HomePage_Banner
HomePage_Banner
HomePage_Banner
HomePage_Banner

‘ಸುದ್ದಿ ಕೃಷಿಕರ ಬಳಿಗೆ’ ಸಾವಯವ ಕೃಷಿ ಜಾಗೃತಿ ಅಭಿಯಾನ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

ರೈತರೊಂದಿಗೆ ಸಾವಯವ ಸಂವಾದ, ಸಾವಯವ ಅರಿವು ತರಬೇತಿ ಕಾರ್‍ಯಕ್ರಮಕ್ಕೆ ಚಾಲನೆ

 • ರೈತರಿಗಾಗಿ ರೈತರಿಂದ ಸ್ಥಾಪಿತ ಸಂಸ್ಥೆಯಾಗಿದೆ -ಸಿ.ಎಂ.ಎನ್. ಶಾಸ್ತ್ರಿ
                              
 • ರೈತ ಪರ ಸಂಸ್ಥೆ – ಉಮೇಶ ಅಡಿಗ
                             
 • ರೈತರ ಪ್ರಯೋಗವನ್ನು ಬೆಳಕಿಗೆ ತರುವ ಕೆಲಸವಾಗಬೇಕು – ಡಾ.ನರೇಂದ್ರ ರೈ
                              
 • ಕೃಷಿಕರ ಪರವಾಗಿ ನಿಲ್ಲುತ್ತೇವೆ   -ಡಾ. ಯು.ಪಿ.ಶಿವಾನಂದ
                            
 • ಹೊಸ ಪರಿಕಲ್ಪನೆಗೆ ನಾಂದಿ ಹಾಡಿರುವುದು ಶ್ಲಾಘನೀಯ -ರವಿಶಂಕರ್
                             

ಪುತ್ತೂರು: ಬೆಂಗಳೂರಿನ ಫಲದ ಫೌಂಡೇಷನ್ ಪ್ರೈ ಲಿ.ನ ಸಹಯೋಗದೊಂದಿಗೆ ಸುದ್ದಿ ಬಿಡುಗಡೆ ಪ್ರಾರಂಭಿಸಲು ಉದ್ದೇಶಿಸಿರುವ ‘ಸುದ್ದಿ ಕೃಷಿಕರ ಬಳಿಗೆ’ ಸಾವಯವ ಕೃಷಿ ಜಾಗೃತಿ ಅಭಿಯಾನ ಪುತ್ತೂರು, ಬೆಳ್ತಂಗಡಿ, ಸುಳ್ಯ ಮತ್ತು ಕಡಬ ತಾಲೂಕಿನ ಆಸಕ್ತ ರೈತರೊಂದಿಗೆ ಸಾವಯವ ಸಂವಾದ ಹಾಗೂ ಸಾವಯವ ಅರಿವು ತರಬೇತಿಯ ಉದ್ಘಾಟನೆ ಸೆ.7ರಂದು ಪುತ್ತೂರು ದೇವಣ್ಣ ಕಿಣಿ ಬಿಲ್ಡಿಂಗ್‌ನಲ್ಲಿರುವ ಸುದ್ದಿ ಶಿಕ್ಷಣ ತರಬೇತಿ ಕೇಂದ್ರದಲ್ಲಿ ನಡೆಯಿತು.

ರೈತರಿಗಾಗಿ ರೈತರಿಂದ ಸ್ಥಾಪಿತ ಸಂಸ್ಥೆಯಾಗಿದೆ-ಸಿ.ಎಂ.ಎನ್. ಶಾಸ್ತ್ರಿ: ಕಾರ್‍ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಫಲದ ಆಗ್ರೋ ರೀಸರ್ಚ್ ಫೌಂಡೇಷನ್ ಪ್ರೈ ಲಿ.ನ ಅಧ್ಯಕ್ಷರಾದ ಸಿ.ಎಂ.ಎನ್. ಶಾಸ್ತ್ರಿಯವರು ಮಾತನಾಡಿ, ನಮ್ಮ ಸಂಸ್ಥೆಯನ್ನು 1999ರಲ್ಲಿ ಸ್ಥಾಪಿಸಲಾಯಿತು. ಇದು ಸರಕಾರೇತರ ಸಂಸ್ಥೆಯಾಗಿದ್ದು, ರೈತರಿಗಾಗಿ ರೈತರಿಂದ ಸ್ಥಾಪಿತವಾಗಿದೆ. ಸಂಸ್ಥೆ ಸಮಾಜಮುಖಿ ಪರಿಕಲ್ಪನೆಯನ್ನು ಹೊಂದಿದೆ. ಸಾವಯವ ಕೃಷಿಗೆ ಸರಕಾರದಿಂದಲೂ ಸಹಕಾರ ಇದೆ ಎಂದು ಹೇಳಿದರು.

