ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

Puttur_Advt_NewsUnder_1
Puttur_Advt_NewsUnder_1

  • ನಿವ್ವಳ ಲಾಭ ರೂ.70,22,487.04, ಡಿವಿಡೆಂಟ್ ಶೇ.23 ಘೋಷಣೆ

ಪುತ್ತೂರು: ಒಳಮೊಗ್ರು ಗ್ರಾಮದ ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಆ.೩೧ ರಂದು ಕುಂಬ್ರ ನವೋದಯ ರೈತ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರರವರ ಅಧ್ಯಕ್ಷತೆಯಲ್ಲಿ ನಡೆಯಿತು. ಮೊದಲಿಗೆ ಹಿಂದಿನ ಸಾಲಿನ ಮಹಾಸಭೆಯ ನಡವಳಿಕೆಗಳನ್ನು ಪರಿಶೀಲಿಸಿ ದಾಖಲಿಸಲಾಯಿತು. ಬಳಿಕ ೨೦೧೮-೧೯ ನೇ ಸಾಲಿನ ಆಡಳಿತ ವರದಿಯನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೀವಿಯವರು ಸಭೆಯ ಮುಂದಿಟ್ಟರು. ವರ್ಷಾಂತ್ಯದಲ್ಲಿ ಸಂಘದಲ್ಲಿ ೩,೩೩೭ ಮಂದಿ ಸದಸ್ಯರಿದ್ದು ರೂ.೨,೩೫,೫೩,೯೭೪ ಪಾಲು ಬಂಡವಾಳ ಇದೆ.ವಿವಿಧ ಠೇವಣಿಗಳಾಗಿ ರೂ.೧೨,೦೩,೩೮,೧೮೩ ರೂ ಇದೆ.ವರದಿ ವರ್ಷದಲ್ಲಿ ರೂ.೨೮,೪೨,೭೬,೬೯೦ ಸಾಲ ವಿತರಿಸಲಾಗಿದ್ದು ಇದರಲ್ಲಿ ರೂ.೨೬,೫೯,೨೨,೨೬೭ ವಸೂಲಾತಿಯಾಗಿದೆ ಎಂದು ತಿಳಿಸಿದರು. ಸಾಲ ವಸೂಲಾತಿಯಲ್ಲಿ ಶೇ.೯೮ ಪ್ರಗತಿ ಸಾಧಿಸಲಾಗಿದೆ ಎಂದು ಹೇಳಿದರು. ವರದಿ ವರ್ಷದಲ್ಲಿ ಸಂಘವು ರೂ.೭೦,೨೨,೪೮೭.೦೪ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದ ಅವರು ಶೇ.೧೩ ಡಿವಿಡೆಂಟ್ ಘೋಷಿಸಲಾಗಿದೆ ಎಂದರು. ೨೦೧೯-೨೦ ನೇ ಸಾಲಿಗೆ ತಯಾರಿಸಲಾದ ಅಂದಾಜು ಬಜೆಟ್ ಅನ್ನು ಸಭೆಗೆ ಓದಿ ಹೇಳಲಾಯಿತು. ಸಂಘದ ನಿಯಮಗಳ ತಿದ್ದುಪಡಿಯ ಬಗ್ಗೆ ಅಧ್ಯಕ್ಷರು ಸಭೆಗೆ ತಿಳಿಸಿದರು.

