ಮರ್ದಾಳ ಗಣೇಶ್ ಕೈಕುರೆಯವರ ಕೃಷಿ ಭೂಮಿಯಲ್ಲಿ ಕಂಡೊಟೊಂಜಿ ದಿನ ಕಾರ್‍ಯಕ್ರಮ

Puttur_Advt_NewsUnder_1
Puttur_Advt_NewsUnder_1

ಭತ್ತದ ನೇಜಿ ನಾಟಿ ಮಾಡಿ ಸಂಭ್ರಮಿಸಿದ ನೂಜಿಬಾಳ್ತಿಲ ಬೆಥನಿ ಪ.ಪೂ ಕಾಲೇಜಿನ ವಿದ್ಯಾರ್ಥಿಗಳು

ಕಡಬ : ಮರ್ದಾಳದ ಗಣೇಶ್ ಕೈಕುರೆಯವರ ಭತ್ತದ ಗದ್ದೆಯಲ್ಲಿ ನೂಜಿಬಾಳ್ತಿಲ ಬೆಥನಿ ಪ.ಪೂ ಕಾಲೇಜಿನ ವಿದ್ಯಾರ್ಥಿಗಳಿಂದ “ಕಂಡೊಟೊಂಜಿ ದಿನ” ಕಾರ್‍ಯಕ್ರಮ ಆ. 29ರಂದು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಗದ್ದೆಯಲ್ಲಿ ನೇಜಿ ನಾಟಿ ಮಾಡುವ ಮೂಲಕ ಸಂಭ್ರಮಿಸಿದರು.

ಬೆಥನಿ ಕಾಲೇಜಿನ ತುಳು ಸಂಘದ ಆಶ್ರಯದಲ್ಲಿ ಕಡಬ ಲಯನ್ಸ್ ಕ್ಲಬ್ ಸಹಕಾರದೊಂದಿಗೆ ಕೈಕುರೆ ಕುಟುಂಬಸ್ಥರು ಸಂಘಟಿಸಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಅಧ್ಯಕ್ಷ ತೋಮಸ್ ವಹಿಸಿದಿದ್ದು ಕಾರ್ಯಕ್ರಮ ಉದ್ಘಾಟಿಸಿದರು.

ನೂಜಿಬಾಳ್ತಿಲ ಗ್ರಾ.ಪಂ ಅಧ್ಯಕ್ಷ , ಬೆಥನಿ ಪ.ಪೂ ಕಾಲೇಜಿನ ಎಸ್‌ಡಿಎಮ್‌ಸಿ ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ ಮಾತನಾಡಿ, ಕೃಷಿ ಕ್ಷೇತ್ರವೇ ನಮ್ಮ ಆರ್ಥಿಕ ಮೂಲವಾಗಿದ್ದು ಕೃಷಿ ಇಲ್ಲದೆ ಬದುಕಲು ಕಷ್ಟವಾಗುತ್ತಿರುವ ಇಂದಿನ ಯುಗದಲ್ಲಿ ಭತ್ತದ ಕೃಷಿಯೇ ಮಾಯವಾಗುತ್ತಿದೆ ಆದರೆ ಇಂತಹ ಸಂದರ್ಭದಲ್ಲಿ ನಮ್ಮ ಬೆಥನಿ ಸಂಸ್ಥೆಯ ವಿದ್ಯಾರ್ಥಿಗಳಿಗೆ ತಾ.ಪಂ ಸದಸ್ಯ ಗಣೇಶ್ ಕೈಕುರೆಯವರ ಕೃಷಿ ಭೂಮಿಯಲ್ಲಿ ಭತ್ತದ ಕೃಷಿ ಅವಲಂಬಿಸಿದ್ದು ವಿದ್ಯಾರ್ಥಿಗಳಿಂದ ನೇಜಿ ನಾಟಿ ಮಾಡಿಸುವ ಮೂಲಕ ವಿದ್ಯಾರ್ಥಿ ಜೀವನದಲ್ಲಿ ಅನ್ನದಾತನ ಬಗ್ಗೆ ಹೆಚ್ಚಿನ ಒಲವು ತೋರಬೇಕೆಂದು ಇಂತಹ ಕಾರ್ಯಕ್ರಮ ಅತ್ಯುತ್ತಮವಾಗಿದೆ ಎಂದರು.