ರೈತ ಪರ ಸಂಸ್ಥೆ- ಉಮೇಶ ಅಡಿಗ: ಮುಖ್ಯ ಭಾಷಣ ಮಾಡಿದ ಫಲದ ಆಗ್ರೋ ರೀಸರ್ಚ್ ಫೌಂಡೇಷನ್ ಪ್ರೈ ಲಿ.ನ ತಾಂತ್ರಿಕ ನಿರ್ದೇಶಕ ಉಮೇಶ ಅಡಿಗರವರು, ಪಲದ ಆಗ್ರೋ ರೀಸರ್ಚ್ ಫೌಂಡೇಷನ್ ರೈತರಿಗೆ ಉತ್ತಮ ಇಳುವರಿ, ಉತ್ತಮ ಧಾರಣೆ ಪಡೆಯಲು ಸಹಕಾರ ನೀಡುತ್ತಿದೆ. ಇದಕ್ಕಾಗಿ ರೈತರಿಗೆ ಜೈವಿಕ ತಂತ್ರಜ್ಞಾನದ ಅರಿವು ಮೂಡಿಸುವುದು, ಉತ್ತಮ ಧಾರಣೆ ಪಡೆಯಲು ಸಹಕಾರ, ನ್ಯಾಯ ಸಮ್ಮತ ಮಾರಾಟ ವ್ಯವಸ್ಥೆಯನ್ನು ಫಲದ ಮಾಡುತ್ತಿದೆ. ಸಂಸ್ಥೆ ರಾಜ್ಯದಲ್ಲಿ 27 ರೈತರ ಗುಂಪನ್ನು ಹೊಂದಿದೆ. ಅಲ್ಲದೆ ತಮಿಳುನಾಡು, ಗುಜರಾತ್, ಛತ್ತಿಸ್‌ಗಡ್, ಜಮ್ಮು ಕಾಶ್ಮೀರ ಮುಂತಾದ ಕಡೆಯೂ ರೈತರ ಗುಂಪನ್ನು ಹೊಂದಿದೆ. ವೆನಿಲ್ಲಾ, ಪಚ್ಚೆ ತೆನೆ, ಚೆಕ್ಕೆ, ಲವಂಗ, ಎಳೆ ಹಲಸು(ಗುಜ್ಜೆ), ಜಾಯಿ ಕಾಯಿ, ತುಳಸಿ ಮುಂತಾದ ಸಾವಯುವ ಕೃಷಿ ಉತ್ಪನ್ನಗಳನ್ನು ಸಂಸ್ಥೆ ಖರೀದಿಸಿ ಅದನ್ನು ಸಂಸ್ಕರಿಸಿ ರಫ್ತು ಮಾಡುತ್ತಿದೆ ಎಂದು ಅವರು ತಿಳಿಸಿದರು.

ರೈತರ ಪ್ರಯೋಗವನ್ನು ಬೆಳಕಿಗೆ ತರುವ ಕೆಲಸವಾಗಬೇಕು- ಡಾ.ನರೇಂದ್ರ ರೈ: ಸಾವಯವ ಸಂವಾದ ನಿರ್ವಾಹಣೆ ಮಾಡಿದ ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥರಾದ ಡಾ| ನರೇಂದ್ರ ರೈ ದೇರ್ಲರವರು, ಹಳ್ಳಿಗಳಲ್ಲಿ ರೈತರು ಅನೇಕ ಚಿಕ್ಕ ಪುಟ್ಟ ಪ್ರಯೋಗಗಳನ್ನು ಮಾಡುತ್ತಾರೆ. ಅದನ್ನು ಬೆಳಕಿಗೆ ತರುವ ಕೆಲಸ ಮಾಡಬೇಕು. ಸಾವಯವ ಕೃಷಿ ಜೊತೆ ಆರೋಗ್ಯದ ಜಾಗೃತಿಯನ್ನೂ ಮೂಡಿಸಬೇಕು. ಸಾವಯವ ಕೃಷಿ ವಿಚಾರ ಪಠ್ಯ ಪುಸ್ತಕದ ಒಳಗಡೆ ಸೇರಬೇಕು ಎಂದು ಹೇಳಿದರು.

