HomePage_Banner
HomePage_Banner
HomePage_Banner
HomePage_Banner

ಕೌಡಿಚ್ಚಾರ್ ಮಡ್ಯಂಗಲದಲ್ಲಿ ಕೆರೆಗೆ ಬಿದ್ದ ಕಾರು – ಮಡಿಕೇರಿ ಶುಂಠಿಗೊಪ್ಪದ ಒಂದೇ ಕುಟುಂಬದ ನಾಲ್ವರು ಮೃತ್ಯು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಕೌಡಿಚ್ಚಾರ್ ಸಮೀಪದ ಮಡ್ಯಂಗಲ ಎಂಬಲ್ಲಿ ರಸ್ತೆ ಬದಿಯಲ್ಲಿರುವ ಕೆರೆಯೊಂದಕ್ಕೆ ಮಾರುತಿ ಆಲ್ಟೋ ಕಾರು(ಕೆ.ಎ.05 ಎಮ್‌ಎರ್ಫ 9794) ಬಿದ್ದು ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿರುವ ಹೃದಯವಿದ್ರಾಹಕ ಘಟನೆ ಸೆ.2ರಂದು ನಸುಕಿನ ವೇಳೆ ಬೆಳಕಿಗೆ ಬಂದಿದೆ.

ಮಡಿಕೇರಿ ಸೋಮವಾರಪೇಟೆ ಶುಂಠಿಗೊಪ್ಪ ಪಂಪ್ ಹೌಸ್ ನಿವಾಸಿ ಅಶೋಕ್, ಪತ್ನಿ ಹೇಮಲತಾ, ಪುತ್ರ ಯಶಸ್, ಪುತ್ರಿ ವರ್ಷಾ ಮೃತಪಟ್ಟವರು. ಇವರು ಕಾರಿನೊಳಗಿದ್ದು, ಕಾರು ಕೆರೆಯಲ್ಲಿ ಮುಳುಗಿ ಕೆಸರಿನಲ್ಲಿ ಹೂತು ಹೋದ ಪರಿಣಾಮ ಕಾರಿನಿಂದ ಹೊರಬರಲಾರದೆ ಒಂದೇ ಕುಟುಂಬದ ನಾಲ್ವರು ಅಸುನೀಗಿದ್ದಾರೆ. ಕಾರು ಯಾವ ಕಡೆಯಿಂದ ಬಂದು ಕೆರೆಗೆ ಬಿದಿದ್ದೆ ಎಂದು ಇನ್ನಷ್ಟೆ ತಿಳಿದು ಬರಬೇಕಾಗಿದೆ. 

ಘಟನಾ ಸ್ಥಳಕ್ಕೆ ಸಂಪ್ಯ ಪೊಲೀಸರು ಮತ್ತು ಅಗ್ನಿಶಾಮಕದಳದವರು ತೆರಳಿ ಕಾರಿನೊಳಗಿದ್ದ ನಾಲ್ವರ ಮೃತ ದೇಹವನ್ನು ಮೇಲಕ್ಕೆ ತಂದು ಬಳಿಕ ಕಾರನ್ನು ಕ್ರೈನ್ ಮೂಲಕ ಮೇಲಕ್ಕೆತ್ತಿ ಮೃತ ದೇಹವನ್ನು ಹೊರ ತೆಗೆಯಲಾಗಿದೆ. ನಾಲ್ವರ ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವಗಾರ ಕೊಠಡಿಯಲ್ಲಿ ಇರಿಸಲಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.