HomePage_Banner
HomePage_Banner
HomePage_Banner
HomePage_Banner

ಬೆಳ್ಳಂಬೆಳಗ್ಗೆ ನಾಲ್ವರನ್ನು ಬಲಿ ಪಡೆದುಕೊಂಡ ಕೌಡಿಚ್ಚಾರ್ ಮಡ್ಯಂಗಲ ಅಪಾಯಕಾರಿ ಕೆರೆ…!

Puttur_Advt_NewsUnder_1
Puttur_Advt_NewsUnder_1
 • ಹಾಸ್ಟೆಲ್‌ನಲ್ಲಿರುವ ಪುತ್ರಿಯನ್ನು ಕಾಣಲು ಹೋಗುತ್ತಿದ್ದ ವೇಳೆ ನಡೆದ ಅವಘಡ
 • ಅಂಚೆ ಇಲಾಖಾ ಸಿಬ್ಬಂದಿ ಅಶೋಕ್, ಪತ್ನಿ ಹೇಮಲತಾ, ಪುತ್ರ ಕಿರಣ್, ಪುತ್ರಿ ವರ್ಷಾ ಮೃತ ದುರ್ದೈವಿಗಳು

ಪುತ್ತೂರು: ಮೈಸೂರು-ಮಾಣಿ ಹೆದ್ದಾರಿ ನಡುವಿನ ಸಂಪ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕೌಡಿಚ್ಚಾರ್ ಸಮೀಪದ ಮಡ್ಯಂಗಲ ಎಂಬಲ್ಲಿ ರಸ್ತೆ ಬದಿಯ ಕೆರೆಗೆ ಕಾರು ಬಿದ್ದು ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲಿಯೇ ಅಸು ನೀಗಿರುವ ಧಾರುಣ ಘಟನೆ ನಡೆದಿದ್ದು ಮೃತರನ್ನು ಶುಂಟಿಕೊಪ್ಪ ನಿವಾಸಿ ಅಂಚೆ ಇಲಾಖಾ ಸಿಬ್ಬಂದಿ ನಿಡ್ಯಮಲೆ ಅಶೋಕ್ ಮತ್ತು ಅವರ ಪತ್ನಿ ಅತ್ತೂರು ನಲ್ಲೂರು ಶಾಲೆಯ ಶಿಕ್ಷಕಿ ಹೇಮಲತಾ ಮಕ್ಕಳಾದ ವರ್ಷ ಹಾಗೂ ಕಿರಣ್ ಮೃತ ದುರ್ದೈವಿಗಳಾಗಿದ್ದಾರೆ. ಅಶೋಕ್‌ರವರ ಹಿರಿಯ ಪುತ್ರಿ ಮೂಡುಬಿದಿರೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು ಅವಳನ್ನು ನೋಡಲೆಂದು ಇಂದು ಮುಂಜಾನೆ 4.30ರ ಸಮಯದಲ್ಲಿ ಮಾರುತಿ ಆಲ್ಟೊ ಕಾರಿನಲ್ಲಿ (ಕೆಎ೦5ಎಂಎಫ್9794) ಮೂಡುಬಿದಿರೆಗೆ ಪ್ರಯಾಣ ಬೆಳೆಸಿದ್ದಾರೆ. ಮಾರ್ಗಮಧ್ಯದ ಕೌಡಿಚ್ಚಾಡ್ ಸಮೀಪದ ಮಡ್ಯಂಗಲ ಎಂಬಲ್ಲಿ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ಬದಿಯ ಕೆರೆಗೆ ಉರುಳಿ ಬಿದ್ದಿದೆ. ಕೆರೆಯಲ್ಲಿ ಸಾಕಷ್ಟು ನೀರು ಇದ್ದ ಪರಿಣಾಮ ಕಾರು ನೀರಿನಲ್ಲಿ ಮುಳುಗಿದ್ದು ಕಾರಿನಿಂದ ಹೊರ ಬರಲಾಗದೆ ನಾಲ್ವರು ಕೂಡಾ ಬಲಿಯಾಗಿದ್ದಾರೆ. ವಿಷಯ ವರಿತು ಪೊಲೀಸರು ಮತ್ತು ಅಗ್ನಿಶಾಮಕ ದಳದಿಂದ ಕಾರನ್ನು ಮತ್ತು ನಾಲ್ವರ ಮೃತದೇಹವನ್ನು ಮೇಲಕ್ಕೆ ತರಲಾಯಿತು. ಪುತ್ತೂರು ಆಸ್ಪತ್ರೆಯಲ್ಲಿ ಮೃತರ ದೇಹಗಳನ್ನು ಇರಿಸಲಾಗಿದೆ.

