HomePage_Banner
HomePage_Banner
HomePage_Banner
HomePage_Banner

ಕುಂತೂರು: ಸಾರ್ವಜನಿಕ ಗಣೇಶೋತ್ಸವ

Puttur_Advt_NewsUnder_1
Puttur_Advt_NewsUnder_1

ಪೆರಾಬೆ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕುಂತೂರು, ಶ್ರೀ ಶಾರದಾ ಭಜನಾ ಮಂಡಳಿ ಕುಂತೂರು ಹಾಗೂ ಹಿಂದೂ ಜಾಗರಣಾ ವೇದಿಕೆ ಕುಂತೂರು-ಪೆರಾಬೆ ಇವರ ಆಶ್ರಯದಲ್ಲಿ 15ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕುಂತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ಸೆ.2ರಂದು ಜರಗಿತು.
ಬೆಳಿಗ್ಗೆ ಗಣಪತಿ ವಿಗ್ರಹ ಪ್ರತಿಷ್ಠೆ ನಂತರ ಕದಿರು ಕಟ್ಟುವ ಕಾರ್ಯಕ್ರಮ, ಗಣಪತಿ ಹೋಮ ನಡೆಯಿತು. ಓಂಕಾರ ಅಖಿಲೇಶ್ವರ ಭಜನಾ ಮಂಡಳಿ ಪೊಳಲಿ ಇವರಿಂದ ಭಜನಾ ಕಾರ್‍ಯಕ್ರಮ ನಡೆಯಿತು. ಮಧ್ಯಾಹ್ನ ಗಣಪತಿ ದೇವರಿಗೆ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಧಾರ್ಮಿಕ ಸಭೆ:
ಆಲಂಕಾರು ಜೇಸಿಐ ಅಧ್ಯಕ್ಷೆ ಹೇಮಲತಾ ಪ್ರದೀಪ್‌ರವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಿತು. ನಿವೃತ್ತ ಅಂಚೆ ಪಾಲಕ ಕೆ.ಸುಂದರ ಗೌಡರವರು ಧಾರ್ಮಿಕ ಪ್ರವಚನ ನೀಡಿದರು. ಅಂಚೆ ಇಲಾಖೆ ಕುಂತೂರು ಶಾಖೆಯಲ್ಲಿ 38ವರ್ಷ ಅಂಚೆ ವಿತರಕರಾಗಿ ಕರ್ತವ್ಯ ನಿರ್ವಹಿಸಿ ಪದೋನ್ನತಿ ಹೊಂದಿ ನೆಲ್ಯಾಡಿ ಅಂಚೆ ಕಚೇರಿಗೆ ವರ್ಗಾವಣೆಗೊಂಡಿರುವ ಬಾಲಕೃಷ್ಣ ಪೂಜಾರಿ ಸಾರಕರೆ ಹಾಗೂ ಭಾರತೀಯ ಸೇನೆಯಲ್ಲಿ 12 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಶಾಂತರಾಮ ಗೌಡ ಪಾಪೆಮಜಲುರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಶ್ರೀ ಶಾರದಾ ಭಜನಾ ಮಂಡಳಿ ಅಧ್ಯಕ್ಷ ನಾಗಪ್ಪ ಗೌಡ ಪಾಲೆಚ್ಚಾರ್, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಗುರುರಾಜ್ ಕೇವಳ, ಕುಂತೂರು-ಪೆರಾಬೆ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಚಂದ್ರಶೇಖರ ಪೂಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಗುರುರಾಜ ರೈ ಕೇವಳ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ರಾಮರಾಜ್ ಪಾಲೆಚ್ಚಾರ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಪೂರ್ಣಿಮ, ದೀಪಕ್ ಪಾಲೆಚ್ಚಾರ್, ರಾಜೇಶ್ ಪೂಂಜ, ದಯಾನಂದ ಹಳೆಮನೆ ಅತಿಥಿಗಳಿಗೆ ಹೂಗುಚ್ಚ ನೀಡಿದರು. ಪ್ರವೀಣ ಆಳ್ವ ನೂಜಿಲ ಕಾರ್ಯಕ್ರಮ ನಿರೂಪಿಸಿದರು. ಕುಂತೂರು ಶ್ರೀ ಶಾರದಾ ಶಿಶು ಮಂದಿರದ ಪುಟಾಣಿಗಳು ಪ್ರಾರ್ಥಿಸಿದರು. ಜಿ.ಪಂ.ಸದಸ್ಯೆ ಆಶಾ ತಿಮ್ಮಪ್ಪ, ನಿವೃತ್ತ ಶಿಕ್ಷಕ ನಾಗಪ್ಪ ಗೌಡ ಮರುವಂತಿಲ, ಪೆರಾಬೆ ಗ್ರಾ.ಪಂ.ಅಧ್ಯಕ್ಷೆ ಸುಗುಣ, ಉಪಾಧ್ಯಕ್ಷ ಜನಾರ್ದನ ಶೆಟ್ಟಿ, ಆಲಂಕಾರು ವಲಯ ಸಿ.ಆರ್.ಪಿ ಪ್ರದೀಪ್ ಬಾಕಿಲ, ಜೇಸಿರೆಟ್ ಅಧ್ಯಕ್ಷೆ ಮಮತಾ ಅಂಬರಾಜೆ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು. ಸಂಜೆ ಶ್ರೀ ಮಹಾಗಣಪತಿ ದೇವರ ವಿಗ್ರಹದ ಶೋಭಾಯಾತ್ರೆಯು ಶ್ರೀ ಶಾರದಾ ಭಜನಾ ಮಂದಿರದಿಂದ ಹೊರಟು ರಾಜ್ಯ ಹೆದ್ದಾರಿಯಲ್ಲಿ ಸಾಗಿ ಕುಂತೂರಿನ ನದಿಯಲ್ಲಿ ಜಲಸ್ಥಂಭನ ಮಾಡಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.