ಕುಟ್ರುಪ್ಪಾಡಿ ನಿವಾಸಿ ಸತ್ಯನ್ ಹೃದಯಾಘಾತದಿಂದ ನಿಧನ

Puttur_Advt_NewsUnder_1
Puttur_Advt_NewsUnder_1

ಕಡಬ: ಕುಟ್ರುಪ್ಪಾಡಿ ಗ್ರಾಮದ ಕುಂಟಿನಡ್ಕ ನಿವಾಸಿ, ಕೃಷಿಕ ಸತ್ಯನ್(55 ವ.)ರವರು ಆ.31ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಆ.31ರ ಮಧ್ಯಾಹ್ನದ ವೇಳೆಗೆ ಸತ್ಯನ್‌ರವರಿಗೆ ಕೈಕಾಲು ಬಲಹೀನಗೊಂಡು ಎದೆನೋವು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಮನೆಯವರು ತಕ್ಷಣ ಅವರನ್ನು ಕಡಬ ಸಮುದಾಯ ಆಸ್ಪತ್ರೆಗೆ ಕರೆತಂದರಾದರೂ ಆ ವೇಳೆಗೆ ಸತ್ಯನ್‌ರವರು ಮೃತಪಟ್ಟಿರುವುದಾಗಿ ವರದಿಯಾಗಿದೆ. 25 ದಿನದ ಹಿಂದೆ ಸತ್ಯನ್‌ರವರ ಸಹೋದರ ವಿಕ್ರಮ್‌ರವರು ಹೃದಯಾಘಾತದಿಂದ ನಿಧನರಾಗಿದ್ದು ಇದರಿಂದ ಅವರು ತೀವ್ರ ಮನನೊಂದಿದ್ದರು. ಅಲ್ಲದೇ ಮನೆ ಪಕ್ಕದಲ್ಲೇ ಸತ್ಯನ್‌ರವರು ಕೋಳಿಫಾರ್ಮ್ ಸಹ ಪ್ರಾರಂಭಿಸಿದ್ದು ಇದಕ್ಕೆ ಸಾಲ ಪಡೆಯಲು ಪ್ರಯತ್ನಿಸಿದ್ದರೂ ಸಿಗಲಿಲ್ಲ. ಇದರಿಂದ ನೊಂದುಕೊಂಡಿದ್ದ ಅವರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ ಎಂದು ಮೃತರ ಮಗ ಸನಿಲ್‌ರವರು ತಿಳಿಸಿದ್ದಾರೆ. ಮೃತರು ಪತ್ನಿ ಲೀಲಾ, ಮಕ್ಕಳಾದ ಸೌಮ್ಯ, ಸನಿಲ್, ಸಂದೀಪ್, ಸಂಧ್ಯಾ, ಶಾಲಿನಿ, ಸಚಿನ್, ಹರೀಶ್, ವಿನಯರನ್ನು ಅಗಲಿದ್ದಾರೆ. ಮೃತರ ಮನೆಗೆ ಹಲವು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.