ಕೃಷಿಕರ ಪರವಾಗಿ ನಿಲ್ಲುತ್ತೇವೆ-ಡಾ. ಯು.ಪಿ.ಶಿವಾನಂದ: ಸಭೆಯ ಅಧ್ಯಕ್ಷತೆ ವಹಿಸಿದ್ದ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದರವರು ಮಾತನಾಡಿ ಹಳ್ಳಿ ಹಳ್ಳಿಯಲ್ಲಿ ಸಾವಯವ ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಲು ಕೇಂದ್ರವನ್ನು ತೆರೆಯುವ ಉದ್ದೇಶ ಇದೆ. ಸುದ್ದಿ ಕೃಷಿಕರ ಪರವಾಗಿ ನಿಲ್ಲುತ್ತದೆ. ಮುಖ್ಯವಾಗಿ ರೈತರಿಗೆ ವಿಶ್ವಾಸ ಬರಬೇಕು ಎಂದರು. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗಿ. ಬಳಿಕ ರೈತರ ಗುಂಪು ಮಾಡಲಾಗುವುದು. ವಾಟ್ಸಪ್ ಗ್ರೂಪ್ ಮೂಲಕ ಮಾಹಿತಿ ಕೊಡಲು ಮತ್ತು ನಿಮ್ಮಿಂದ ಮಾಹಿತಿ ಪಡೆಯಲು ಅನುಕೂಲ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.

ಹೊಸ ಪರಿಕಲ್ಪನೆಗೆ ನಾಂದಿ ಹಾಡಿರುವುದು ಶ್ಲಾಘನೀಯ-ರವಿಶಂಕರ್: ಪ್ರಾಸ್ತಾವಿಕವಾಗಿ ಮಾತನಾಡಿದ ಮಾಧ್ಯಮ ಸಂವಹನಕಾರ ರವಿಶಂಕರ ಬೆಟ್ಟಂಪಾಡಿಯವರು, ಸುದ್ದಿ ಬಿಡುಗಡೆಯಂತ ಗ್ರಾಮೀಣ ಪತ್ರಿಕೆ ಭಾರತದ ಯಾವುದೇ ಜಿಲ್ಲೆ, ತಾಲೂಕು, ರಾಜ್ಯದಲ್ಲಿ ಇಲ್ಲ ಎಂದರು. ಮಾಧ್ಯಮದ ಜೊತೆ ಕೃಷಿಕರ ಬಳಿಗೆ ಹೋಗುವ ಹೊಸ ಪರಿಕಲ್ಪನೆಗೆ ನಾಂದಿ ಹಾಡಿರುವುದು ಶ್ಲಾಘನೀಯವಾದುದು. ಈ ಯೋಜನೆ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.