ಸಭೆಯಲ್ಲಿ ಅಧ್ಯಕ್ಷರ ಅನುಮತಿಯಂತೆ ಕೆಲವು ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ರೈತ ಸಭಾಭವನವನ್ನು ಸಂಘದ ಕಛೇರಿ ಮಾಡುವ ಬಗ್ಗೆ ಚರ್ಚೆ ನಡೆಯಿತು. ಸಭಾಭವನ ನಿರ್ವಹಣೆಗೆ ಅಧಿಕ ಖರ್ಚು ತಗಲುತ್ತಿದ್ದು ಪ್ರಸ್ತುತ ಇರುವ ಬಾಡಿಗೆಯಲ್ಲಿ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಅಧ್ಯಕ್ಷರು ಸಭೆಗೆ ತಿಳಿಸಿದರು. ಸಭಾ ಭವನವನ್ನು ಹಾಗೆಯೇ ಉಳಿಸಿಕೊಳ್ಳಿ ಎಂದು ಸಭೆಯಿಂದ ಸಲಹೆ ಬಂದ ಹಿನ್ನೆಲೆಯಲ್ಲಿ ಸಭಾಭವನದ ಬಾಡಿಗೆ ದರವನ್ನು ಏರಿಸುವ ಬಗ್ಗೆ ಮುಂದಿನ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವುದು ಎಂದು ನಿರ್ಣಯಿಸಲಾಯಿತು. ಪೋಸ್ಟ್ ಆಫೀಸನ್ನು ಮೇಲ್ದರ್ಜೆಗೇರಿಸುವ ಬಗ್ಗೆ ಚರ್ಚೆ ನಡೆಯಿತು. ಕಛೇರಿಗೆ ಪತ್ರಿಕೆಗಳನ್ನು ನಿಲ್ಲಿಸಿರುವ ಬಗ್ಗೆ ಸದಸ್ಯರೋರ್ವರು ಪ್ರಶ್ನಿಸಿದರು. ಇದಕ್ಕೆ ಉತ್ತರ ನೀಡಿದ ಅಧ್ಯಕ್ಷರು ಮುಂದೆ ಪತ್ರಿಕೆ ತರಿಸಿಕೊಳ್ಳಲಾಗುವುದು ಎಂದು ತಿಳಿಸಿದರು. ಸಂಘದ ಕಟ್ಟಡ ವಿಸ್ತರಣೆ ಬಗ್ಗೆ ಚರ್ಚೆ ನಡೆಯಿತು.

ಡಿಸಿಸಿ ಬ್ಯಾಂಕ್ ವಲಯ ಮೇಲ್ವಿಚಾರಕ ಶರತ್ ಡಿ. ವಿವಿಧ ಮಾಹಿತಿಗಳನ್ನು ನೀಡಿದರು. ವೇದಿಕೆಯಲ್ಲಿ ನಿರ್ದೇಶಕರುಗಳಾದ ವಿನೋದ್ ಶೆಟ್ಟಿ ಎ, ಶ್ರೀನಿವಾಸ ಪ್ರಸಾದ್ ಮುಡಾಳ, ರಘುರಾಮ ಪಾಟಾಳಿ, ವಾರಿಜಾಕ್ಷಿ ಪಿ.ಶೆಟ್ಟಿ, ಉಮೇಶ್ ಗೌಡ ಕೆ, ಸಂತೋಷ್ ರೈ, ಸರ್ವಾಣಿ ವೈ ಶೆಟ್ಟಿ ಉಪಸ್ಥಿತರಿದ್ದರು. ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಹರ್ಷಿತಾ ಮತ್ತು ಶ್ವೇತಾ ಪ್ರಾರ್ಥಿಸಿದರು. ನಿರ್ದೇಶಕ ನಿತೀಶ್ ಕುಮಾರ್ ಶಾಂತಿವನ ವಂದಿಸಿದರು. ನಾರಾಯಣ ಕುಕ್ಕುಪುಣಿ ಮತ್ತು ಸುಭಾಷ್ ರೈ ಬೆಳ್ಳಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸಿಬ್ಬಂದಿಗಳಾದ ರಾಜ್‌ಪ್ರಕಾಶ್ ರೈ, ಭವಾನಿ ಬಿ.ಆರ್, ಕೆ.ಪಿ ಉದಯಶಂಕರ್, ವೀಣಾ ರೈ, ಶಾಂತ ಕುಮಾರ್, ವೆಂಕಪ್ಪ ಡಿ ಸಹಕರಿಸಿದ್ದರು.

ನೆರೆ ಸಂತ್ರಸ್ತರಿಗೆ ದೇಣಿಗೆ
ಸಂಘದ ಸದಸ್ಯರಿಗೆ ದೊರೆತ ಡಿವಿಡೆಂಟ್‌ನಲ್ಲಿ ಶೇ.೨ ಅನ್ನು ನೆರೆ ಸಂತ್ರಸ್ತರ ನಿಧಿಗೆ ಕೊಡುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು. ಈ ಹಿಂದೆಯೂ ನೆರೆ ಸಂತ್ರಸ್ತರಿಗೆ ದೇಣಿಗೆ ನೀಡಿದ್ದೇವೆ. ಈ ವರ್ಷ ಕೂಡ ಡಿಸಿಸಿ ಬ್ಯಾಂಕ್‌ನ ಸಹಯೋಗದೊಂದಿಗೆ ದೇಣಿಗೆ ನೀಡಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.