ಸಾಲೆತ್ತೂರು ಹಿ.ಪ್ರಾ.ಶಾಲೆಯಲ್ಲಿ 25ನೇ ವರುಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

ಸಾಮಾಜಿಕ ಚಟುವಟಿಕೆಗಳ ಮೂಲಕ ಗಣೇಶೋತ್ಸವವ ಆಚರಣೆ: ಮಾಧವ ಮಾವೆ

ವಿಟ್ಲ : ಕೊಳ್ನಾಡು-ಸಾಲೆತ್ತೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 25ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸಾಲೆತ್ತೂರು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಸೆ.2ರಿಂದ ಸೆ.4ರ ವರೆಗೆ ನಡೆಯಲಿದೆ ಎಂದು ಸಮಿತಿ ಗೌರವಾಧ್ಯಕ್ಷ ಮಾಧವ ಮಾವೆ ತಿಳಿಸಿದರು.

ಅವರು ಆ.31ರಂದು ವಿಟ್ಲ ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಸಮಿತಿಯು ಗಣೇಶೋತ್ಸವ ಸಂಭ್ರಮಾಚರಣೆಯ ಜತೆ ಅನೇಕ ಸಾಮಾಜಿಕ ಚಟುವಟಿಕೆಗಳನ್ನು ಮಾಡಿದೆ. ಬಡ ಮಹಿಳೆಯೋರ್ವರ ಮನೆ ನಿರ್ಮಾಣಕ್ಕೆ 25 ಸಾವಿರ ರೂ.ಗಳನ್ನು ನೀಡಿದರೆ ಇತ್ತೀಚೆಗೆ ನಾಲ್ಕು ಮಂದಿ ಫಲಾನುಭವಿಗಳಿಗೆ ತಲಾ 10 ಸಾವಿರ ರೂ.ಗಳನ್ನು ಉದಾರವಾಗಿ ನೀಡಿದೆ. ಹಾಗೂ ಈ ಬಾರಿ ಬೆಳ್ಳಿಹಬ್ಬದ ಅಂಗವಾಗಿ ಗಣೇಶನಿಗೆ ಬಂಗಾರ ಮತ್ತು ಬೆಳ್ಳಿಯ ಆಭರಣ ಸಮರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.

ಸೆ.2ರಂದು ಬೆಳಗ್ಗೆ ಗಂಟೆ 8ಕ್ಕೆ ಗಣಪತಿ ಹವನ, 9:30ಕ್ಕೆ ವಿಗ್ರಹ ಪ್ರತಿಷ್ಠೆ, ಆಭರಣ ಸಮರ್ಪಣೆ, ಭಜನೆ, ಅಪ್ಪ ಸೇವೆ, ಲಡ್ಡು ಸೇವೆ, ವಿಶೇಷ ಮೂಡೆ ಸೇವೆ ಸಮರ್ಪಣೆ ನಡೆಯಲಿದೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ ಗಂಟೆ 6:30ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾತ್ವೀ ಶ್ರೀ ಮಾತಾನಂದಮಯೀ ಅವರು ಆಶೀರ್ವಚನ ನೀಡಲಿದ್ದಾರೆ. ವಿಹಿಂಪ ಮಾತೃಶಕ್ತಿ ಅಧ್ಯಕ್ಷೆ ಮೀರಾ ಆಳ್ವ ಪ್ರಮುಖ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಚಂದ್ರಾವತಿ ಮೇಗಿನಮಲಾರು, ಮಂಜುಳಾ ಮಾಧವ ಮಾವೆ, ರೇಖಾ ಜೆ.ಶೆಟ್ಟಿ ಪುಡ್ಕೆತ್ತೂರು, ರಮಾ .ಎಸ್.ಭಂಡಾರಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.

ಸೆ.3ರಂದು ಗಣಪತಿ ಹೋಮ, ಭಜನೆ, ಕುಣಿತ ಭಜನೆ, ಮಹಾಪೂಜೆ, ಗಂಟೆ 6:30ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಆಶೀರ್ವಚನ ನೀಡಲಿದ್ದಾರೆ. ಹಿರಣ್ಯ ವೆಂಕಟೇಶ್ವರ ಭಟ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ.ಶ್ರೀಧರ ಭಟ್ ಮಾವೆ, ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಮಹಾಬಲ ಶೆಟ್ಟಿ ಮಲಾರಬೀಡು ಮತ್ತಿತರರು ಭಾಗವಹಿಸಲಿದ್ದಾರೆ. ಜಯಂತಿ ಎಸ್.ಪೂಜಾರಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರನ್ನು ಸಮ್ಮಾನಿಸಲಾಗುವುದು.

ಸೆ.4ರಂದು ಭಜನೆ, ಯಕ್ಷಗಾನ, ಮಹಾಪೂಜೆ, ಸಂಜೆ ಗಂಟೆ 6ಕ್ಕೆ ಶ್ರೀ ದೇವರ ಭವ್ಯ ಶೋಭಾಯಾತ್ರೆ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಉದಯ ಕುಮಾರ್ ರೈ ಅಗರಿ ಮತ್ತು ಮಾಜಿ ಅಧ್ಯಕ್ಷ ಅಮರೇಶ ಶೆಟ್ಟಿ ತಿರುವಾಜೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.