ಸಂವಾದ: ಸಾವಯವದಲ್ಲಿ ಪರಿಮಾಣ ಇಲ್ಲ. ಅದರಲ್ಲಿ ಮೋಸ ಹೋಗುವ ಅವಕಾಶ ಹೆಚ್ಚಿದೆ ಎಂದು ಡಾ. ನರೇಂದ್ರ ರೈ ಹೇಳಿದರು.
ತಕ್ಷಣ ಯಾವ ಬೆಳೆಯನ್ನು ಬೆಳೆಯಲು ಕೊಡುತ್ತೀರಿ, ನಾವು ಬೆಳೆದ ಉತ್ಪನ್ನಗಳನ್ನು ನೀವು ಪಡೆದುಕೊಳ್ಳುತ್ತೀರಾ ಎಂದು ವೆಂಕಟ್ರಮಣ ಕಳುವಾಜೆ ಪ್ರಶ್ನಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ಪಾದನಾ ವೆಚ್ಚ ಹೆಚ್ಚಿದೆ. ಇಲ್ಲಿ ರೈತರು ಬೆಳೆದ ಉತ್ಪನ್ನಗಳಿಗೆ ಇಲ್ಲಿಯೇ ಮಾರುಕಟ್ಟೆ ತೆರೆದರೆ ಉತ್ತಮ ಎಂದು ಜಿ.ಪಂ.ನಿವೃತ್ತ ಮುಖ್ಯ ನಿರ್ವಾಹಕ ಅಧಿಕಾರಿ ಕೆ. ಸುಂದರ ನಾಯ್ಕರವರು ಸಲಹೆ ನೀಡಿದರು. ಸುಬ್ರಾಯ ಬಿ.ಎಸ್. ಶೆಟ್ಟಿಮಜಲು ಅವರು ಮಾತನಾಡಿ, ಹಲವು ವರ್ಷಗಳಿಂದ ರಾಸಾಯನಿಕ ಗೊಬ್ಬರವನ್ನು ಬಳಕೆ ಮಾಡುತ್ತಿದ್ದ ಕೃಷಿ ಭೂಮಿಗೆ 3ವರ್ಷ ಸಾವಯವ ಗೊಬ್ಬರ ಬಳಸಿದರೆ ಅದು ರಾಸಾಯನಿಕ ಮುಕ್ತ ಭೂಮಿ ಆಗಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಕೃಷಿಕರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಸಿ.ಎಂ.ಎನ್. ಶಾಸ್ತ್ರಿಯವರು, ಸಾವಯವದಲ್ಲಿ ಮೋಸ ಮಾಡುವ ಅವಕಾಶ ಇರಬಹುದು. ಅದರ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಆಗಬೇಕು. ಹಿಂದೆ ಸಾಯವಯ ಗೊಬ್ಬರಕ್ಕೆ ಸರಕಾರದಿಂದ ರೂಲ್ಸ್ ಇರಲಿಲ್ಲ. ಈಗ ಕೆಲವೊಂದು ರೂಲ್ಸ್ ಬಂದಿದೆ. ಮುಂದಿನ ದಿನಗಳಲ್ಲಿ ಇದು ಗ್ರಾಹಕರಿಗೆ ಭದ್ರತೆಯಾಗಬಹುದು ಎಂದರು. ಸಂಸ್ಥೆಯಿಂದ ರೈತರಿಗೆ ಬೇಕಾದ ಬೀಜ ಇನ್ನಿತರ ವಸ್ತುಗಳನ್ನು ಕೊಡಬಹುದು. ಅದನ್ನು ನಮ್ಮ ಸಂಸ್ಥೆಯ ನಿಯಮ ಪ್ರಕಾರ ಬೆಳೆಯಬೇಕು. ಉತ್ಪನ್ನಗಳನ್ನು ಸಂಸ್ಥೆ ಖರೀದಿಸುತ್ತದೆ. ಉತ್ಪಾದನಾ ವೆಚ್ಚದ ಬಗ್ಗೆ ಯಾವ ಬೆಳೆ ಯೋಗ್ಯ ಎಂದು ರೈತರೇ ನಿರ್ಧರಿಸಬೇಕು. ರಾಸಾಯನಿಕಯುಕ್ತ ಭೂಮಿಯನ್ನು 3 ವರ್ಷದಲ್ಲಿ ಸಾವಯವ ಭೂಮಿಯನ್ನಾಗಿ ಪರಿವರ್ತಿಸಬಹುದೆಂದು ಸರಕಾರವೇ ಸಾಬೀತುಪಡಿಸಿದೆ ಎಂದು ಶಾಸ್ತ್ರಿಯವರು ತಿಳಿಸಿದರು.