ಕಡಬ ಕೃಷಿ ಅಧಿಕಾರಿ ತಿಮ್ಮಪ್ಪ ಗೌಡ ಕೃಷಿಯ ಬಗ್ಗೆ ಮಾಹಿತಿ ನೀಡಿ ಹಿಂದಿನ ಕೃಷಿ ಪದ್ದತಿಗೂ ಈಗಿನ ಆಧುನಿಕ ಕೃಷಿ ಪದ್ದತಿಗೂ ಇರುವ ವ್ಯತ್ಯಾಸವನ್ನು ತಿಳಿಸಿ ಆಧುನಿಕ ಕೃಷಿ ಪದ್ಧತಿಗೆ ಎಲ್ಲರೂ ಹೊಂದಿಕೊಂಡು ಭತ್ತದ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕೆಂದರು. ಕಡಬ ಕದಂಬ ಜೆಸಿಐ ಅಧ್ಯಕ್ಷ ರವಿಚಂದ್ರ ಪಡುಬೆಟ್ಟು ಮಾತನಾಡಿ ಗ್ರಾಮೀಣ ಭಾಗದಲ್ಲಿ ಕೃಷಿ ಕ್ಷೇತ್ರದಲ್ಲಿ ನಡೆಯುವ ಕಾರ್‍ಯಕ್ರಮ ಯಶಸ್ವಿಯಾಗಲೆಂದು ಹಾರೈಸಿದರು.

ಬೆಥನಿ ಪ.ಪೂ ಕಾಲೇಜಿನ ಪ್ರಾಂಶುಪಾಲರಾದ ಜಾರ್ಜ್ ಟಿ.ಎಸ್ ಮಾತನಾಡಿ ಪಠ್ಯಶಿಕ್ಷಣದೊಂದಿಗೆ ಕೃಷಿ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಎಲ್ಲರೂ ಕೈಜೋಡಿಸಬೇಕಾಗಿದ್ದು ಇಂದು ನಮ್ಮ ವಿದ್ಯಾರ್ಥಿಗಳಿಗೆ ಮರ್ದಾಳದಲ್ಲಿ ನಮ್ಮ ತಾ.ಪಂ ಸದಸ್ಯ ಗಣೇಶ್ ಕೈಕುರೆಯರ ಕೃಷಿ ಭೂಮಿಯಲ್ಲಿ ಭತ್ತದ ಕೃಷಿ ನಾಟಿ ಮಾಡಿಸುವ ಮೂಲಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲಾಗುತ್ತಿದೆ ಎಂದ ಅವರು ಇಂತಹ ವ್ಯವಸ್ಥೆಗೆ ಅವಕಾಶ ಮಾಡಿಕೊಟ್ಟ ಗಣೇಶ್ ಕೈಕುರೆ ಕುಟುಂಬಸ್ಥರಿಗೆ ಕೃತಜ್ಞತೆ ಸಲ್ಲಿಸಿದರು.