ಗಮನಕ್ಕೆ ಬಾರದ ಅಪಾಯಕಾರಿ ಕೆರೆ:
ರಸ್ತೆಗೆ ತಾಗಿಕೊಂಡಿರುವ ಕೆರೆಯ ಬಗ್ಗೆ ತಕ್ಷಣಕ್ಕೆ ಗಮನಕ್ಕೆ ಬಾರದ ಹಿನ್ನೆಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಕೆರೆಗೆ ಉರುಳಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಕಾರು ಕೆರೆಗೆ ಬಿದ್ದ ಶಬ್ದವನ್ನು ಕೇಳಿದ ಸಮೀಪದ ಮನೆಯ ಭುಜಂಗಯ್ಯ ಶೆಟ್ಟ ಬಂದು ನೋಡಿದಾಗ ರಸ್ತೆ ಬದಿಯ ವಾಹನದ ಚಕ್ರ ಹೋಗಿರುವ ಅಚ್ಚು ಕಂಡು ಬಂದಿದೆ. ಆದರೂ ವಾಹನವೊಂದು ಬಿದ್ದಿರಬಹುದು ಎಂಬ ಸಂಶಯದಿಂದ ಅವರು ಸಂಪ್ಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬಂದಿಗಳು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿ ಕಾರು ಬಿದ್ದಿರುವುದನ್ನು ಪತ್ತೆಮಾಡಿದ್ದಾರೆ. ಅಗ್ನಿ ಶಾಮಕ ದಳದವರು ಏಣಿಯ ಮೂಲಕ ಕೆರೆ ಇಳಿದು ಮೃತ ದೇಹವನ್ನು ಹೊರಕ್ಕೆ ತೆಗೆಯಲಾಗಿದೆ. ಕಾರನ್ನು ಕ್ರೇನ್ ಮೂಲಕ ಮೇಲಕ್ಕೆ ತೆಗೆಯಲಾಯಿತು. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ನಗರ ಠಾಣಾ ಇನ್ಸ್‌ಪೆಕ್ಟರ್ ತಿಮ್ಮಪ್ಪ ನಾಯ್ಕ, ಸಂಪ್ಯ ಠಾಣಾ ಎಸ್‌ಐ ಸಕ್ತಿವೇಲು ನೇತೃತ್ವದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಘಟನೆಯ ಕುರಿತು ಪರಿಶೀಲನೆ ನಡೆಸಿದ್ದಾರೆ. ಜಿ.ಪಂ ಆರೋಗ್ಯ ಮತ್ತಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ, ಕಾಂಗ್ರೆಸ್ ಮುಖಂಡ ಹೇಮನಾಥ ಶೆಟ್ಟಿ ಕಾವು, ಅರಿಯಡ್ಕ ಗ್ರಾ.ಪಂ ಸದಸ್ಯೆ ಪ್ರೇಮಲತಾ, ಎಸ್‌ಡಿಪಿಐ ಮುಖಂಡ ಜಾಬೀರ್ ಅರಿಯಡ್ಕ ಸೇರಿದಂತೆ ನೂರಾರು ಮಂದಿ ಸ್ಥಳಕ್ಕೆ ಭೇಟಿ ನೀಡಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

 1. Abhishek Bellipady

  ಹೈ ವೇ ಪಕ್ಕದಲ್ಲಿರುವ ಎಲ್ಲ ಕೆರೆ ಬಾವಿಗಳನ್ನು ಮುಚ್ಚಿರಿ ಸ್ವಾಮಿ.
  ರೋಡ್ ಪಕ್ಕದಲ್ಲಿರುವ ಬಡವರ ಗೂಡಂಗಡಿಗಳನ್ನು ಬಲವಂತದಿಂದ ಮುಚ್ಚುತ್ತೀರಿ😢 ಇಂತಹ ಇನ್ನು ಹಲವಾರು ಸಾವಿಗೆ ಆಹ್ವಾನಿಸುತ್ತಿರುವ ಕೆರೆಗಳಿವೆ ರಸ್ತೆ ಪಕ್ಕದಲ್ಲಿ… ಸರಕಾರ ಯಾರು ಬಂದರು ಮುಚ್ಚೋದಿಲ್ಲ ಬಿಡಿ…
  ವಾಹನ ಸವಾರರು ಎಚ್ಚರ ವಹಿಸಿ 🙏🏼

  Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.