HomePage_Banner
HomePage_Banner
HomePage_Banner
HomePage_Banner

ಅರಿಯಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವದ ಬೆಳ್ಳಿಹಬ್ಬ – ಶೋಭಾಯಾತ್ರೆ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಅರಿಯಡ್ಕ ಕೌಡಿಚ್ಚಾರು ಸಾರ್ವಜನಿಕ ಶ್ರೀ ಗಣೇಶೋತ್ಸವದ ಬೆಳ್ಳಿಹಬ್ಬ 2ನೇ ದಿನವಾದ ಸೆ.3ರಂದು ಕಾರ್ಯಕ್ರಮದಲ್ಲಿ ಶ್ರೀಧಾಮ ಮಾಣಿಲ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು.

ಶ್ರೀ ಕ್ಷೇತ್ರ ಹನುಮಗಿರಿ ಈಶ್ವರಮಂಗಲದ ಧರ್ಮದರ್ಶಿ ನನ್ಯ ಅಚ್ಚುತ ಮೂಡತ್ತಾಯರವರು ಧಾರ್ಮಿಕ ಉಪನ್ಯಾಸ ನೀಡಿದರು. ಶಾಸಕ ಸಂಜೀವ ಮಠಂದೂರು, ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಅಯ್ಯಪ್ಪ ಭಜನಾ ಮಂದಿರ ಪೆರಿಗೇರಿ ಇದರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ ಗೌಡ ಕನ್ನಯ, ಸಮಿತಿಯ ಅಧ್ಯಕ್ಷ ಶಿವಪ್ರಕಾಶ್ ಗೌಡ ಕೌಡಿಚ್ಚಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸರಕಾರಿ ಪ್ರೌಢಶಾಲೆ ಪಾಪೆಮಜಲು ಇಲ್ಲಿಯ ವಿದ್ಯಾರ್ಥಿಗಳು ಶಿಕ್ಷಕ ಪ್ರಕಾಶ್ ಮೂಡಿತ್ತಾಯ ನಿರ್ದೇಶನದಲ್ಲಿ ಕುಣಿತ ಭಜನೆ ಮತ್ತು ಯೋಗ ಗುಚ್ಛ ಪ್ರದರ್ಶನ, ವಿಧಾತ್ರೀ ಕಲಾವಿದೆರ್ ಕೈಕಂಬ ಕುಡ್ಲ ಇವರಿಂದ `ಕುಸಲ್ ಬೊಡ್ಚಿ’ ಹಾಸ್ಯಮಯ ನಾಟಕ ಜರಗಿತು.

ಗಣೇಶನ ವಿಗ್ರಹಕ್ಕೆ ಪಾಶಾಂಕುಶ ಮತ್ತು ಕಿರೀಟಕ್ಕೆ ಬೆಳ್ಳಿಯನ್ನು ಕೊಡುಗೆಯಾಗಿ ನೀಡಿ ರುವ ವಿಜಯ ಬ್ಯಾಂಕ್ ಇದರ ನಿವೃತ್ತ ಮೆನೇಜರ್ ಮಾಣುರು ದೇವದಾಸ ಕಾಮತ್ ರವನ್ನು, ಗಣೇಶ ಸಮಿತಿಯ ವತಿಯಿಂದ ಶಾಲು ಫಲಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಸುದ್ದಿ ದಿನ ಪತ್ರಿಕೆಯ ವರದಿಗಾರ ಅಂಕಣಗಾರ ಯೂಸುಫ್ ರೆಂಜಲಾಡಿರವರನ್ನು ಸಮಿತಿಯ ವತಿಯಿಂದ ಗೌರವಿಸಲಾಯಿತು.

ಶೋಭಾಯಾತ್ರೆ: ಸೆ.4ರಂದು ಬೆಳಿಗ್ಗೆ ಗಣಪತಿ ಹೋಮ, ಶ್ರೀಕೃಷ್ಣ ಭಜನಾ ಮಂಡಳಿಯಿಂದ ಭಜನೆ, ವಿವೇಕಾನಂದ ಯುವಕ ವೃಂದ ಕೌಡಿಚ್ಚಾರು ಇದರ ಪ್ರಾಯೋಜಕತ್ವದಲ್ಲಿ ಸುಳ್ಯ ಅಣ್ಣಪ್ಪ ಸ್ವಾಮಿ ಸೇವಾ ಸಂಘದ ವಿಜೇತ್ ಸುಳ್ಯ ಬಳಗದಿಂದ ಕೊಳಲು ವಾದನ ಮತ್ತು ಸುಗಮ ಸಂಗೀತ ನಡೆಯಿತು. ಸಂಜೆ ನಿತಿನ್ ಕುಂಡಾಪು, ಹುಕ್ರಪ್ಪ ಕೌಡಿಚ್ಚಾರು, ರಿತೇಶ್ ಕೌಡಿಚ್ಚಾರು ಮತ್ತು ಬೃಜೇಶ್ ಎ.ಸಿ. ಅಲಸಂಡೆಮಜಲು ಪ್ರಾಯೋಜಕತ್ವದಲ್ಲಿ ಸಿಡಿಮದ್ದು ಪ್ರದರ್ಶನ, ಭಜನಾ ಸೇವೆ, ಡಿಜೆ ಮೂಲಕ ಶೋಭಾಯಾತ್ರೆ ನಡೆದು ಪೆರಿಗೇರಿ ಅಯ್ಯಪ್ಪ ಭಜನಾ ಮಂದಿರದಲ್ಲಿ ಪೂಜೆ ನಡೆದು ಪೆರಿಗೇರಿ ಕ್ಷೀರ ಹೊಳೆಯಲ್ಲಿ ವಿಸರ್ಜನೆಗೊಂಡಿತು. ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿ ಸದಸ್ಯರು, ಪೆರಿಗೇರಿ ಅಯ್ಯಪ್ಪ ಭಜನಾ ಮಂಡಳಿ ಪದಾಧಿಕಾರಿಗಳು, ಶ್ರೀಕೃಷ್ಣ ಭಜನಾ ಮಂದಿರದ ಭಜಕರು, ವಿವೇಕಾನಂದ ಯುವಕ ವೃಂದದ ಪದಾಧಿಕಾರಿಗಳು, ಎ ಫ್ರೆಂಡ್ಸ್‌ಕ್ಲಬ್ ಸದಸ್ಯರು, ಸಂಘ ಪರಿವಾರದ ಸದಸ್ಯರು, ಹಿಂದೂ ಜಾಗರಣ ವೇದಿಕೆ ಸದಸ್ಯರುಗಳು ಭಾಗವಹಿಸಿದ್ದರು. ಹೊಸಗದ್ದೆ ನಿವಾಸಿಗಳಿಂದ ಪಾನೀಯ ವ್ಯವಸ್ಥೆ ಮಾಡಲಾಗಿತ್ತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.