ಸೆ.8: ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮಹಾಸಭೆ

Puttur_Advt_NewsUnder_1
Puttur_Advt_NewsUnder_1

ಪೆರಾಬೆ: ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ 2018-19ನೇ ಸಾಲಿನ ಮಹಾಸಭೆ ಸೆ.8ರಂದು ಬೆಳಿಗ್ಗೆ ಆಲಂಕಾರು ಶ್ರೀ ದುರ್ಗಾಂಬಾ ಪ.ಪೂ.ವಿದ್ಯಾಲಯದ ಸಭಾಂಗಣದಲ್ಲಿ ಜರಗಲಿದೆ ಎಂದು ಸಂಘದ ಅಧ್ಯಕ್ಷ ಕೆ.ಚಂದ್ರಶೇಖರ ಆಲಂಕಾರು, ಉಪಾಧ್ಯಕ್ಷ ಎನ್.ಮುತ್ತಪ್ಪ ಪೂಜಾರಿ ನೆಯ್ಯಲ್ಗ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಲಿಂಗಪ್ಪ ಪೂಜಾರಿ ನೆಯ್ಯಲ್ಗ ಹಾಗೂ ಆಡಳಿತ ಮಂಡಳಿ ನಿರ್ದೇಶಕರು ತಿಳಿಸಿದ್ದಾರೆ.

ಪ್ರತಿವರ್ಷದಂತೆ ಈ ವರ್ಷವೂ ಮಹಾಸಭೆಯಲ್ಲಿ ಸಂಘದ ವ್ಯಾಪ್ತಿಗೆ ಬರುವ ವಿದ್ಯಾಸಂಸ್ಥೆಗಳಲ್ಲಿ ಎಸ್‌ಎಸ್‌ಎಲ್‌ಸಿ, ಪ.ಪೂ.,ಹಾಗೂ ಪದವಿ ತರಗತಿಗಳಲ್ಲಿ ಅತೀ ಹೆಚ್ಚು ಅಂಕ ಪಡೆದ ತಲಾ ಓರ್ವ ವಿದ್ಯಾರ್ಥಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು. ಎಸ್‌ಎಸ್‌ಎಲ್‌ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ರಾಮಕುಂಜೇಶ್ವರ ಆಂ.ಮಾ.ಪ್ರೌಢಶಾಲೆಯ ದೀಪಕ್ ಹೆಬ್ಬಾರ್(೬೧೨),ಅನುಶ್ರೀ ಕೆ.,(೬೧೨), ಪಿಯುಸಿ ಕಲಾ ವಿಭಾಗದಲ್ಲಿ ನೂಜಿಬಾಳ್ತಿಲ ಬೆಥನಿ ಸಂಯುಕ್ತ ಪ.ಪೂ.ಕಾಲೇಜಿನ ಇಂಡಿಕಾ(೫೪೬), ವಾಣಿಜ್ಯ ವಿಭಾಗದಲ್ಲಿ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಆಕಾಂಕ್ಷ ಹೆಚ್.(೫೮೩), ವಿಜ್ಞಾನ ವಿಭಾಗದಲ್ಲಿ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಪೂರ್ಣಾನಂದ ಹೆಚ್.,(೫೭೫), ಪದವಿಯಲ್ಲಿ ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ಕಲಾ ವಿಭಾಗದ ಅಕ್ಷಿತಾ(ಶೇ.೮೧), ಬಿಬಿಎಂನ ರಕ್ಷಾ ಕುಮಾರಿ(ಶೇ.೯೧), ವಾಣಿಜ್ಯ ವಿಭಾಗದ ಪೂರ್ಣಿಮಾ ಪಿ.,(ಶೇ.೯೧)ಹಾಗೂ ವಿಜ್ಞಾನ ವಿಭಾಗದ ಸುನೈನತ್ ಕೆ.,(ಶೇ.೮೧)ರವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು. ಸಂಘದ ಮೂಲಕ ೫೭ ಗುರುಶ್ರೀ ಸ್ವಸಹಾಯ ಸಂಘಗಳು ಕಾರ್ಯಾಚರಿಸುತ್ತಿದ್ದು ಈ ಪೈಕಿ ಅತ್ಯುತ್ತಮ ನಿರ್ವಹಣೆಯ ೧ ಸಂಘವನ್ನು ಗೌರವಿಸಲಾಗುವುದು. ಸಂಘದ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಮತ್ತು ಮೂರ್ತೆದಾರರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು. ಆಡಳಿತ ಮಂಡಳಿ ನಿರ್ದೇಶಕರ, ಸಲಹಾ ಸಮಿತಿಯವರ, ಸಿಬ್ಬಂದಿಗಳ, ಪಿಗ್ಮಿ ಸಂಗ್ರಾಹಕರ ಪ್ರಯತ್ನ ಮತ್ತು ಗ್ರಾಹಕರ ಸಹಕಾರದಿಂದ ಸಂಸ್ಥೆ ಉತ್ತಮ ರೀತಿಯಲ್ಲಿ ಪ್ರಗತಿಯಾಗುತ್ತಿದೆ. ಮಹಾಸಭೆಗೆ ದ.ಕ.ಜಿಲ್ಲಾ ಮೂರ್ತೆದಾರರ ಸಹಕಾರ ಮಹಾಮಂಡಲ ಬಿ.ಸಿ.ರೋಡ್ ಇದರ ಅಧ್ಯಕ್ಷ ಕೆ.ಸಂಜೀವ ಪೂಜಾರಿ, ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲುರವರು ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

