Home_Page_Advt
Home_Page_Advt
Home_Page_Advt

ದುಷ್ಕರ್ಮಿಗಳಿಂದ ಹತ್ಯೆಯಾದ ಹಿಂ.ಜಾ.ವೇ. ಕಾರ್ಯದರ್ಶಿ ಕಾರ್ತಿಕ್ ಸುವರ್ಣರವರಿಗೆ ಶ್ರದ್ದಾಂಜಲಿ ಸಭೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು:ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹಿಂದು ಜಾಗರಣಾ ವೇದಿಕೆಯ ತಾಲೂಕು ಕಾರ್ಯದರ್ಶಿ ಕಾರ್ತಿಕ್ ಸುವರ್ಣ ಮೇರ್ಲರವರಿಗೆ ಹಿಂದು ಜಾರಗಣಾ ವೇದಿಕೆಯಿಂದ ಶ್ರದ್ದಾಂಜಲಿ ಸಭೆ ಸೆ.6ರಂದು ಸಂಜೆ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ಗಣೇಶೋತ್ಸವದ ವೇದಿಕೆಯಲ್ಲಿ ನಡೆಯಿತು.

ಕಾರ್ತಿಕ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ನುಡಿ ನಮನ ಸಲ್ಲಿಸಿದ ಹಿಂದು ಜಾಗರಣಾ ವೇದಿಕೆ ಪ್ರಾಂತ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ ಮಾತನಾಡಿ. ಶಾಂತಿ, ಸೌಜನ್ಯದ ಪ್ರತಿರೂಪವಾಗಿದ್ದ ಜಾಗರಣಾ ವೇದಿಕೆ ಪ್ರಾಮಾಣಿಕ ಕಾರ್ಯಕರ್ತನ ಹತ್ಯೆ ನಡೆಸಿದವರು ರಾಕ್ಷಸಿ ಪ್ರವೃತ್ತಿಯವರು. ಹಿಂದು ಸಮಾಜಕ್ಕಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಕಾರಣಕ್ಕೆ ವರ್ಷದ ಹಿಂದೆ ಯಾವುದೋ ಪ್ರಕರಣದಲ್ಲಿ ಕಾರ್ತಿಕ್‌ನನ್ನು ಸೇರಿಸಲಾಗಿದೆ. ಅಮಾಯಕರನ್ನು ಪೊಲೀಸ್ ಇಲಾಖೆ ಪ್ರಕರಣದಲ್ಲಿ ಸೇರಿಸಿಕೊಳ್ಳುವುದರಿಂದ ಅಮಾಯಕರ ಜೀವ ಬಲಿಯಾಗುತ್ತದೆ ಎನ್ನುವುದಕ್ಕೆ ಕಾರ್ತಿಕ್ ನಿದರ್ಶನ ಎಂದರು. ಸಮಾಜದಲ್ಲಿ ಅಕ್ರಮ ಚಟುವಟಿಕೆ, ಸಮಾಜ ಘಾತುಕ ಕೆಲಸಗಳಲ್ಲಿ ಕೆಲವು ಮಂದಿ ಪೊಲೀಸರೂ ಶಾಮೀಲಾಗುತ್ತಿದ್ದಾರೆ. ಇದರಿಂದ ಪೊಲೀಸ್ ಇಲಾಖೆಗೆ ಕಳಂಕ ಉಂಟಾಗಲಿದ್ದು ಇದರ ಬಗ್ಗೆ ಇಲಾಖೆ ಎಚ್ಚೆತ್ತುಕೊಳ್ಳಬೇಕು ಎಂದವರು ಹೇಳಿದರು.

ಧರ್ಮಕ್ಕಾಗಿ ದುಡಿದ ಪ್ರಾಮಾಣಿಕ ಕಾರ್ಯಕರ್ತನ ಹತ್ಯೆಯಾಗಿದ್ದು ಸರಿಯಾದ ನ್ಯಾಯ ಸಿಗಬಹುದು ಎಂಬ ನಿರೀಕ್ಷೆ ನಮಗಿಲ್ಲ. ಗಣೇಶೋತ್ಸವದಂದು ಕಾರ್ತಿಕ್‌ನ ಹತ್ಯೆಯಾಗಿದ್ದು ಮಹಾಲಿಂಗೇಶ್ವರನೇ ಸೂಕ್ತ ಶಿಕ್ಷೆ ನೀಡಲಿ. ಕಾರ್ತಿಕ್ ಹತ್ಯೆಯಂತಹ ಘಟನೆಗಳು ಮತ್ತೆ ಮರುಕಳಿಸಬಾರದು. ಇದಕ್ಕಾಗಿ ಮುಂದಿನ ಗಣೇಶೋತ್ಸವದ ಒಳಗಾಗಿ ಹಂತಕರಿಗೆ ಶಾಶ್ವತ ಅಂಗವಿಕಲತೆಯಂತಹ ಶಿಕ್ಷೆಯಾಗುವಂತೆ ಮಹಾಲಿಂಗೇಶ್ವರನಲ್ಲಿ ಪ್ರಾರ್ಥಿಸಲಾಗುವುದು ಎಂದ ಅವರು, ಹಂತಕರ ಪರವಾಗಿ ಯಾವೊಬ್ಬ ನ್ಯಾಯವಾದಿಗಳೂ ವಾದಿಸಬಾರದು. ಜನಪ್ರತಿನಿಧಿಗಳು ಹಾಗೂ ಸಂಘ, ಸಂಸ್ಥೆಗಳೂ ಹಂತಕರಿಗೆ ಬೆಂಬಲವಾಗಿ ಸಹಕರಿಸದಂತೆ ಅವರು ವಿನಂತಿಸಿದರು.

ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲು ಮಾತನಾಡಿ, ಸಮಾಜದ ಜ್ಯೋತಿಯೊಂದನ್ನು ಕಳೆದುಕೊಂಡಿದ್ದೆವೆ. ಇಂತಹ ಅಮೂಲ್ಯ ರತ್ನವನ್ನು ಹತ್ಯೆ ಮಾಡಿದ ಹಂತಕರಿಗೆ ಯಾರು ಸಹಕಾರ ಬೆಂಬಲ ನೀಡಬಾರದು. ಹಂತಕರಿಗೆ ಉಗ್ರ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು. ಸಮಾಜದ ಔನ್ನತ್ಯಕ್ಕಾಗಿ ದುಡಿದ ಕಾರ್ಯಕರ್ತನ ನೆನಪು ನಿರಂತರವಾಗಿಲಿ. ಮಗನನ್ನು ಕಳೆದುಕೊಂಡ ಕುಟುಂಬದವರಿಗೆ ತಾಲೂಕು ಬಿಲ್ಲವ ಸಂಘದಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಅವರು ಹೇಳಿದರು.
ಬಜರಂಗದಳ ಪ್ರಾಂತ ಸಹಸಂಚಾಲಕ ಮುರಳಿಕೃಷ್ಣ ಹಸಂತಡ್ಕ ಮಾತನಾಡಿ, ತಾಲೂಕು ಕಾರ್ಯದರ್ಶಿಯಾಗಿ ಹಿಂದು ಜಾಗರಣಾ ವೇದಿಕೆಯಲ್ಲಿ ಚಾಲಕನ ರೀತಿಯಲ್ಲಿ ಕಾರ್ತಿಕ್ ಕಾರ್ಯನಿರ್ವಹಿಸಿದ್ದಾರೆ. ಅಲ್ಪ ಸಮಯದ ಜೀವಿತಾವಧಿಯಲ್ಲಿ ಹಿಂದು ಸಮಾಜಕ್ಕೆ ಪ್ರೇರಣೆಯ ಶಕ್ತಿಯಾಗಿ ಸಂಘಟನೆಯ ಉನ್ನತಿಗೆ ಶ್ರಮಿಸಿದ್ದಾರೆ. ಇಂತಹ ಪ್ರಾಮಾಣಿಕ ನಿಷ್ಕಳಂಕ ಮನೋಭಾವದ ವ್ಯಕ್ತಿಯನ್ನು ಹತ್ಯೆ ಮಾಡಿದವರು ರಾಕ್ಷಸ ಪ್ರವೃತ್ತಿಯುಳ್ಳವರು. ಗಣೇಶೋತ್ಸವ ಕಾರ್ಯಕ್ರಮದಲ್ಲಿಯೇ ಪ್ರಾಮಾಣಿಕ ಕಾರ್ಯಕರ್ತನ ರಕ್ತ ಅರ್ಪಣೆಯಾಗಿದೆ. ಅವರ ಸಾವಿಗೆ ಸೂಕ್ತ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಮಂಡಲದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ನಿಷ್ಕಳಂಕ, ಪ್ರಾಮಾಣಿಕ ವ್ಯಕ್ತಿಯಾಗಿದ್ದ ಕಾರ್ತಿಕ್‌ನ ಹತ್ಯೆ ನಡೆಸಿದ ಹಂತಕರಿಗೆ ಯಾರೂ ಸಹಕಾರ, ಪ್ರೋತ್ಸಾಹ ನೀಡಬಾರದು. ಅವರಿಗೆ ಕಠಿಣ ಶಿಕ್ಷೆಯಾಗಬೇಕು. ಹಿಂದು ಸಮಾಜಕ್ಕಾಗಿ ಉತ್ತಮ ಕನಸುಗಳು ಕಾರ್ತಿಕ್‌ನಲ್ಲಿತ್ತು. ಅವರ ಕನಸುಗಳನ್ನು ನನಸಾಗಿಸಲು ಮುಂದುವರಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಗಣೇಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಹಿಂದು ಸಮಾಜಕ್ಕಾಗಿ ಪ್ರಾಮಾಣಿಕವಾಗಿ ದುಡಿದ ಕಾರ್ತಿಕ್‌ನ ಶ್ರಮಕ್ಕೆ ಕಾರ್ತಿಕ್ ಮಾತ್ರ ಸಾಟಿ. ಅವರಂತಹ ವ್ಯಕ್ತಿತ್ವವನ್ನು ಬೇರೆ ಯಾರಲ್ಲೂ ಕಾಣಲು ಸಾಧ್ಯವಿಲ್ಲ. ಅಂತಹ ಅಮೂಲ್ಯ ರತ್ನವನ್ನು ದುಷ್ಕರ್ಮಿಗಳು ಇರಿದು ಹತ್ಯೆ ಮಾಡಿದ್ದಾರೆ. ಮೃತನ ಕುಟುಂಬಕ್ಕೆ ಆರ್ಥಿಕ ಸಹಕಾರ ನೀಡುವ ನಿಟ್ಟಿನಲ್ಲಿ ಉಸ್ತುವಾರಿ ಸಚಿವರ ಗಮನಕ್ಕೂ ತರಲಾಗುವುದು. ಅಲ್ಲದೆ ದೇಣಿಗೆ ಸಂಗ್ರಹಿಸಿ ದೊಡ್ಡ ಮೊತ್ತವನ್ನು ಕಾರ್ತಿಕ್‌ನ ಕುಟುಂಬಕ್ಕೆ ನೀಡಲಾಗುವುದು ಎಂದರು.ಜಾಗರಣಾ ವೇದಿಕೆಯ ರವಿರಾಜ ಶೆಟ್ಟಿ ಕಡಬ ಮಾತನಾಡಿ, ಅಮಾಯಕ ಕಾರ್ಯಕರ್ತನ ಹತ್ಯೆ ನಡೆಸಿದವರು ಮಾನವ ರೂಪದಲ್ಲಿರುವ ರಾಕ್ಷಸರು. ಹಂತಕರಿಗೆ ಕಠಿಣ ಶಿಕ್ಷೆ ನೀಡುವಂತೆ ಅವರು ಆಗ್ರಹಿಸಿದರು.