ಸಭೆಯಲ್ಲಿ ಲಲಿತ ಜಿ. ಭಟ್, ಪಿ. ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು ಕೋಡಿಂಬಾಡಿ, ಎಸ್. ಜಯರಾಜ್ ಸೊರಕೆ, ವಿದ್ಯಾ ಮಂಗಳೂರು, ತುಳಸಿ ಕಡಬ, ಗಣೇಶ್ ಗೌಡ ಕೈಕುರ ಕಡಬ, ಸತೀಶ್ ರೈ ಕರ್ನೂರು, ಭಾಸ್ಕರ ರೈ ಮಂಗಳೂರು, ಎ.ಕೆ. ಜಯರಾಮ ರೈ ಕೆಯ್ಯೂರು, ಎಂ.ಬಿ. ದೇವಿದಾಸ, ಅರುಣ್ ಕುಮಾರ್ ಆನಾಜೆ, ರಾಧಾಕೃಷ್ಣ, ಪಿ. ಶಂಭು ಶರಳಾಯ, ಕೆ. ಶಂಕರ ನಾರಾಯಣ ಶಾಸ್ತ್ರಿ, ಭವಾನಿ ಶಂಕರ್, ಕೆ. ಕೇಶವ ನಾಯ್ಕ ಕಜೆ ಬೆಟ್ಟಂಪಾಡಿ, ರಘುರಾಮ ಕೆ.ಆರ್. ಕಬಕ, ನಾರಾಯಣ ಎಲಿಕ ನರಿಮೊಗರು, ಖಾದರ್ ಸಾಹೇಬ್ ಕಲ್ಲುಗುಡ್ಡೆ, ತಿಮ್ಮಪ್ಪ ಗೌಡ ಕೆ. ಕೊಳತ್ತು ಮನೆ, ಬಿ. ಸೋಮಪ್ಪ ಗೌಡ ಬಡಾವು, ದಿನಕರ ರೈ ಪುಣಚ, ಕೆ. ಸತೀಶ್ ಕುಮಾರ್ ಕೊಳ್ತಿಗೆ, ಸ್ವಸ್ತಿಕ್ ಕುಮಾರ್ ಬೆಳಿಯೂರುಕಟ್ಟೆ, ರಾಧಾಕೃಷ್ಣ ಕೆ, ಸುಧಾಕರ ಕಾಣಿಯೂರು, ಕೆ. ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ, ಕೆ. ಸಂತೋಷ್ ಕುಮಾರ್, ಡಾ. ಶ್ರೀಕುಮಾರ್ ಈಶ್ವರಮಂಗಲ, ಅನ್ನಪೂರ್ಣ ಎನ್. ಭಟ್ ಬಡಗನ್ನೂರು, ಶರತ್ ಕುಮಾರ್ ರೈ ಕಾವು, ವೆಂಕಟಕೃಷ್ಣ, ಅನುರಾಗ್, ಸುಭಾಸ್ ಎಂ. ಈಶ್ವರಮಂಗಲ, ಜಗನ್ನಾಥ ಶೆಟ್ಟಿ ಈಶ್ವರಮಂಗಲ, ಸಿ.ಹೆಚ್. ಸದಾನಂದ ಕೊಳ್ತಿಗೆ, ಸತ್ಯನಾರಾಯಣ, ಎಂ.ಡಿ. ವಿಜಯ ಕುಮಾರ್ ಮಡಪ್ಪಾಡಿ ಸುಳ್ಯ, ವಿನೂಪ್ ಪಿ.ಕೆ., ರಾಮಚಂದ್ರ ಕೆ. ಕೆಮ್ಮಿಂಜೆ, ಎ.ವಿ. ನಾರಾಯಣ ಪುತ್ತೂರು, ಸುನೀಲ್ ಎನ್. ಕಾವು, ಯೂಸುಫ್ ರೆಂಜಲಾಡಿ, ಸಫ್ವಾನ್ ಸವಣೂರು, ಪ್ರಸಾದ್ ನರ್ಸರಿ ಮಾಲಕ ಕೃಷ್ಣ ಪ್ರಸಾದ್ ಕೆದಿಲಾಯ ಶಿಬರ, ಸಂದೀಪ್ ರೈ, ಲೋಕಯ್ಯ ಸಂಪ್ಯಾಡಿ, ಅಮಿತ್ ಚೇತನ್, ದೀಪಕ್ ರಾಜ್ ಭಟ್, ಕುಮಾರ್ ಪೆರ್ನಾಜೆ, ಗೋವಿಂದ ಭಟ್ ಎಸ್. ಪದವು, ದುಗ್ಗಪ್ಪ ಗೌಡ, ಸುಭಾಸ್‌ಚಂದ್ರ ರೈ, ಕಜೆ ಕೃಷ್ಣ ಭಟ್, ಡಾ. ಗಣೇಶ್ ಶಿವರಾಮ ಕಬಕ, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ತಾ.ಪಂ.ಮಾಜಿ ಸದಸ್ಯ ರವಿಕಿರಣ್ ಶೆಟ್ಟಿ ಬೆದ್ರಾಡಿ, ಕೃಷಾ, ವಾರಿಜ ಕೆ.ಕೆ. ಸುಳ್ಯ, ಯಶ್ವಿತ್ ಸುಳ್ಯ, ಕೆ. ಮೋನಪ್ಪ ಪೂಜಾರಿ ಕೆರೆಮಾರು, ಕುಶಾಂತ್ ಸುಳ್ಯ, ಗಣೇಶ್ ಸುಳ್ಯ, ಭಾಗೇಶ್ ಸುಳ್ಯ, ಕೃಷ್ಣಮೂರ್ತಿ ಪುತ್ತೂರು, ಸುದ್ದಿ ಸೌಹಾರ್ದ ಸಹಕಾರಿಯ ಉಪಾಧ್ಯಕ್ಷ ಯು.ಪಿ. ರಾಮಕೃಷ್ಣ, ರಾಜೇಶ್ ಜೈನ್ ಬನ್ನೂರು, ಅಜಿತ್ ಕುಮಾರ್ ಶೆಟ್ಟಿ, ರಾಯಲ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ದಂಬೆಕಾನ ಸದಾಶಿವ ರೈ, ಪಾಣಾಜೆ ಗ್ರಾ.ಪಂ.ಸದಸ್ಯ ವೆಂಕಟ್ರಮಣ ಬೋರ್ಕರ್ ಕತ್ತಲಕಾನ, ಪರಶುರಾಮ, ಪ್ರವೀಣ್ ಕುಮಾರ್ ಕುಂಟ್ಯಾನ, ರಾಮಚಂದ್ರ ಮುಂಡೂರು, ಸಂಜೀವ ಪೂಜಾರಿ ನೆಲ್ಯಾಡಿ, ಮನಮೋಹನ್ ಬೆಟ್ಟಂಪಾಡಿ, ನೆ.ಮುಡ್ನೂರು ಗ್ರಾ.ಪಂ. ಸದಸ್ಯ ರಮೇಶ್ ರೈ ಸಾಂತ್ಯ ಜೆಸಿಐ ರಾಷ್ಟ್ರೀಯ ತರಬೇತುದಾರ ಕೃಷ್ಣಮೋಹನ್ ಭಾಗವಹಿಸಿದ್ದರು.

