಳೆದಂತೆ ಅಧುನಿಕ ಯುಗದಲ್ಲಿ ಹಲವಾರು ಕಡೆ ಆಡರಂಬರದ ಗಣೇಶ ಹಬ್ಬ ಆಚರಿಸಿದರೆ ಬಾಲಗಂಗಾಧರ ತಿಲಕರು ಹಾಕಿಕೊಟ್ಟ ಮಾರ್ಗದಲ್ಲೇ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದ ಗಣೇಶೋತ್ಸವ ಕಾರ್ಯಕ್ರಮದಲ್ಲೂ ದೇಶ ಪ್ರೇಮ ಬೆಳೆಸುವ ಕಾರ್ಯವನ್ನು ಒಂದಿಲ್ಲೊಂದು ರೀತಿಯಲ್ಲಿ ನಡೆಸಲಾಗುತ್ತಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ಗಣೇಶನ ಹಬ್ಬ ಕೇವಲ ಕುಟುಂಬದ ಆಚರಣೆಯಾಗಿತ್ತು. ಮನೆ-ಮನೆಗಳಲ್ಲಿ ಮಾತ್ರ ಆಚರಣೆಯಲ್ಲಿದ್ದ ಗಣೇಶೋತ್ಸವವನ್ನು ಲೋಕಮಾನ್ಯ ಬಾಲಗಂಗಾಧರ ತಿಲಕರು ಜನರಲ್ಲಿನ ಸ್ವಾತಂತ್ರ್ಯದ ಕಿಚ್ಚನ್ನು ಹೊರಗೆಡುವುದಕ್ಕಾಗಿ ಸಾಧನವಾಗಿ ಬಳಸಿಕೊಂಡರು. ಅದೇ ಚಿಂತನೆಯಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಡಾ. ಎಂ.ಕೆ.ಪ್ರಸಾದ್ ಅವರ ಗೌರವಾಧ್ಯಕ್ಷತೆಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನೇತೃತ್ವದಲ್ಲಿ ನಡೆಯುವ ಗಣೇಶೋತ್ಸವದಲ್ಲಿ ದೇಶ ಪ್ರೇಮ, ಪರಿಸರ ಪ್ರೇಮ, ಸ್ವಚ್ಛತೆಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವರ್ಷಂಪ್ರತಿ ಒಂದೊಂದು ರೀತಿಯಲ್ಲಿ ನಾನಾ ಸಂದೇಶ, ಮಾಹಿತಿಗಳನ್ನೊಳಗೊಂಡ ಬೃಹತ್ ಕಟೌಟ್ ಅಳವಡಿಸಿ ಜನರನ್ನು ಜಾಗೃತಿ ಗೊಳಿಸುವ ಕೆಲಸ ಮಾಡಲಾಗುತ್ತಿದೆ. ಜೊತೆಗೆ ಸಭಾಂಗಣ ಮತ್ತು ವೇದಿಕೆ ಸೇರಿದಂತೆ ಕಂಬ-ಕಂಬಗಳಲ್ಲೂ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರವನ್ನು ಇಟ್ಟು ದೇಶ ಪ್ರೇಮಕ್ಕೆ ಸ್ಪೂರ್ತಿ ನೀಡುತ್ತಿರುವ ಗಣೇಶೋತ್ಸವ ಸಮಿತಿ ಈ ವರ್ಷ ಆರ್ಟಿಕಲ್ 370 ರದ್ದತಿ ಕುರಿತು ಹೆಚ್ಚಿನ ಮಾಹಿತಿ ನೀಡಿದೆ.

ಒನ್ ನೇಷನ್, ಒನ್ ಫ್ಲ್ಯಾಗ್, ಒನ್ ಕಾನ್‌ಸ್ಟಿಟ್ಯೂಷನ್ ಎಂಬ ಧ್ಯೇಯವನ್ನು ಇಟ್ಟು ಕೊಂಡು ಜಮ್ಮುಕಾಶ್ಮೀರದ ಆರ್ಟಿಕಲ್ 370 ರದ್ದತಿಯ ಕುರಿತು ಮಾಹಿತಿ ನೀಡುವ ಕಾರ್ಯಕ್ಕೆ ಇಲ್ಲಿ ಸಿದ್ಧತೆ ನಡೆಯುತ್ತಿದೆ. ಇದರ ಜೊತೆ ಸಂತೃಪ್ತ ರೈತ ಸಂತೃಪ್ತ ಭಾರತ, ನಮ್ಮ ಸೈನ್ಯ, ನಮ್ಮ ಹೆಮ್ಮೆ ಸೇರಿದಂತೆ ಆಧುನಿಕ ವಿಜ್ಞಾನ ಯುಗದ ಸಂಶೋಧನಾ ಭರಿತ ಮಾಹಿತಿಗಳನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶ ಇಟ್ಟುಕೊಂಡು ಸಭಾಂಗಣದ ಉದ್ದಕ್ಕೂ ಬೃಹತ್ ಕಟೌಟ್‌ಗಳ ಅಳವಡಿಸಲಾಗುತ್ತದೆ. ಇದರ ಪೂರ್ಣ ಉಸ್ತುವಾರಿಯನ್ನು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ವಹಿಸಿಕೊಂಡಿದ್ದಾರೆ. ಈಗಾಗಲೇ ಕಟೌಟ್ ಅಳವಡಿಸುವ ಪ್ರಕ್ರಿಯೆ ನಡೆಯುತ್ತಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.