ಆದರ್ಶ ಆಸ್ಪತ್ರೆಯ ಡಾ.ಎಂ.ಕೆ ಪ್ರಸಾದ್, ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ ಸದಸ್ಯರಾದ ಸಾಜ ರಾಧಾಕೃಷ್ಣ ಆಳ್ವ, ಹರೀಶ್ ಬಿಜತ್ರೆ, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಹಿಂದು ಜಾಗರಣಾ ವೇದಿಕೆ ಅಧ್ಯಕ್ಷ ಸಚಿನ್ ರೈ ಪಾಪೆಮಜಲು, ಆರ್ಯಾಪು ಗ್ರಾ.ಪಂ ಉಪಾಧ್ಯಕ್ಷ ವಸಂತ ಶ್ರೀದುರ್ಗಾ, ಸದಸ್ಯ ರಮೇಶ್ ರೈ ಡಿಂಬ್ರಿ, ನಗರ ಸಭಾ ಸದಸ್ಯ ಜೀವಂಧರ್ ಜೈನ್, ಮಾಜಿ ಸದಸ್ಯ ರಾಜೇಶ್ ಬನ್ನೂರು, ಮುಂಡೂರು ಗ್ರಾ.ಪಂ ಸದಸ್ಯ ಅಶೋಕ್ ಕುಮಾರ್ ಪುತ್ತಿಲ, ಚಂದ್ರಶೇಖರ ರಾವ್ ಬಪ್ಪಳಿಗೆ, ನಿತೀಶ್ ಶಾಂತಿವನ, ಶಶಿಧರ ಕಿನ್ನಿಮಜಲು, ರಾಜೇಶ್ ರೈ ಪರ್ಪುಂಜ, ಚಿನ್ಮಯ ರೈ, ನವೀನ್ ಪಡ್ನೂರು, ಧನ್ಯಕುಮಾರ್ ಬೆಳಂದೂರು, ಶ್ರೀಧರ ತೆಂಕಿಲ, ಹರೀಶ್ ದೋಳ್ಪಾಡಿ ಸೇರಿದಂತೆ ನೂರಾರು ಮಂದಿ ಸಭೆಯಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.