ಸುದ್ದಿ ಬಿಡುಗಡೆ ಸಿಬ್ಬಂದಿ ಚಿತ್ರಾಂಗಿನಿ ಪ್ರಾರ್ಥಿಸಿದರು. ವರದಿಗಾರ ಸಂತೋಷ್ ಕುಮಾರ್ ಶಾಂತಿನಗರ ಸ್ವಾಗತಿಸಿದರು. ಜಾಹೀರಾತು ವಿಭಾಗದ ಮುಖ್ಯಸ್ಥ ಚಂದ್ರಶೇಖರ ಉಮಿಗದ್ದೆ, ಪ್ರತಿನಿಧಿ ಖಾದರ್ ಸಾಹೇಬ್, ರಾಜೇಶ್ ಎಂ.ಎಸ್., ವರದಿಗಾರ ಹರೀಶ್ ಬಾರಿಂಜ, ಸುದ್ದಿ ಸೌಹಾರ್ದ ಸಹಕಾರಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನರೇಂದ್ರ ಎಂ.ರವರು ಅತಿಥಿಗಳಿಗೆ ಪುಷ್ಪಗುಚ್ಚ ನೀಡಿ ಗೌರವಿಸಿದರು. ಸಿಬ್ಬಂದಿ ಉಮೇಶ್ ಮಿತ್ತಡ್ಕ ಕಾರ್ಯಕ್ರಮ ನಿರ್ವಹಿಸಿದರು.

ಸುದ್ದಿ ಜೊತೆ ನಾವಿದ್ದೇವೆ
ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಡಾ. ಪಿ.ಕೆ.ಎಸ್. ಭಟ್‌ರವರು ಮಾತನಾಡಿ, ಕೃಷಿಕರನ್ನು ಯಾರೂ ಕೇಳುವವರಿಲ್ಲ. ಡಾ. ಶಿವಾನಂದರವರು ನಾಲ್ಕು ತಾಲೂಕಿನ ಕೃಷಿಕರ ಸಹಾಯಕ್ಕೆ ಮುಂದಾಗಿದ್ದಾರೆ. ನಿಮ್ಮ ಹಿಂದೆ ನಾವಿದ್ದೇವೆ. ನಮ್ಮಲ್ಲಿರುವ ಉತ್ತನ್ನಗಳನ್ನು ನಿಮಗೆ ಕೊಡುತ್ತೇವೆ. ಅದಕ್ಕಾಗಿ ಅಲ್ಲಲ್ಲಿ ಸಾವಯವ ಉತ್ಪನ್ನ ಖರೀದಿಯ ಕೇಂದ್ರಗಳನ್ನು ತೆರೆಯಬೇಕು ಎಂದು ಹೇಳಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.