HomePage_Banner
HomePage_Banner
HomePage_Banner

ಸವಣೂರು ವಿನಾಯಕ ಸಭಾಭವನದಲ್ಲಿ 37ನೇ ವರ್ಷದ ಶ್ರೀ ಗಣೇಶೋತ್ಸವ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸವಣೂರು ಇವರ ಆಶ್ರಯದಲ್ಲಿ 37ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ. 2 ರಂದು ಸವಣೂರು ವಿನಾಯಕ ಸಭಾಭವನದಲ್ಲಿ ನಡೆಯಿತು. ಅರ್ಚಕ ಅನಂತರಾಮ ಉಪಾಧ್ಯಯರವರ ನೇತೃತ್ವದಲ್ಲಿ ಗಣೇಶ ಬಿಂಬ ಪ್ರತಿಷ್ಠಾಪಣೆ , 12 ತೆಂಗಿನಕಾಯಿ ಗಣಹೋಮ ಜರಗಿತು. ಭಜನೆ, ಭಕ್ತಿಗೀತೆ, ವಿವಿಧ ಸ್ವರ್ಧೆಗಳು, ಸಾಂಸ್ಕೃತಿಕ ಕಾರ್‍ಯಕ್ರಮ, ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು.

 

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಸವಣೂರು ಕೆ.ಸೀತಾರಾಮ ರೈರವರು ಧ್ವಜಾರೋಹಣಗೈದರು. ಅಧ್ಯಕ್ಷ ಶಿವರಾಮ ಗೌಡ ಮೆದು, ಉಪಾಧ್ಯಕ್ಷ ರಾಘವ ಗೌಡ ಸವಣೂರು, ಕಾರ್ಯದರ್ಶಿ ಸುಧಾಕರ್ ರೈ ದೇವಶ್ಯ, ಜೊತೆ ಕಾರ್‍ಯದರ್ಶಿ ಪ್ರಭಾಕರ್ ಶೆಟ್ಟಿ ನಡುಬೈಲು, ಕೋಶಾಧಿಕಾರಿ ರಾಮಕೃಷ್ಣ ಪ್ರಭು ಸವಣೂರು, ಸದಸ್ಯರುಗಳಾದ ಸವಣೂರು ಎನ್. ಸುಂದರ ರೈ. ರಾಜರಾಮ್ ಪ್ರಭು ಆಶ್ವಿನಿ ಫಾರ್ಮ್ಸ್,ಪ್ರಮೋದ್ ಕೆ.ಆರ್. ಕೋಡಿಬೈಲು, ವೆಂಕಪ್ಪ ಶೆಟ್ಟಿ ನಡುಬೈಲು, ನಾರಾಯಣ ಕನಡ ಚಂದ್ರಪುರ, ಚಂದಪ್ಪ ಪೂಜಾರಿ ಊರುಸಾಗು, ಸುದರ್ಶನ್ ನಾಕ್ ಕಂಪ, ಚಂದ್ರಶೇಖರ್ ಸಿ.ಎ.ಬ್ಯಾಂಕ್ ಸವಣೂರು, ಸಂಜೀವ ಪೂಜಾರಿ ಅಗರಿ, ಕುಸುಮ ಪಿ.ಶೆಟ್ಟಿ ಕೆರೆಕೋಡಿ, ವಿಜಯ ಈಶ್ವರ ಗೌಡ ಕಾಯರ್ಗ, ತಾರಾನಾಥ ಸವಣೂರು, ವಾಸುದೇವ ಇಡ್ಯಾಡಿ, ಶಾರದಾ ಮಾಲೆತ್ತಾರು, ಬಾಲಚಂದ್ರ ರೈ ಕೆರೆಕೋಡಿ, ಸುರೇಶ್ ಸರ್ವೆ, ಗಂಗಾಧರ್ ಸುಣ್ಣಾಜೆ, ವೆಂಕಪ್ಪ ಗೌಡ ಅಡೀಲು, ಗಂಗಾಧರ್ ಪೆರಿಯಡ್ಕ, ಬೆಳಿಯಪ್ಪ ಗೌಡ ಚೌಕಿಮಠ ಹಾಗೂ ಊರವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.