೧೨.೬ ಲಕ್ಷ ರೂ.ನಿವ್ವಳ ಲಾಭ
ಸಂಘವು ೨೦೧೮-೧೯ನೇ ಸಾಲಿನಲ್ಲಿ ೫೫ ಕೋಟಿ ರೂ.,ವ್ಯವಹಾರ ನಡೆಸಿದ್ದು ೧೨.೬ ಲಕ್ಷ ರೂ.ನಿವ್ವಳ ಲಾಭಗಳಿಸಿದೆ. ಲಾಭಾಂಶದಲ್ಲಿ ಸದಸ್ಯರಿಗೆ ಗರಿಷ್ಠ ಮೊತ್ತದ ಡಿವಿಡೆಂಡ್ ನೀಡಲಾಗುವುದು. ವರದಿ ವರ್ಷದಲ್ಲಿ ೨೮.೩೨ ಕೋಟಿ ರೂ.ಠೇವಣಿ ಸಂಗ್ರಹಿಸಿ ೨೬.೫೫ ಕೋಟಿ ರೂ.ಠೇವಣಿ ಹಿಂತಿರುಗಿಸಿದೆ. ವರ್ಷಾಂತ್ಯದಲ್ಲಿ ೭.೪೮ ಕೋಟಿ ರೂ.ಠೇವಣಿ ಇದೆ. ವಿವಿಧ ಸಾಲ ಯೋಜನೆಯಡಿ ೧೨.೪೮ ಕೋಟಿ ರೂ.ಸಾಲ ನೀಡಿ ೧೦.೪೨ ಕೋಟಿ ರೂ.ವಸೂಲಿಯಾಗಿದೆ. ೭.೪೨ ಕೋಟಿ ರೂ.ಹೊರ ಸಾಲ ವರ್ಷಾಂತ್ಯಕ್ಕೆ ಬಾಕಿ ಇದೆ. ಸಂಘದಲ್ಲಿ ೯೧೯ ಎ ತರಗತಿ ಸದಸ್ಯರಿದ್ದು ೧೧.೮೫ ಲಕ್ಷ ರೂ.ಪಾಲು ಬಂಡವಾಳವಿದೆ. ರೂ.೫೫ ಲಕ್ಷ ವಿವಿಧ ನಿಧಿಗಳಲ್ಲಿ ಹೂಡಿಕೆಯಾಗಿದೆ. ಶೇ.೯೮ರಷ್ಟು ಸಾಲ ವಸೂಲಾತಿ ಮಾಡಿ ಲೆಕ್ಕ ಪರಿಶೋಧನೆಯಲ್ಲಿ ಸತತ ೬ ವರ್ಷಗಳಿಂದ ಎ ಶ್ರೇಣಿ ಪಡೆದುಕೊಂಡಿದೆ. ಸಂಘವು ಕಡಬ ತಾಲೂಕಿನ ಕೊಯಿಲದಿಂದ ನೆಟ್ಟಣದ ತನಕದ ೧೫ ಗ್ರಾಮಗಳ ವ್ಯಾಪ್ತಿ ಹೊಂದಿದ್ದು ಆಲಂಕಾರಿನಲ್ಲಿ ‘ಬೈದಶ್ರೀ ಸಹಕಾರ ಸೌಧ’ಎಂಬ ಎರಡಂತಸ್ತಿನ ಸ್ವಂತ ಕಟ್ಟಡದಲ್ಲಿ ಪ್ರಧಾನ ಕಚೇರಿ ಇದೆ. ಕಡಬ, ಕಲ್ಲುಗುಡ್ಡೆ(ನೂಜಿಬಾಳ್ತಿಲ), ನೆಟ್ಟಣದಲ್ಲಿ ಶಾಖೆ ಹೊಂದಿದೆ. ಆಲಂಕಾರು ಪ್ರಧಾನ ಕಚೇರಿಯಲ್ಲಿ ಭದ್ರತಾ ಕೋಶ, ಠಸೆ ಪೇಪರಿನ ವ್ಯವಸ್ಥೆ, ಕಡಬ ಶಾಖೆಯಲ್ಲಿ ಠಸೆ ಪೇಪರಿನ ವ್ಯವಸ್ಥೆ ಇದೆ ಎಂದು ಚಂದ್ರಶೇಖರ ಆಲಂಕಾರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.