ಪ್ರತೀ ವರ್ಷ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ತಮ್ಮ ಗದ್ದೆಯಲ್ಲಿ ಭತ್ತದ ನೇಜಿ ನಾಟಿ ಮಾಡಿಸುವ ಮೂಲಕ ಕೃಷಿಗೆ ಪ್ರೋತ್ಸಾಹಿಸುತ್ತಿರುವ ಕೈಕುರೆ ಮೀನಾಕ್ಷಿಬಾಬು ಗೌಡ, ರನ್ನು ಕಾಲೇಜಿನ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಜೆಸಿಐ ಪ್ರ.ಕಾರ್‍ಯದರ್ಶಿ ಕಾಶಿನಾಥ್ ಗೋಗಟೆ, ಲಯನ್ಸ್ ನಿಕಟಪೂರ್ವ ಅಧ್ಯಕ್ಷ ಸ್ಕರಿಯಾ, ಮರ್ದಾಳ ಗ್ರಾ.ಪಂ ಪಿಡಿಒ ಶೇಖರ್, ಕಾರ್ಯದರ್ಶಿ ವೆಂಕಟ್ರಮಣ , ಲೆಕ್ಕಸಹಾಯಕ ಭುವನೇಂದ್ರ ಕುಮಾರ್,sಶ್ರೀ,ಕ್ಷೇ.ಧ.ಗ್ರಾ.ಯೋಜನೆ ಬಿಳಿನೆಲೆ ವಲಯ ಮೇಲ್ವಿಚಾರಕ ಧರ್ಣಪ್ಪ ಗೌಡ, ಸೇವಾ ಪ್ರತಿನಿಧಿ ಸತೀಶ್.ಕೆ , ಭಾರತೀಯ ಸೇನಾನಿ ಚರಣ್ ಐತ್ತೂರು, ಬೆಥನಿ ಪ್ರೌಢ ಶಿಕ್ಷಕ ತೋಮಸ್ ಎ.ಕೆ ವೇದಿಕೆಯಲ್ಲಿ ಉಪಸ್ಥತರಿದ್ದರು. ಮೆಸ್ಕಾಂ ಗುತ್ತಿಗೆದಾರ ಅಭಿಲಾಷ್ , ಬೆಥನಿ ಪ.ಪೂ ಕಾಲೇಜಿನ ಉಪನ್ಯಾಸಕರಾದ ಶಾಂಭವಿ, ಚಂದ್ರಶೇಖರ, ಆನಿತೋಮಸ್, ಲೀನಾ, ದಿಲ್‌ಶಾದ್, ಶ್ವೇತಾರಾಣಿ, ಜಿನ್ಸಿ, ಬೀನಾ, ಪುನೀತ್, ಶಿಕ್ಷಕರಾದ ಬೀಜು, ಪ್ರದೀಪ್, ದೇವಣ್ಣ, ಪ್ರಮುಖರಾದ ಮೋಹನ್ ಪಂಜೋಡಿ, ಸತೀಶ್‌ಚಂದ್ರ ಮೈಕಾಜೆ, ವೆಂಕಟರಮಣ ಮೊದಲಾದವರು ಉಪಸ್ಥಿತರಿದ್ದರು.
ಲ| ಗಣೇಶ್ ಕೈಕುರೆ ಸ್ವಾಗತಿಸಿ, ಲ|ನೀಲಾವತಿಶಿವರಾಂ ವಂದಿಸಿದರು. ಲ|ರಮೇಶ್‌ನಾಯಕ ಕಾರ್‍ಯಕ್ರಮ ನಿರೂಪಿಸಿದರು.

ಆಧುನಿಕ ಯುಗದಲ್ಲಿ ವಾಣಿಜ್ಯ ಬೆಳೆಗಳತ್ತ ಕೃಷಿಕರು ಅವಲಂಬಿತರೊಳಗಾಗಿದ್ದು ಅನ್ನದಾತನ ಬಗ್ಗೆ ಅಷ್ಟಾಗಿ ಗಮನ ಹರಿಸುತ್ತಿಲ್ಲ ಆದರೆ ಅಕ್ಕಿಯೇ ನಮ್ಮ ಪ್ರಾಮುಖ್ಯ ಆಹಾರ ವಾಗಿದ್ದು ಭತ್ತದ ಕೃಷಿಗೆ ಹೆಚ್ಚಿನ ಒಳವು ತೋರಬೇಕಾಗಿದೆ. ಕೃಷಿ ಭೂಮಿಗಳನ್ನು ವಾಣಿಜ್ಯಕರಣಗೊಳಿಸಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದ್ದು ಪ್ರಕೃತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಜೊತೆಗೆ ನಮ್ಮನ್ನು ಕೃಷಿ ಸಂಸ್ಕೃತಿಯಿಂದ ದೂರ ಒಯುತ್ತಿದೆ. ಇದರಿಂದ ಮುಂದಿನ ಪೀಳಿಗೆಗೆ ಕೃಷಿ ಕ್ಷೇತ್ರದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ವಿದ್ಯಾರ್ಥಿಗಳಲ್ಲಿ ಭತ್ತದ ಕೃಷಿಯ ಬಗ್ಗೆ ಆಸಕ್ತಿ ತುಂಬಬೇಕಾಗಿದೆ. ವಿದ್ಯಾರ್ಥಿಗಳಿಗೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳೊಂದಿಗೆ ಕೃಷಿ ಕಲಿಕೆಗೆ ಪ್ರೋತ್ಸಾಹಿಸಲಾಗುವುದು.
ಜಾರ್ಜ್ .ಟಿ.ಎಸ್
ಪ್ರಾಶುಂಪಾಲರು ಬೆಥನಿ ಪ.ಪೂ ಕಾಲೇಜು ನೂಜಿಬಾಳ್ತಿಲ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.